ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ Amruthadhaare Serial: ಭೂಮಿಕಾ ಅವಳಿ ತಂಗಿ ದೀಪಿಕಾ ಎಂಟ್ರಿ

Published : Sep 18, 2026, 12:01 PM IST

ಅಮೃತಧಾರೆ ಧಾರಾವಾಹಿಯಲ್ಲಿ ಪ್ರೇಕ್ಷಕರ ಊಹೆಗಳನ್ನು ಮೀರಿಸುವ ಹೊಸ ಟ್ವಿಸ್ಟ್ ಎದುರಾಗಿದೆ. ನಟಿ ಛಾಯಾ ಸಿಂಗ್ ಅವರು ಭೂಮಿಕಾ ಬದಲಾಗಿ ದೀಪಿಕಾ ಎಂಬ ಬಡ್ಡಿ ಬಂಗಾರಮ್ಮನ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಧಾರಾವಾಹಿಯ ಕಥೆ ಮತ್ತಷ್ಟು ರೋಚಕವಾಗುವ ಸಾಧ್ಯತೆಯಿದೆ.

PREV
16
ಎಲ್ಲರ ಗೆಸ್​ ಹುಸಿಯಾಯ್ತು

ಅಮೃತಧಾರೆ ಸೀರಿಯಲ್​ (Amruthadhaare Serial)ಗೆ ಯಾರೂ ಊಹಿಸದ ಟ್ವಿಸ್ಟ್​ ಸಿಕ್ಕಿದೆ. ಅಮೃತಧಾರೆ ಹೊಸ ಅಧ್ಯಾಯ ಎಂದು ವಾಹಿನಿ ಪ್ರೊಮೋಶೇರ್​ ಮಾಡಿದಾಗ, ಹೆಚ್ಚಿನವರು ಜೈದೇವ ಪ್ಲಾಸ್ಟಿಕ್​ ಸರ್ಜರಿಮಾಡಿಕೊಂಡು ಬೇರೆ ಅವತಾರದಲ್ಲಿ ಬರ್ತಾನೆ, ರಾಜೇಶ್​ ನಟರಂಗ ಉರ್ಫ್​ ಗೌತಮ್​ ಪಾತ್ರ ಚೇಂಜ್​ ಆಗತ್ತೆ ಎಂದೆಲ್ಲಾ ಗೆಸ್​ ಮಾಡಿದ್ದರು.

26
ಯಾರೂ ಊಹಿಸದ ಟ್ವಿಸ್ಟ್​

ಆದರೆ,ಇಲ್ಲಿ ಆದದ್ದೇ ಬೇರೆ. ಯಾರೂ ಊಹಿಸದ ಟ್ವಿಸ್ಟ್​ ಸಿಕ್ಕಿದೆ. ಅದೇ ಭೂಮಿಕಾ ಪಾತ್ರಧಾರಿ ಅರ್ಥಾತ್​ ಛಾಯಾ ಸಿಂಗ್​ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

36
ಎಲ್ಲರಿಗೂ ಶಾಕ್​

ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಎಲ್ಲರಿಗೂ ಶಾಕ್​ ಆಗಿದೆ. ದೀಪಿಕಾ ಎನ್ನುವ ಹೆಸರಿನಲ್ಲಿ ಬಡ್ಡಿ ಬಂಗಾರಮ್ಮ ಆಗಿ ಛಾಯಾ ಸಿಂಗ್​ ಕಾಣಿಸಿಕೊಂಡಿದ್ದಾರೆ.

46
ದೀಪಿಕಾ ಎಂಟ್ರಿ

ನಾನು ಸಾಲ ಕೊಡೋದು ಕೆಲಸಕ್ಕೆ, ಶೋಕಿಯಾಗಿ ಅಲ್ಲ ಎನ್ನುತ್ತಲೇ ದೀಪಿಕಾ ಎಂಟ್ರಿ ಆಗಿದೆ. ಎಲ್ಲರಿಗೂ ಬಡ್ಡಿ ಕೊಡುವ ಪಾತ್ರದಲ್ಲಿ ನಟಿ ಛಾಯಾ ಸಿಂಗ್​ ಮಿಂಚಲಿದ್ದಾರೆ.

56
ಛಾಯಾ ಸಿಂಗ್​ ನಟನೆ

ಹೇಳಿ-ಹೇಳಿ ಛಾಯಾ ಸಿಂಗ್​ ಅವರ ನಟನೆ ಬಗ್ಗೆ ಎರಡು ಮಾತನಾಡುವಂತೆಯೇ ಇಲ್ಲ. ಭೂಮಿಕಾ ಆಗಿ ಎಷ್ಟೊಂದು ರೂಪದಲ್ಲಿ ಕಾಣಿಸಿಕೊಂಡಿದ್ದ ನಟಿ, ಈಗ ದೀಪಿಕಾ ಆಗಿ ವಿಭಿನ್ನ ರೀತಿಯಲ್ಲಿ ಎಲ್ಲರ ಎದುರು ಬಂದಿದ್ದಾಳೆ.

66
ಸೀರಿಯಲ್​ ಮತ್ತಷ್ಟು ರೋಚಕ

ಈ ಮೂಲಕ ಸೀರಿಯಲ್​ ಮತ್ತಷ್ಟು ರೋಚಕವಾಗಲಿದೆ. ಇವಳನ್ನೇ ಮುಂದಿಟ್ಟುಕೊಂಡು ಜೈದೇವ್​ ಮತ್ತು ಶಕುಂತಲಾ ಎಲ್ಲಾ ರೀತಿಯ ಆಟವಾಡುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories