Disha Madan: ಲಕ್ಷ್ಮೀ ನಿವಾಸದ ಅಳುಮುಂಜಿ ಭಾವನಾ... ರೆಡ್ ಡ್ರೆಸಲ್ಲಿ ಸಖತ್ ಹಾಟ್

Published : Oct 10, 2025, 11:20 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲಕ್ಷ್ಮೀ ಶ್ರೀನಿವಾಸರ ಪುತ್ರಿಯಾಗಿ, ಸಿದ್ದೇ ಗೌಡರ ಪತ್ನಿಯಾಗಿ ಅತ್ತೆ, ಮಾವರಿಂದ ಸದಾ ಬೈಸಿಕೊಳ್ಳುತ್ತಾ, ಎಲ್ಲಾ ಸಂದರ್ಭದಲ್ಲೂ ಅಳುತ್ತಾ ಕೂರುವ ಭಾವನಾ, ಆಲಿಯಾಸ್ ದಿಶಾ ಮದನ್ ರಿಯಲ್ ಲೈಫಲ್ಲಿ ಮಾತ್ರ ಸಖತ್ ಸ್ಟೈಲಿಶ್ ಆಗಿದ್ದಾರೆ. ಅವರು ಶೇರ್ ಮಾಡಿರೋ ಹೊಸ ಫೋಟೊ ನೋಡಿ.

PREV
16
ಲಕ್ಷ್ಮೀ ನಿವಾಸ ನಟಿ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ದಿಶಾ ಮದನ್ ಸೀರಿಯಲ್ ನಲ್ಲಿ ಅಳುಮುಂಜಿಯಾಗಿದ್ದರೂ, ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿರುವ ನಟಿ.

26
ದಿಶಾ ಮದನ್

ಕನ್ನಡ ಕಿರುತೆರೆಯ ಜನಪ್ರಿಯ ನಟಿ ದಿಶಾ ಮದನ್. ಇವರು ಕುಲವಧು ಸೀರಿಯಲ್ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಬಳಿಕ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ, ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು.

36
ಸೀರಿಯಲ್ ನಲ್ಲಿ ಅಳುಮುಂಜಿ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ದಿಶಾ ಮದನ್ ಅವರದೂ ತುಂಬಾನೇ ಪಾಪದ ಹುಡುಗಿಯ ಪಾತ್ರ. ಭಾವನಾ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಳುಮುಂಜಿ ಅಂತಾನೆ ಅನ್ನಬಹುದು. ಎಲ್ಲರೂ ಧೂಷಿಸುವವರೇ, ಅದನ್ನು ಕೇಳಿ ಅಳೋದೊಂದೆ ಕೆಲಸ.

46
ರಿಯಲ್ ಲೈಫಲ್ಲಿ ಸ್ಟೈಲಿಶ್

ರಿಯಲ್ ಲೈಫಲ್ಲಿ ದಿಶಾ ಮದನ್ ಸಖತ್ ಸ್ಟೈಲಿಶ್ ಆಗಿದ್ದಾರೆ. ಇದೀಗ ಹೊಸದಾಗಿ ಶೇರ್ ಮಾಡಿರುವ ಫೋಟೊದಲ್ಲಿ ರೆಡ್ ಡ್ರೆಸ್ ಧರಿಸಿದ್ದು, ತುಂಬಾನೆ ಗ್ಲಾಮರಸ್ ಆಗಿ, ಸಖತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ದಿಶಾ ಮದನ್. ಅವರನ್ನ ನೋಡಿದ್ರೆ ಇಬ್ಬರು ಮಕ್ಕಳ ತಾಯಿ ಎಂದು ಹೇಳೋದಕ್ಕೂ ಸಾಧ್ಯವಿಲ್ಲ. ಅಷ್ಟೊಂದು ಸ್ಟೈಲಿಶ್.

56
ರೆಡ್ ಡ್ರೆಸ್ಸಲ್ಲಿ ಹಾಟ್ ಲುಕ್

ದಿಶಾ ಮದನ್ ಕೆಂಪು ಬಣ್ಣದ ಗೌನ್ ನಂತಿರುವ ಡ್ರೆಸ್ ಧರಿಸಿದ್ದು wearing this outfit after a whole yearrrrr! Always a joy wearing my fav ಎಂದು ಬರೆದುಕೊಂಡಿದ್ದಾರೆ. ಮೇಡಮ್ಮೋರೆ ನೀವು ಸೂಪರ್, ನಿಮ್ಮ ಲುಕ್ ಸೂಪರ್ ಎನ್ನುತ್ತಿದ್ದಾರೆ ಜನ.

66
ಭಾಗವಹಿಸಿದ ಕಾರ್ಯಕ್ರಮಗಳು

ದಿಶಾ ಮದನ್ ಅವರು ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸಿದ್ದು, ಡ್ಯಾನ್ಸಿಂಗ್ ಸ್ಟಾರ್ ಡ್ಯಾನ್ಸ್ ರಿಯಾಲಿಟಿ ಶೋ, ಹಂಬಲ್ ಪೊಲಿಟೀಶಿಯನ್ ನೋಗರಾಜ್ ಎನ್ನುವ ವೆಬ್ ಸೀರೀಸ್, ಕುಲವಧು, ಲಕ್ಷ್ಮೀ ನಿವಾಸ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories