ಅಮೃತಧಾರೆ ಧಾರಾವಾಹಿಯಲ್ಲಿ ದೀಪಿಕಾ, ಶಕುಂತಲಾಳ ಮಾತಿನಂತೆ ಜೈದೇವನನ್ನು ಕ್ಷಮಿಸಿ ಮನೆಗೆ ಕರೆತಂದಿದ್ದಾಳೆ. ಇದು ಮನೆಯವರಿಗೆಲ್ಲಾ ಅಚ್ಚರಿ ಮೂಡಿಸಿದೆ. ಆದರೆ ಅಸಲಿ ಭೂಮಿಕಾ ಏನಾದಳು ಎಂಬ ಕುತೂಹಲ ಮೂಡಿದೆ.
ಅಮೃತಧಾರೆ ಸೀರಿಯಲ್ (Amruthadhaare Serial) ಸದ್ಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಭೂಮಿಕಾ ಮತ್ತು ದೀಪಿಕಾ ಎದುರು ಬದುರಾದರೂ, ಶಕುಂತಲಾಗೆ ಅದನ್ನು ತಿಳಿಸಿದ್ದ ದೀಪಿಕಾ, ಅಲ್ಲಿಯೇ ಎಲ್ಲವನ್ನೂ ಸೆಟ್ಲ್ ಮಾಡಿಬಿಟ್ಟಿದ್ದಾಳೆ.
26
ಜೈದೇವನ ಬಗ್ಗೆ ದೀಪಿಕಾ
ಮನೆಗೆ ಬಂದಿರೋ ದೀಪಿಕಾ, ಶಕುಂತಲಾ ಹೇಳಿಕೊಟ್ಟಂತೆಯೇ, ಜೈದೇವನನ್ನು ಕ್ಷಮಿಸಿ ಆತನನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಮಾತನಾಡಿದ್ದಾಳೆ.
36
ಎಲ್ಲರಿಗೂ ಶಾಕ್
ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಭೂಮಿಕಾ ಮೇಲೆ ಡೌಟ್ ಬರಲಿಲ್ಲ ಎನ್ನುವುದೇ ಅಚ್ಚರಿಯ ವಿಷ್ಯವಾದರೂ ಸೀರಿಯಲ್ ಆಗಿರುವ ಕಾರಣ ಇದನ್ನು ಹಾಗೆಯೇ ನೋಡಿಕೊಂಡು ಹೋಗಬೇಕಷ್ಟೇ.
ಅದೇ ರೀತಿ, ಜೈದೇವನೇ ನನ್ನ ಪ್ರಾಣ ಉಳಿಸಿದ ಎಂದಿರುವ ದೀಪಿಕಾ, ಭೂಮಿಕಾ ಆಗಿ ಜೈದೇವನನ್ನು ಮನೆಗೆ ಬರಮಾಡಿಕೊಂಡಿದ್ದಾಳೆ.
56
ಜೈದೇವ ಸದ್ಯ ಸಕ್ಸಸ್
ಅಂತೂ ಜೈದೇವ ಸದ್ಯ ಸಕ್ಸಸ್ ಆಗಿದ್ದಾನೆ. ಅವನನ್ನು ಖುದ್ದು ದೀಪಿಕಾಳೇ ಆರತಿ ಮಾಡಿ ಮನೆ ತುಂಬಿಸಿಕೊಂಡಿದ್ದಾಳೆ. ಈ ಬೆಳವಣಿಗೆ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದರೂ, ಭೂಮಿಕಾ ಹೀಗೆ ಏಕೆ ಮಾಡಿದಳು ಎಂದು ಕೇಳಲು ಹೋಗಲಿಲ್ಲ.
66
ಭೂಮಿಕಾ ಕಥೆ ಏನಾಯ್ತು
ಒಟ್ಟಿನಲ್ಲಿ ರಿಯಲ್ ಭೂಮಿಕಾ ಕಥೆ ಏನಾಯ್ತು ಎಂದು ನೋಡಬೇಕಿದೆ. ದೀಪಿಕಾ ಆಕೆಗೆ ಏನು ಮಾಡಿದಳು ಎನ್ನುವುದು ಸದ್ಯಕ್ಕಿರುವ ಕುತೂಹಲ. ಭೂಮಿಕಾ ಮನೆಗೆ ಬರ್ತಾಳಾ? ದೀಪಿಕಾಗೆ ಶಕುಂತಲಾ ಮತ್ತು ಜೈದೇವನ ಕುತಂತ್ರ ತಿಳಿಯತ್ತಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.