Karna Serial: ರಮೇಶ್​ಗೆ ಮಣ್ಣು ಮುಕ್ಕಿಸಿದ ಕರ್ಣ- ನಿತ್ಯಾ ಹೆಸರಿಗೆ 3 ಕೋಟಿ ಆಸ್ತಿ ವರ್ಗಾವಣೆ ಆಗೋಯ್ತು?

Published : Feb 09, 2026, 06:51 PM IST

ಕರ್ಣ ಸೀರಿಯಲ್‌ನಲ್ಲಿ ಕಥೆ ರೋಚಕ ಹಂತ ತಲುಪಿದೆ. ತನ್ನನ್ನು ಮದುವೆ ನೋಂದಣಿ ಪತ್ರದ ಮೂಲಕ ಸಿಕ್ಕಿಹಾಕಿಸಲು ಯತ್ನಿಸಿದ ರಮೇಶ್‌ಗೆ, ಕರ್ಣನು ಆಸ್ತಿ ವರ್ಗಾವಣೆಯ ಮೂಲಕವೇ ತಿರುಗೇಟು ನೀಡಿದ್ದಾನೆ. ಅಂತಿಮವಾಗಿ ಆಸ್ತಿಯನ್ನು ನಿತ್ಯಾ ಹೆಸರಿಗೆ ಬರೆಯಲು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಾನೆ.

PREV
16
ರೋಚಕ ತಿರುವು

ಕರ್ಣ ಸೀರಿಯಲ್​ (Karna Serial) ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಇದಾಗಲೇ ಕರ್ಣ, ಎಲ್ಲಾ ಸಿಟ್ಟುಗಳನ್ನು ಬಡ್ಡಿ ಸಹಿತ ರಮೇಶ್​ನಿಂದ ತೀರಿಸಿಕೊಳ್ಳುತ್ತಿದ್ದಾನೆ.

26
ರಮೇಶ್​ ಕುತಂತ್ರ

ಕರ್ಣ ಮತ್ತು ನಿತ್ಯಾ ಮದುವೆಯಾಗಿಲ್ಲ ಎನ್ನುವ ಸತ್ಯ ತಿಳಿದಿದ್ದರಿಂದ ರಮೇಶ್​, ಅವರಿಗೆ ಟಾರ್ಚರ್​ ಕೊಡುವ ಸಂಬಂಧ ಮದುವೆಯ ನೋಂದಣಿ ಪತ್ರಕ್ಕೆ ಸಹಿ ಹಾಕಲು ಹೇಳಿದ್ದ. ಇದು ಯಾಕೆ ಎಂದು ಕೇಳಿದಾಗ, ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಬೇಕಿತ್ತು. ಅದಕ್ಕಾಗಿ ಎಂದಿದ್ದ.

36
ಕರ್ಣ ತಿರುಗೇಟು

ಆದರೆ, ಕರ್ಣ ಸಕತ್​ ಪ್ಲ್ಯಾನ್​ ಮಾಡಿ ಮದುವೆಯ ನೋಂದಣಿ ಪತ್ರಕ್ಕೆ ನಿತ್ಯಾಳ ನಕಲಿ ಸಹಿ ಹಾಕಿಸಿದ್ದ. ಇದು ರಮೇಶ್​ಗೆ ಗೊತ್ತೇ ಆಗಲಿಲ್ಲ. ನೋಂದಣಿ ಪತ್ರಕ್ಕೆ ಇಷ್ಟು ಸುಲಭದಲ್ಲಿ ಸಹಿ ಹಾಕಿದ್ದು ನೋಡಿ ರಮೇಶ್​ ಕಕ್ಕಾಬಿಕ್ಕಿಯಾಗಿದ್ದ.

46
ಆಸ್ತಿ ವರ್ಗಾವಣೆ

ಆದರೆ, ಇಷ್ಟಕ್ಕೇ ಕರ್ಣ ಬಿಡ್ತಾನಾ? ರಮೇಶ್​ಗೆ ಆಸ್ತಿ ವರ್ಗಾವಣೆ ಮಾಡವಂತೆ ಪಟ್ಟು ಹಿಡಿದಿದ್ದಾನೆ. ಈಗ ನೀವೆಲ್ಲಾ ಸುಸ್ತಾಗಿರುತ್ತೀರಿ. ನಾಳೆ ಮಾಡಿದ್ರೆ ಆಯ್ತು ಬಿಡು ಎಂದು ರಮೇಶ್​ ಹೇಳಿದ್ರೆ, ಹೀಗೇ ಆಗುತ್ತದೆ ಎಂದು ಗೊತ್ತಿದ್ದ ಕರ್ಣ, ಮೊದಲೇ ಪ್ರಾಪರ್ಟಿ ವರ್ಗಾವಣೆಗೆ ಸಂಬಂಧಪಟ್ಟವರನ್ನು ಮನೆಗೇ ಕರೆಸಿಬಿಟ್ಟಿದ್ದ.

56
ತಲೆ ತಿರುಗೋದು ಬಾಕಿ

ಅವರನ್ನು ನೋಡಿ ರಮೇಶ್​ ತಲೆ ತಿರುಗೋದು ಒಂದೇ ಬಾಕಿ. ಬಂದವರು ಮೂರು ಕೋಟಿ ಹಣವನ್ನು ವರ್ಗಾವಣೆ ಮಾಡಿದರೆ ಪ್ರೊಸೀಜರ್​ ಮುಗಿಯುತ್ತದೆ ಎಂದಾಗ, ಅಲ್ಲೊಂದು ತಲೆ ಉಪಯೋಗಿಸಿದ ರಮೇಶ. ಇವತ್ತು ಮ್ಯಾಕ್ಸಿಮಮ್​ ಲಿಮಿಟ್​ ದಾಟಿ ಬಿಟ್ಟಿದೆ. ಇನ್ನೊಂದೆರಡು ದಿನ ಬಿಟ್ಟು ಕೊಡುತ್ತೇನೆ ಎಂದಾಗ, ಸುಮ್ಮನಾಗದ ಕರ್ಣ, ಚೆಕ್​ ಕೊಟ್ಟುಬಿಡಿ ಅಪ್ಪ ಎಂದ.

66
ನಿತ್ಯಾ ಹೆಸರಿಗೆ ಆಸ್ತಿ

ಕೊನೆಗೆ ಯಾರ ಹೆಸರಿಗೆ ಆಸ್ತಿ ಮಾಡಬೇಕು ಎಂದಾಗ ಹಿಂದೆ ಮುಂದೆ ಯೋಚಿಸದ ಕರ್ಣ ನಿತ್ಯಾ ಹೆಸರಿಗೆ ಎಂದಾಗ, ನಿತ್ಯಾಗೆ ಫುಲ್​ ಶಾಕ್​ ಆಗೋಯ್ತು. ಮುಂದೇನಾಗತ್ತೆ ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories