ಬಿಗ್ ಬಾಸ್ ಮನೆಗೆ ಎಂಟ್ರಿಕೊಡಲು ಸಜ್ಜಾದ ಟೀಂ ಇಂಡಿಯಾ ಕ್ರಿಕೆಟಿಗನ ಸಹೋದರಿ, ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸುತ್ತಿದ್ದಾರೆ. ಮಾತು, ರಂಪಾಟ, ರಣತಂತ್ರಗಳಿಂದ ಸದ್ದು ಮಾಡುತ್ತಿರುವ ಬಿಗ್ ಬಾಸ್ ಮನೆ ಇದೀಗ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ಭಾರಿ ಕುತೂಹಲ ಕೆರಳಿಸಿದೆ. ಪ್ರತಿ ದಿನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆಪ್ತರಾಗಿದ್ದವರು ಇದೀಗ ಶತ್ರುಗಳಾಗುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಟೀಂ ಇಂಡಿಯಾ ಕ್ರಿಕೆಟಿಗನ ಸಹೋದರಿ ಎಂಟ್ರಿಕೊಡುತ್ತಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಸಹೋದರಿ, ಫೆಮಿನಾ ಮಿಸ್ ಇಂಡಿಯಾ ರನ್ನರ್ ಅಪ್ ಮಾಲ್ತಿ ಚಹಾರ್ ಹಿಂದಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
26
ವೈಲ್ಡ್ ಕಾರ್ಡ್ ಎಂಟ್ರಿ
ವೈಲ್ಡ್ ಕಾರ್ಡ್ ಎಂಟ್ರಿ
ನಟಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಮಾಲ್ತಿ ಚಹಾರ್ ಬಿಗ್ ಬಾಸ್ 19ರ ಕುತೂಹಲ ಹೆಚ್ಚಿಸಿದ್ದಾರೆ. ವರದಿಗಳ ಪ್ರಕಾರ ಮಾಲ್ತಿ ಚಹಾರ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಡುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಲಿರುವ ಮಾಲ್ತಿ ಚಹಾರ್, ಬಿಗ್ ಬಾಸ್ ಸ್ಪರ್ಧೆಯ ಪೈಪೋಟಿ ಹೆಚ್ಚಿಸಲಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
36
ಸಿನಿಮಾದಲ್ಲೂ ಸೈ ಎನಿಸಿಕೊಂಡಿರುವ ಮಾಲ್ತಿ
ಸಿನಿಮಾದಲ್ಲೂ ಸೈ ಎನಿಸಿಕೊಂಡಿರುವ ಮಾಲ್ತಿ
ಜೀನಿಯಸ್ ಹಾಗೂ ಇಶ್ಕ್ ಪಶ್ಮಿನಾ ಸಿನಿಮಾಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಮಾಲ್ತಿ ಚಹಾರ್ ಕೆಲ ಶಾರ್ಟ್ ಮೂವಿ ನಿರ್ದೇಶನ ಮಾಡಿ ಭಾರಿ ಮೆಚ್ಚುಗೆಗೆ ಗಳಿಸಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳ ಕಾತರ ಹೆಚ್ಚಾಗಿದೆ.
ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಭರವಸೆಯ ಕ್ರಿಕೆಟಿನಾಗಿ ಗುರುತಿಸಿಕೊಂಡಿದ್ದಾರೆ. ಸಹೋದರ ಸಂಬಂಧಿ ರಾಹುಲ್ ಚಹಾರ್ ಕೂಡ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದಾರೆ. ದೀಪಕ್ ಚಹಾರ್ ಸಹೋದರಿ ಮಾಲ್ತಿ ಚಹಾರ್ ಫ್ಯಾಶನ್, ಸಿನಿಮಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
56
2018ರಲ್ಲಿ ಬಾಲಿವುಡ್‌ಗೆ ಎಂಟ್ರಿ
2018ರಲ್ಲಿ ಬಾಲಿವುಡ್‌ಗೆ ಎಂಟ್ರಿ
ಮಾಲ್ತಿ ಚಹಾರ್ ಮಾಡೆಲ್, ಫ್ಯಾಶನ್ ಜಗತ್ತಿನಿಂದ 2018ರಲ್ಲಿ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಅನಿಲ್ ಶರ್ಮಾ ನಿರ್ದೇಶನದ ಜೀನಿಯಸ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮಾಲ್ತಿ ಚಹಾರ್, ಬಳಿಕ 2022ರಲ್ಲಿ ಅರವಿಂದ್ ಪಾಂಡೆ ನಿರ್ದೇಶಕನ ರೊಮ್ಯಾಂಟಿಕ್ ಸಿನಿಮಾ ಇಶ್ಕ್ ಪಶ್ಮಿನಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
66
ಸಲ್ಮಾನ್ ಖಾನ್ ನಿರೂಪಣೆಯ ಹಿಂದಿ ಬಿಗ್ ಬಾಸ್ ಶೋ
ಸಲ್ಮಾನ್ ಖಾನ್ ನಿರೂಪಣೆಯ ಹಿಂದಿ ಬಿಗ್ ಬಾಸ್ ಶೋ
ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ 19ರ ಶೋ ಈಗಾಗಲೇ ಕಾವು ಪಡೆದುಕೊಂಡಿದೆ. ಸ್ಪರ್ಧಿಗಳು ಕೈಕೈಮಿಲಾಯಿಸಿದ ಘಟನೆಗಳು ನಡೆದಿದೆ. ಇದರ ನಡುವೆ ವೈಲ್ಡ್ ಕಾರ್ಡ್ ಮೂಲಕ ಮಾಲ್ತಿ ಚಹಾರ್ ಎಂಟ್ರಿಕೊಡುವ ಮೂಲಕ ಬಿಗ್ ಬಾಸ್ ಶೋ ರಂಗೇರಿಸಲಿದ್ದಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.