Vinaya Prasad: ಜೀ ಕನ್ನಡಲ್ಲಿ ‘ಪಾರು’ ಧಾರಾವಾಹಿಯಲ್ಲಿ ಅರಸನಕೋಟೆಯ ಅಖಿಲಾಂಡೇಶ್ವರಿಯಾಗಿ ಮಿಂಚಿದ್ದ ಹಿರಿಯ ನಟಿ ವಿನಯಪ್ರಸಾದ್ ಶೀಘ್ರದಲ್ಲೇ ಉದಯ ಟಿವಿಯ ಹೊಚ್ಚ ಹೊಸ ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ.
ಕನ್ನಡ ಸಿನಿಮಾದ ಜನಪ್ರಿಯ ನಟಿ ಹಾಗೂ ಕಿರುತೆರೆಯಲ್ಲೂ ಮಿಂಚಿದ ಹಿರಿಯ ನಟಿ ವಿನಯ ಪ್ರಸಾದ್ ಅವರು ಶೀಘ್ರದಲ್ಲಿ ಮತ್ತೆ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ವಿಭಿನ್ನ ಕಥೆ, ವಿಭಿನ್ನ ಪಾತ್ರ ಹಾಗೂ ವಿಭಿನ್ನ ಚಾನೆಲ್ ಮೂಲಕ ಎಂಟ್ರಿ ಕೊಡಲಿದ್ದಾರೆ.
26
ಅರಸನಕೋಟೆ ಅಖಿಲಾಂಡೇಶ್ವರಿ
ಕನ್ನಡ ಕಿರುತೆರೆಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಎಂದೇ ಖ್ಯಾತಿ ಪಡೆದಿರುವ ಹಿರಿಯ ಜನಪ್ರಿಯ ನಟಿ ವಿನಯಪ್ರಸಾದ್ . ಇವರು ಪಾರು ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದರು. ಅವರ ಖಡಕ್ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು.
36
10 ವರ್ಷಗಳ ಬಳಿಕ ಮತ್ತೆ ಉದಯ ಟಿವಿಗೆ
ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಉದಯ ಟಿವಿಗೆ ಕಮ್ ಬ್ಯಾಕ್ ಆಗ್ತಿದ್ದಾರೆ! ಇವರು ಈ ಹಿಂದೆ ಸುಂದರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಜೀ ಕನ್ನಡ ಧಾರಾವಾಹಿ ಪಾತ್ರದ ಮೂಲಕ ಜನಪ್ರಿಯತೆ ಪಡೆದರು.
ಸದ್ಯದಲ್ಲೇ ಉದಯ ಟಿವಿಯಲ್ಲಿ ಹೊಸ ಸಂಸ್ಥೆಯ - ಹೊಸ ಧಾರವಾಹಿ ಶುರುವಾಗುತ್ತಿದ್ದೂ , ಇದರಲ್ಲಿ ವಿನಯಪ್ರಸಾದ್ ರವರು, ಮತ್ತೊಂದು ಪಾತ್ರದ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ. ಆದರೆ ಆ ಧಾರಾವಾಹಿ ಯಾವುದು ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
56
ಮತ್ತೆ ಅಖಿಲಾಂಡೇಶ್ವರಿ ಆಗ್ತಾರ?
ಬಂದಿರುವ ಮಾಹಿತಿ ಪ್ರಕಾರ ವಿನಯಪ್ರಸಾದ್ ಅವರು ಅಖಿಲಾಂಡೇಶ್ವರಿಯ ಗೆಟಪ್ ನಲ್ಲಿ ಮತ್ತೆ ನಿಮ್ಮಮುಂದೇ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟು ನಿಜಾ? ಮತ್ತೆ ಅದೇ ಪಾತ್ರವನ್ನು ಮಾಡುವರೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
66
ಬಹುಭಾಷಾ ನಟಿ ವಿನಯ ಪ್ರಸಾದ್
ಕನ್ನಡ, ಮಲಯಾಲಂ ಮತ್ತು ತಮಿಳು, ತೆಲುಗು ಹಾಗೂ ತುಳು ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ವಿನಯಪ್ರಸಾದ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವತ್ತಿಗೂ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮದರ್ ಪ್ರಾಮಿಸ್ ಸಿನಿಮಾದಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.