ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ನಟ ವಿನಯ್ ಗೌಡ ಅವರನ್ನು ಜನರು ಬಿಗ್‌ಬಾಸ್ ಕಾರ್ಯಕ್ರಮದ 'ಸರ್ಕಲ್' ಹೇಳಿಕೆ ನೆನಪಿಸಿ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ.
ಮೈಸೂರು ಜಂಬೂಸವಾರಿಯಲ್ಲಿ ಈ ಬಾರಿ ಕನ್ನಡ ಕಲಾವಿದರು ಭಾಗಿಯಾಗಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ನೋಡುತ್ತಿದ್ದಂತೆ ಅವರ ಹೆಸರನ್ನು ಪ್ರೀತಿಯಿಂದ ಕೂಗುತ್ತಾರೆ. ಆದ್ರೆ ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟ ವಿನಯ್ ಗೌಡರನ್ನ ಅವರ ಹೇಳಿಕೆಯನ್ನು ಬಳಸಿ ಕೂಗಲಾಗಿದೆ.
25
ಬಿಗ್‌ಬಾಸ್ ಅಗ್ನಿಪರೀಕ್ಷೆ
ಹೌದು, ಈ ಬಾರಿ ಬಿಗ್‌ಬಾಸ್ ಸೀಸನ್ ಆರಂಭಕ್ಕೂ ಮುನ್ನ ಅಗ್ನಿಪರೀಕ್ಷೆ ಎಂದು ಶೋ ನಡೆಸಲಾಗಿತ್ತು. ಈ ಶೋಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ನಟಿಯರಾದ ಶೃತಿ, ಸಂಗೀತಾ ಶೃಂಗೇರಿ, ಗಾಯಕ ಚಂದನ್ ಶೆಟ್ಟಿ ಮತ್ತು ನಟ ವಿನಯ್ ಗೌಡ ತೀರ್ಪುಗಾರರಾಗಿದ್ದರು. ಮತ್ತೋರ್ವ ಸ್ಪರ್ಧಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮದ ನಿರೂಪಕರಾಗಿದ್ದರು.
35
ಸರ್ಕಲ್‌ಗೆ ಎಷ್ಟು ಸೈಡ್?
ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ವಿನಯ್ ಗೌಡ, ಸರ್ಕಲ್‌ಗೆ ಎಷ್ಟು ಸೈಡ್ ಇರುತ್ತೆ ಎಂದು ಕೇಳುತ್ತಾರೆ. ವೃತ್ತಕ್ಕೆ ಯಾವುದೇ ಬದಿ ಇಲ್ಲ ಎಂದು ಸ್ಪರ್ಧಿ ಹೇಳುತ್ತಾರೆ. ಈ ವೇಳೆ ವಿನಯ್ ಗೌಡ, ಸರ್ಕಲ್‌ಗೆ ಎರಡು ಸೈಡ್ ಅಂತಾರೆ. ಈ ಒಂದು ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ವಿನಯ್ ಗೌಡ, ಸಾಮಾಜಕ ಜಾಲತಾಣದ ಮೂಲಕ ಸ್ಪಷ್ಟನೆಯನ್ನು ನೀಡಿದ್ದರು.
ಇನ್ನು ಬಿಗ್‌ಬಾಸ್ ಸೀಸನ್ 13ರ ವೇದಿಕೆ ಮೇಲೆ ಸುದೀಪ್ ಸಹ, ಸರ್ಕಲ್ ವಿಚಾರವನ್ನು ಹೇಳಿ ವಿನಯ್ ಗೌಡ ಅವರನ್ನು ತಮಾಷೆ ಮಾಡಿದ್ದರು. ಇದೀಗ ಜನರು ಈ ಸರ್ಕಲ್ ವಿಷಯವನ್ನು ಇನ್ನು ನೆನಪಿನಲ್ಲಿಟ್ಟಿಕೊಂಡಿದ್ದು, ವಿನಯ್ ಗೌಡ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಜಂಬೂಸವಾರಿಯಲ್ಲಿ ಭಾಗಿಯಾಗಲು ಬಂದ ವಿನಯ್ ಗೌಡರನ್ನು ಜನರು ನೇರವಾಗಿಯೇ ಟ್ರೋಲ್ ಮಾಡಿದ್ದಾರೆ.
55
ಟ್ರೋಲ್ ವಿಡಿಯೋಗೆ ಜನರು ಹೇಳಿದ್ದೇನು?
ಸದ್ಯ ಈ ಟ್ರೋಲ್ ವಿಡಿಯೋ ವೈರಲ್ ಆಗಿದ್ದು, ಜನರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡುತ್ತಿದ್ದಾರೆ. ಏನೋ ಅವತ್ತು ಬೈ ಮಿಸ್ಟೇಕ್ ಆಗಿ ಹೇಳಿದ್ದನ್ನ ಇಷ್ಟೊಂದು ಸೀರಿಯಸ್ಸಾಗಿ ತಗೊಳ್ಳೋದಾ ಜನಕ್ಕೆ ಯಾವಾಗ ಬುದ್ಧಿ ಬರುತ್ತೋ? Mysore circle inspector vinay ದಸರಾ ಉಸ್ತುವಾರಿ ಕೊಟ್ಟಿದ್ದಾರೆ. ಪಾಪ ಗುರು, ಸಣ್ಣ ಹುಡುಗರೂ ಸಹ ಬಿಡ್ತಿಲ್ಲ, ಓವರ್ ಆಕ್ಟಿಂಗ್ ಮಾಡಿದ್ರೆ ಹೀಗೆ ಆಗೋದು. ಗಣಿತದ ಪಿತಾಮಹ. ಹೋಗ್ಲಿ ಬಿಡ್ರೋ ಎಂಬತೆಲ್ಲಾ ಕಮೆಂಟ್‌ಗಳು ಬಂದಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.