ಗೌತಮ್ ಮತ್ತು ಭೂಮಿಕಾ ಒಂದಾದರೂ 'ಅಮೃತಧಾರೆ' ಧಾರಾವಾಹಿ ಮುಗಿದಿಲ್ಲ. ತಾಯಿಯ ಮಾತಿನಿಂದ ಪ್ರೇರಿತನಾದ ಗೌತಮ್ ತನ್ನ ಸಾಮ್ರಾಜ್ಯವನ್ನು ಮರುನಿರ್ಮಿಸಲು ಸಿದ್ಧನಾಗಿದ್ದಾನೆ. ಇತ್ತ, ಐಷಾರಾಮಿ ಜೀವನ ನಡೆಸುತ್ತಿರುವ ಜೈದೇವ ಬೀದಿಗೆ ಬೀಳುವ ಲಕ್ಷಣಗಳಿದೆ. ಮುಂದಿದೆ ರೋಚಕ ಸಂಚಿಕೆ
ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್ ಮತ್ತು ಭೂಮಿಕಾ ಒಂದಾಗುವ ಮೂಲಕ ಸೀರಿಯಲ್ ಇನ್ನೇನು ಎಂಡ್ ಆಗತ್ತೆ ಎಂದೇ ಭಾವಿಸಲಾಗಿತ್ತು. ಆದರೆ ಪಿಚ್ಚರ್ ಅಭೀ ಬಾಕಿ ಹೈ ಎನ್ನುವಂತೆ, ಸೀರಿಯಲ್ ಇನ್ನೂ ಮುಂದುವರೆಯುತ್ತಿದೆ.
26
ಕಷ್ಟಪಟ್ಟರೆ ಸುಖ
ಕಷ್ಟಪಟ್ಟು ಮೇಲೆ ಬರುವವರು ಇರುವ ಸ್ವಲ್ಪ ಹಣದಲ್ಲಿಯೇ ದೊಡ್ಡ ಸಾಮ್ರಾಜ್ಯ ನಿರ್ಮಿಸಬಲ್ಲರು, ಬಿಟ್ಟಿಗಾಗಿ ಕಾಯುತ್ತಾ ಕುಳಿತುಕೊಳ್ಳುವವರು ಶ್ರೀಮಂತಿಕೆಯನ್ನು ಬಳುವಳಿಯಾಗಿ ಕೊಟ್ಟರೂ ಕೊನೆಗೆ ಬರುವುದು ರಸ್ತೆಗೇನೇ ಎನ್ನುವ ಮಾತಿನಂತೆ, ಇದೀಗ ಗೌತಮ್ ಮತ್ತೆ ಗೌತಮ್ ದಿವಾನ್ ಆಗುವ ಕಾಲ ಸನ್ನಿಹಿತವಾಗಿದೆ.
36
ಅಮ್ಮನಿಂದ ಬುದ್ಧಿಮಾತು
ಇದೀಗ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ಗೌತಮ್ ಅಮ್ಮ ಭಾಗ್ಯಮ್ಮ, ನೀನು ಎಷ್ಟೋ ಮಕ್ಕಳಿಗೆ ಆಸರೆಯಾದವನು, ಎಷ್ಟೋ ಜನರಿಗೆ ಬೆಳಕಾದವನು. ಮತ್ತೆ ಅದೇ ನಿನ್ನಿಂದ ನಾನು ನಿರೀಕ್ಷಿಸುತ್ತೇನೆ. ಮತ್ತೆ ನೀನು ಮೊದಲಿನಿಂದಲೇ ಆಗಬೇಕು ಎಂದಿದ್ದಾಳೆ.
ಇದನ್ನು ಕೇಳಿ ಗೌತಮ್ಗೆ ಅಮ್ಮನ ಮಾತು ಸರಿ ಎನ್ನಿಸಿದೆ. ಇದನ್ನು ನೋಡಿದರೆ, ಖಂಡಿತವಾಗಿಯೂ ಗೌತಮ್ ಮತ್ತೆ ತನ್ನ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸುವಲ್ಲಿ ಎರಡು ಮಾತೇ ಇಲ್ಲ.
56
ಬೀದಿಗೆ ಬೀಳುವ ಜೈದೇವ?
ಅತ್ತ, ಬಿಟ್ಟಿಯಾಗಿ ಸಿಕ್ಕಿರುವ ಶ್ರೀಮಂತಿಕೆಯಲ್ಲಿ ತೇಲಾಡುತ್ತಿರುವ ಜೈದೇವ, ಐಷಾರಾಮಿ ಜೀವನ ನಡೆಸುತ್ತಾ ಇದ್ದಬಿದ್ದದ್ದನ್ನೆಲ್ಲಾ ಲೂಟಿ ಮಾಡುತ್ತಿದ್ದಾನೆ. ಕೆಲಸ ಮಾಡುವುದನ್ನು ಬಿಟ್ಟು ಮಲ್ಲಿಯ ಜೀವನ ಹಾಳು ಮಾಡಲು ಅವಳ ಹಿಂದೆ ಬಿದ್ದಿದ್ದಾನೆ.
66
ಅಮೃತಧಾರೆಯ ಜೀವನ ಪಾಠ
ಆದ್ದರಿಂದ ಆತ ಮತ್ತೆ ಬೀದಿಗೆ ಬೀಳುವಲ್ಲಿ ಸಂದೇಹವೇ ಇಲ್ಲ. ಈ ಮೂಲಕ ಕಷ್ಟಪಟ್ಟು ದುಡಿದರೆ ಮಾತ್ರ ಮೇಲೆ ಬರಲು ಸಾಧ್ಯ, ಎಲ್ಲವನ್ನೂ ಬಿಟ್ಟಿಯಾಗಿ ಕೊಡಲಿ ಎನ್ನುವ ಜನರು ಹಾಗೆಯೇ ಇದ್ದುಬಿಡುತ್ತಾರೆ ಎನ್ನುವುದನ್ನು ತೋರಿಸಲು ಮುಂದಾಗಿದೆ ಅಮೃತಧಾರೆ ಸೀರಿಯಲ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.