ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ, ಸುದೀಪ್ ಅವರ ಬಳಿ 'ರೇವಂತಿ' ಬಗ್ಗೆ ಕೇಳಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ಯಾರೀ ರೇವಂತಿ? ಸುದೀಪ್ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ ಪ್ರಸಂಗ ಏನು? ರೇವಂತಿ ಹೆಸರು ಕೇಳಿ ಸುದೀಪ್ ಕಕ್ಕಾಬಿಕ್ಕಿಯಾಗಿದ್ದು ಏಕೆ?
Bigg Bossನಲ್ಲಿ ಸ್ಪರ್ಧಿ ಮಲ್ಲಮ್ಮ ಹವಾ ಜೋರಾಗಿಯೇ ನಡೆಯುತ್ತಿದೆ. ಇವರು ಮಾತನಾಡುವುದೆಲ್ಲವೂ ತಮಾಷೆಯಾಗಿಯೇ ಇರುತ್ತದೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ತಮಾಷೆ ಮಾಡಿದರೆ, ಮತ್ತೆ ಕೆಲವು ಬಾರಿ ಇವರು ಮಾತನಾಡಿದ್ದು ತಮಾಷೆಯಾಗುತ್ತದೆ. ಇದಕ್ಕೆ ಕಾರಣ ಅವರ ಮುಗ್ಧತೆ.
26
ಮಲ್ಲಮ್ಮನ ಮಾತು ಕೇಳಿ...
ಇದೀಗ ಅವರ ವಿಡಿಯೋ ಒಂದು ವೈರಲ್ ಆಗ್ತಿದೆ. ಅದರಲ್ಲಿ ಸುದೀಪ್ (Sudeep) ಅವರು ಮಲ್ಲಮ್ಮ ಹೇಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮಲ್ಲಮ್ಮ ನಾನು ಚೆನ್ನಾಗಿದ್ದೇನೆ. ನಿಮ್ಮ ರೇವಂತಿ ಚೆನ್ನಾಗಿದ್ಯಾ ಕೇಳಿದ್ದಾರೆ!
36
ಶಾಕ್ ಆದ ಸುದೀಪ್
ಇದನ್ನು ಕೇಳಿ ಸುದೀಪ್ ಶಾಕ್ ಆಗಿದ್ದಾರೆ. ಇದ್ಯಾರು ರೇವಂತಿ? ನನ್ನ ಲೈಫ್ನಲ್ಲಿ ಇನ್ನೂ ಎಂಟ್ರಿ ಕೊಟ್ಟಿಲ್ವಲ್ಲ, ಸದ್ಯಕ್ಕಂತೂ ಯಾವ ರೇವಂತಿನೂ ಇಲ್ವಲ್ಲಾ ಎಂದು ಪ್ರಶ್ನಿಸಿದ್ದಾರೆ. ಇದನ್ನು ಕೇಳಿ ಮಲ್ಲಮ್ಮ ಕೂಡ ಒಂದು ಕ್ಷಣ ಶಾಕ್ ಆಗಿದ್ದಾರೆ.
ಕೊನೆಗೆ ಅಲ್ಲಿದ್ದ ಅಶ್ವಿನಿ ಅದು ರೇವಂತಿ ಅಲ್ಲ ಲೆಮನ್ ಟೀ ಎಂದಿದ್ದಾರೆ. ಆಗ ಸುದೀಪ್ ಮತ್ತು ಮಲ್ಲಮ್ಮ ಇಬ್ಬರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಆದರೂ ಸುದೀಪ್ ತಮಾಷೆ ಮಾಡುತ್ತಾ, ಅದೇ ನೋಡಿದೆ ಯಾರಪ್ಪಾ ಈ ರೇವಂತಿ ಎಂದು ಎನ್ನುತ್ತಾ ಮತ್ತೊಮ್ಮೆ ನಕ್ಕಿದ್ದಾರೆ.
56
ಏರಿದ ಟಿಆರ್ಪಿ
ಅದೇ ಇನ್ನೊಂದೆಡೆ, ‘ಬಿಗ್ ಬಾಸ್’ಗೆ ಸಹಜವಾಗಿ ಟಿಆರ್ಪಿ ಹೆಚ್ಚಾಗಿದ್ದು, ಅದರ ಕುರಿತು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ. ಈ ಸೀಸನ್ ಓಪನಿಂಗ್ಗೆ ಉತ್ತಮ ರೇಟಿಂಗ್ ಸಿಕ್ಕಿದ್ದು, ಅದರ ಪೋಸ್ಟ್ ಶೇರ್ ಮಾಡಲಾಗಿದೆ.
66
12.2 ಟಿವಿಆರ್
ಕಳೆದ ಸೀಸನ್ ಲೆಕ್ಕ ಬೇರೆ, ಈ ಸಲ ಹೊಸ ಲೆಕ್ಕ ಎನ್ನುತ್ತಲೇ ಈ ಮಾಹಿತಿ ಶೇರ್ ಮಾಡಿದೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಈ ಶೋಗೆ ಬರೋಬ್ಬರಿ 12.2 ಟಿವಿಆರ್ ಸಿಕ್ಕಿದೆ. ವಾರದ ದಿನಗಳಲ್ಲಿ 8.2 ಟಿವಿಆರ್ ಸಿಕ್ಕಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಮಾಹಿತಿ ನೀಡಿದೆ.