Amruthadhaare Serial: ಆ ಮಗು ದತ್ತು ತಗೊಂಡ್ರೆ ಗೌತಮ್‌ ಬಾಳಲ್ಲಿ ದೊಡ್ಡ ಅನಾಹುತ; ಈಗ ಸಿಕ್ಕ ಸೂಚನೆ ಏನು?

Published : Oct 11, 2025, 04:58 PM IST

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಸ್ವಂತ ಮಗಳನ್ನು ಹುಡುಕುತ್ತಿದ್ದ ಗೌತಮ್‌ಗೆ ಒಂದು ಹುಡುಗಿ ಅಚಾನಕ್‌ ಆಗಿ ಸಿಕ್ಕಿದ್ದಾಳೆ. ಈಗ ಆ ಮಗುವನ್ನು ಅವನು ದತ್ತು ತಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ. ಇದರಿಂದ ಏನೇನು ಆಗಲಿದೆ? 

PREV
18
ದತ್ತು ತಗೊಳ್ಳುವ ನಿರ್ಧಾರ

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಸ್ವಂತ ಮಗಳನ್ನು ಹುಡುಕುತ್ತಿದ್ದ ಗೌತಮ್‌ಗೆ ಒಂದು ಹುಡುಗಿ ಅಚಾನಕ್‌ ಆಗಿ ಸಿಕ್ಕಿದ್ದಾಳೆ. ಈಗ ಆ ಮಗುವನ್ನು ಅವನು ದತ್ತು ತಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ. ಇದರಿಂದ ಏನೇನು ಆಗಲಿದೆ?

28
ಗೌತಮ್‌ ಆ ಮಗುವನ್ನು ದತ್ತು ತಗೋತಾನಾ?

ಸದ್ಯಕ್ಕೆ ಆ ಮಗು ಗೌತಮ್‌ ಜೊತೆ ಇದೆ. ಆ ಮಗುವನ್ನು ಪಾಲಕರಿಗೆ ಒಪ್ಪಿಸಬೇಕು ಎಂದು ಗೌತಮ್‌, ಪೊಲೀಸ್‌ ಠಾಣೆಗೆ ಅಲೆದಿದ್ದಾನೆ. ಆದರೆ ಅವನ ಉದ್ದೇಶ ಈಡೇರಿದಂತಿಲ್ಲ. ಆದರೆ ಮಗುವನ್ನು ದತ್ತು ತಗೋತಾನಾ ಅಂತ ಕಾದು ನೋಡಬೇಕಿದೆ.

38
ಅವರು ಮನುಷ್ಯರಾ?

ಮಲೇಮಾದೇಶ್ವರದಲ್ಲಿ ಕೇಸ್‌ ನಡೆದಿತ್ತು. ಮಕ್ಕಳ ಕಳ್ಳಸಾಗಣಿಕೆ ನಡೆಯುತ್ತಿದ್ದಾಗ ಸಿಕ್ಕ ಮಗು ಇದು. ಅಲ್ಲಿ ಸಿಕ್ಕ ಹುಡುಗಿ ಇವಳು. ಇಷ್ಟುದಿನ ಈ ಮಗು ಇದ್ದ ಪಾಲಕರಿಗೂ ಈ ಮಗುಗೂ ಸಂಬಂಧ ಇಲ್ಲವಂತೆ. ಈ ಮಗುವನ್ನು ದೂರ ಮಾಡಿದ ಅವರು ಮನುಷ್ಯರಾ ಎಂದು ಪೊಲೀಸ್‌ ಸ್ಟೇಶನ್‌ನಲ್ಲಿದ್ದವರು ಹೇಳಿದ್ದಾರೆ.

48
ಪೊಲೀಸರು ಹೇಳಿದ್ದೇನು?

ಇನ್ನೊಂದು ಕಡೆ‌ ತನ್ನ ಸ್ವಂತ ಮಗುವನ್ನು ಗೌತಮ್ ಹುಡುಕಿಸುತ್ತಿದ್ದಾನೆ. ಆಗ ಇನ್ನೋರ್ವ ಪೊಲೀಸ್‌ ಅಧಿಕಾರಿ, “ನಿಮ್ಮ ಮಗು ಕಳೆದ ಜಾಗದಲ್ಲಿ ಮಕ್ಕಳ ಸಾಗಾಣಿಕೆ ನಡೆಯುತ್ತಿತ್ತು. ನಿಮ್ಮ ಮಗು ಸಿಗುತ್ತದೆ” ಎಂದು ಭರವಸೆ ನೀಡಿದ್ದರು. ಮಗು ಹುಟ್ಟಿದ್ದಾಗ ಹೇಗಿತ್ತು? ಮೈಮೇಲೆ ಏನಾದರೂ ಮಚ್ಚೆ ಇತ್ತಾ ಅಂತೆಲ್ಲ ಪೊಲೀಸ್‌ ಅವರು ಗೌತಮ್‌ ಬಳಿ ಕೇಳಿ ತಿಳಿದುಕೊಂಡಿದ್ದಾರೆ.

58
ಪೊಲೀಸರ ಅನುಮತಿ ಸಿಗತ್ತೆ

ಈಗ ಗೌತಮ್‌ ಆ ಮಗುವನ್ನು ದತ್ತು ತಗೋಬೇಕು ಎಂದು ಫಿಕ್ಸ್‌ ಆಗಿದ್ದಾನೆ, ಇದಕ್ಕೆ ಪೊಲೀಸರು ಅನುಮತಿ ಕೂಡ ಕೊಡಬಹುದು. ಅಪ್ಪ-ಮಗಳ ಬಾಂಧವ್ಯ ವೀಕ್ಷಕರಿಗೆ ಇಷ್ಟ ಆಗಲಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ.

68
ಭೂಮಿ ಮನಸ್ಸಿನಲ್ಲಿ ಆತಂಕ

ಮುಂದೆ ಗೌತಮ್‌ ಹಾಗೂ ಆ ಮಗುವನ್ನು ಭೂಮಿಕಾ ನೋಡಬಹುದು. ನಮ್ಮ ಮಗಳು ಬದುಕಿರುವ ವಿಷಯವನ್ನು, ಅವರ ಜೊತೆ ಇರುವ ವಿಷಯವನ್ನು ನನಗೆ ಹೇಳಿಲ್ಲ ಅಂತ ಭೂಮಿಕಾ ಬೇಸರ ಮಾಡಿಕೊಳ್ಳಬಹುದು. ಇಷ್ಟು ವರ್ಷಗಳಿಂದ ಮಗಳ ಮುಖ ನೋಡಿಲ್ಲ, ಹುಟ್ಟಿದಕೂಡಲೇ ಕಿಡ್ನ್ಯಾಪ್‌ ಆದಳು, ಆ ಮಗು ಈಗ ನಿಜವಾಗಿ ಬದುಕಿದ್ಯೋ? ಇಲ್ಲವೋ ಎಂದು ಭೂಮಿಕಾ ಮನಸ್ಸಿನೊಳಗಡೆ ಆತಂಕ ಪಟ್ಟು, ಒದ್ದಾಡುತ್ತಿದ್ದಾಳೆ.

78
ಮುಂದೆ ಏನಾಗಬಹುದು?

ಗೌತಮ್‌ ನನ್ನನ್ನು ಮರೆತು ಇನ್ನೊಂದು ಮದುವೆ ಆಗಿರಬಹುದಾ? ಆ ಹೆಂಡ್ತಿಗೆ ಹುಟ್ಟಿರೋ ಮಗಳು ಇವಳಾ? ಗೌತಮ್‌ ಜೊತೆಗೆ ಆ ಮಗು ಹೇಗೆ ಬಂತು? ಹೀಗೆಲ್ಲ ಭೂಮಿಕಾ ಯೋಚನೆ ಮಾಡಲೂಬಹುದು. ಒಟ್ಟಿನಲ್ಲಿ ಈ ಗೊಂದಲದಿಂದ ಭೂಮಿಕಾ ಹಾಗೂ ಗೌತಮ್‌ ಇನ್ನಷ್ಟು ದೂರ ಆದರೂ ಆಶ್ಚರ್ಯವಿಲ್ಲ. ಅಂದಹಾಗೆ ಗೌತಮ್‌ಗೆ ಆ ಮಗಳು ವರವಾಗ್ತಾಳಾ? ಮುಂದೆ ಏನಾಗಬಹುದು?

88
ಧಾರಾವಾಹಿ ಕಥೆ ಏನು?

ಗೌತಮ್‌ ಹಾಗೂ ಭೂಮಿಕಾಗೆ ಅವಳಿ ಮಕ್ಕಳು ಜನಿಸಿದ್ದರು. ಅವಳಿ ಮಕ್ಕಳಾಗುತ್ತವೆ ಎಂದು ಇವರಿಗೆ ಗೊತ್ತೇ ಇರಲಿಲ್ಲ. ಭೂಮಿ ಮೊದಲು ಮಗಳಿಗೆ ಜನ್ಮಕೊಟ್ಟಕೂಡಲೇ ಗೌತಮ್‌ ಮಲಸಹೋದರ ಜಯದೇವ್‌ ಆ ಮಗುವನ್ನು ಕದ್ದು ಕಾಡಿನಲ್ಲಿ ಬಿಸಾಕಿದ್ದನು. ಶಕುಂತಲಾ ಈ ವಿಷಯವನ್ನು ಭೂಮಿಗೆ ಹೇಳಿ, ನಿಮ್ಮವರಿಗೆ ತೊಂದರೆ ಕೊಡ್ತೀನಿ ಅಂತ ಧಮ್ಕಿ ಹಾಕಿ ಅವಳು ಮನೆಯಿಂದ, ಮನೆಯವರಿಂದ ದೂರ ಇರುವ ಹಾಗೆ ಮಾಡಿದ್ದಾಳೆ. ಇತ್ತ ಭೂಮಿ ತನ್ನ ಮಗ ಆಕಾಶ್, ಮಲ್ಲಿ ಜೊತೆ ವಾಸವಿದ್ದಾಳೆ. ಅತ್ತ ಗೌತಮ್‌, ಮಗಳ ಹುಡುಕಾಟದಲ್ಲಿದ್ದಾನೆ. ಮಗಳು ಸಿಕ್ಕಿದರೆ, ಮಕ್ಕಳು, ಪತ್ನಿ ಜೊತೆ ಚೆನ್ನಾಗಿ ಬದುಕಬಹುದು ಎಂದು ಅವನು ಯೋಚನೆ ಮಾಡುತ್ತಿದ್ದಾನೆ.

Read more Photos on
click me!

Recommended Stories