Amruthadhare: ಈ ಎರಡೂ ವಿಚಾರ ಭೂಮಿಕಾಗೆ ಗೊತ್ತಾದ್ರೆ ಏನ್‌ ಮಾಡ್ಬೋದು?

Published : Oct 11, 2025, 12:38 PM IST

Bhoomika Decision in Amruthadhare: ಇದನ್ನೆಲ್ಲಾ ಅಳೆದುತೂಗಿದ ಗೌತಮ್, ಆ ಮಗುವನ್ನ ತಾನು ದತ್ತು ತೆಗೆದುಕೊಳ್ಳುವುದಾಗಿ ಸ್ನೇಹಿತ ಆನಂದನ ಬಳಿ ಹೇಳಿದ್ದಾನೆ. ಅಲ್ಲಿಗೆ ಗೌತಮ್‌ ಮಗಳು ಆಕೆಯ ಕೈ ಸೇರೋದು ಪಕ್ಕಾ ಆಯ್ತು. ಇದೆಲ್ಲಾ ಓಕೆ..ಆದರೆ

PREV
16
ಮಹತ್ವದ ನಿರ್ಧಾರ

ಗೌತಮ್‌ಗೆ ಮನೆಗೆ ಕರೆದುಕೊಂಡಿರುವ ಬಾಲಕಿ ತನ್ನ ಮಗಳು ಎಂಬುದೇ ಗೊತ್ತಿಲ್ಲ. ಹಾಗಾಗಿ ಆ ಹುಡುಗಿಯನ್ನು ಅವರ ಅಪ್ಪ-ಅಮ್ಮನ ಬಳಿ ಬಿಟ್ಟು ಬರೋಣ ಎಂದು ಶತಾಯಗತಾಯ ಟ್ರೈ ಮಾಡ್ತಿದ್ದಾನೆ. ಆದರೀಗ ಪೊಲೀಸರ ಬಾಯಿಂದ ಬಂದ ಉತ್ತರ ಕೇಳಿ ಗೌತಮ್ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾನೆ.

26
ಇನ್ನೋರ್ವ ಪೊಲೀಸ್ ಹೇಳಿದ್ದು ನೆನಪಾಗುತ್ತೆ

ಹೌದು, ಪೊಲೀಸರ ಬಳಿ ಹೋಗಿ ಗೌತಮ್, ಆ ಪುಟ್ಟ ಹುಡುಗಿಯ ಬಗ್ಗೆ ವಿಚಾರಿಸಿದಾಗ ಅವರು "ಈ ಹುಡುಗಿಯನ್ನು ಆ ಮನೆಯಲ್ಲಿ ಬಿಟ್ಟು ಹೋದ ದಂಪತಿ, ಈಕೆ ತನ್ನ ಮಗಳೇ ಅಲ್ಲ, ಸಂಬಂಧವಿಲ್ಲ" ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ. ಆಗ ಇನ್ನೋರ್ವ ಪೊಲೀಸ್ ಹೇಳಿದ್ದು ನೆನಪಾಗುತ್ತದೆ ಗೌತಮ್‌ಗೆ. ಅದೇ ಮಕ್ಕಳ ಕಳ್ಳಸಾಗಾಣಿಕೆ (ಚೈಲ್ಡ್ ಟ್ರಾಫಿಕಿಂಗ್) ಬಗ್ಗೆ.

36
ಅದು ಭೂಮಿಗೆ ಗೊತ್ತಾದ್ರೆ ಏನಾಗುತ್ತೆ?.

ಇದನ್ನೆಲ್ಲಾ ಅಳೆದುತೂಗಿದ ಗೌತಮ್, ಆ ಮಗುವನ್ನ ತಾನು ದತ್ತು ತೆಗದುಕೊಳ್ಳುವುದಾಗಿ ಸ್ನೇಹಿತ ಆನಂದನ ಬಳಿ ಹೇಳಿದ್ದಾನೆ. ಅಲ್ಲಿಗೆ ಗೌತಮ್‌ ಮಗಳು ಆಕೆಯ ಕೈ ಸೇರೋದು ಪಕ್ಕಾ ಆಯ್ತು. ಇದೆಲ್ಲಾ ಓಕೆ..ಆದರೆ ದತ್ತು ವಿಚಾರ ಸೇರಿದಂತೆ, ಇನ್ನೊಂದು ವಿಚಾರವಿದೆ. ಅದು ಭೂಮಿಗೆ ಗೊತ್ತಾದ್ರೆ ಏನಾಗುತ್ತೆ?.

46
ಭೂಮಿಕಾ ಸಹಿ ಬೇಕು

ನಿಮಗೂ ಗೊತ್ತು. ಸಿಕ್ಕಾಪಟ್ಟೆ ಸೂಕ್ಷ್ಮಹೆಣ್ಣಾದ ಭೂಮಿ, ಗೌತಮ್ ಆ ಹುಡುಗಿಯನ್ನ ದತ್ತು ತೆಗೆದುಕೊಂಡ ವಿಚಾರ ಗೊತ್ತಾದ್ರೆ ಏನ್ ಮಾಡ್ತಾಳೆ ಅನ್ನೋದು. ಹಾಗೆಯೇ ಇನ್ನೊಂದು ವಿಚಾರವೆಂದ್ರೆ, ಶಕುಂತಲಾಗೆ ಆಸ್ತಿ ಬೇಕಂದ್ರೆ ಭೂಮಿಕಾ ಸಹಿ ಬೇಕೆಬೇಕೆಂದು ಲಾಯರ್‌ ಹೇಳಿದ್ದಾರೆ.

56
ಸಹಿ ಹಾಕುತ್ತಾಳಾ?

ಇದೇ ಕಾರಣಕ್ಕೆ ರೌಡಿಗಳನ್ನ ಮನೆಗೆ ಕರೆಸಿರುವ ಜೈದೇವ್, ಗೌತಮ್-ಭೂಮಿಕಾಳನ್ನು ಹುಡುಕುವ ಪ್ರಯತ್ನದಲ್ಲಿದ್ದಾನೆ. ಒಂದು ವೇಳೆ ಭೂಮಿಕಾ ಇವರ ಕೈಗೆ ಸಿಕ್ರೆ ಸಹಿ ಹಾಕುತ್ತಾಳಾ? ಎಂಬುದನ್ನ ಕಾದು ನೋಡಬೇಕಿದೆ.

66
ಜೈದೇವ್ ತಂತ್ರ ಮೇಲುಗೈ ಆಗುತ್ತಾ?

ಅಮ್ಮನ ಆಜ್ಞೆ ಪಾಲಿಸುತ್ತಿರುವ ಜೈದೇವ್, ಭೂಮಿಕಾ-ಗೌತಮ್‌ಳನ್ನು ಹುಡುಕುತ್ತಾನಾ ನೋಡಬೇಕಿದೆ. ಇದೆಲ್ಲರ ಮಧ್ಯೆ ವೀಕ್ಷಕರಿಗೆ ಗೌತಮ್‌ ಮತ್ತು ಮಗಳು ಒಂದಾದ ಹಾಗೆ ಇಡೀ ಕುಟುಂಬವು ಒಂದಾಗಬೇಕೆಂದು ಮನದಾಳದ ಆಸೆ. ವೀಕ್ಷಕರ ಆಸೆ ಈಡೇರುತ್ತಾ, ಜೈದೇವ್ ತಂತ್ರ ಮೇಲುಗೈ ಆಗುತ್ತಾ ಎಂಬುದನ್ನ ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.

Read more Photos on
click me!

Recommended Stories