Kannada Serial Karna: ಎಲ್ಲಾ ಮದುವೆ ಶಾಸ್ತ್ರಗಳು ಒಂದೊಂದಾಗಿ ನಡೆಯುತ್ತಿದ್ದರೂ, ಎಲ್ಲೂ ನಿತ್ಯಾ ಜೊತೆ ಕರ್ಣ ಮದುವೆಯಾಗುವ ಸೂಚನೆ ಸಿಗ್ತಾ ಇಲ್ಲ. ಒಂದು ವೇಳೆ ಕರ್ಣ ನಿಧಿಗೆ ಪ್ರಪೋಸ್ ಮಾಡಿದ್ದು ನೋಡಿದ್ರೆ ನಾವಂದುಕೊಂಡಿದ್ದೇ ಸುಳ್ಳಾ? ಅಂತೀರಾ.
ನಿತ್ಯಾ ಮದುವೆ ತಯಾರಿ ನಡೆಯುತ್ತಿರುವಾಗಲೇ ಕರ್ಣ-ನಿಧಿ ಮದ್ವೆ ಆಗಲ್ಲ ಅಂತ ಪ್ರೊಮೊ ಬಿಟ್ಟು ವೀಕ್ಷಕರ ಕನಸು ನುಚ್ಚುನೂರಾಗಿದ್ದು ಆಯ್ತು. ಆದರೂ ಧಾರಾವಾಹಿ ವೀಕ್ಷಕರಿಗೆ ಎಲ್ಲೂ ಕರ್ಣ-ನಿಧಿ ಮದುವೆಯಾಗಲ್ಲ ಅನ್ನೊ ಮುನ್ಸೂಚನೆ ಕೊಡ್ತಾ ಇಲ್ಲ ನಿರ್ದೇಶಕರು. ಅದಕ್ಕೆ ಸಾಕ್ಷಿ ಮದುವೆ ಶಾಸ್ತ್ರಗಳು.
26
ನಾವಂದುಕೊಂಡಿದ್ದೇ ಸುಳ್ಳಾ?
ಮೆಹೆಂದಿ ಶಾಸ್ತ್ರ, ಅರಿಶಿನ ಶಾಸ್ತ್ರ, ಸಂಗೀತ ಸಮಾರಂಭ, ಬಳೆ ಶಾಸ್ತ್ರ.. ಹೀಗೆ ಎಲ್ಲಾ ಮದುವೆ ಶಾಸ್ತ್ರಗಳು ಒಂದೊಂದಾಗಿ ನಡೆಯುತ್ತಿದ್ದರೂ, ಎಲ್ಲೂ ನಿತ್ಯಾ ಜೊತೆ ಕರ್ಣ ಮದುವೆಯಾಗುವ ಸೂಚನೆ ಸಿಗ್ತಾ ಇಲ್ಲ. ಒಂದು ವೇಳೆ ಕರ್ಣ ನಿಧಿಗೆ ಪ್ರಪೋಸ್ ಮಾಡಿದ್ದು ನೋಡಿದ್ರೆ ನಾವಂದುಕೊಂಡಿದ್ದೇ ಸುಳ್ಳಾ? ಅಂತೀರಾ.
36
ಕಿರುತೆರೆ ಇತಿಹಾಸದಲ್ಲೇ ಚೆಂದದ ಪ್ರಪೋಸ್
ಹೌದು, ಕರ್ಣ ನಿಧಿಗೆ ಪ್ರಪ್ರೋಸ್ ಮಾಡುತ್ತಿರುವ ವಿಡಿಯೋವೊಂದನ್ನ ಕರ್ಣ ನಿಧಿ ಫ್ಯಾನ್ಸ್ ಪೇಜ್‌ನಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ನೋಡಿದ್ಮೇಲೆ 'ಜೊತೆ ಜೊತೆಯಲಿ' ಬಿಟ್ಟರೆ ಬಹುಶಃ ಕಿರುತೆರೆ ಇತಿಹಾಸದಲ್ಲೇ ಇಂಥ ಚೆಂದದ ಪ್ರಪೋಸ್ ನೋಡಿಲ್ಲ ಅಂತೀರಾ.
ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಿಧಿ ಚೆಂದದ ಸೀರೆಯುಟ್ಟು ಥೇಟ್ ಬೊಂಬೆಯಂತೆ ಕಂಗೊಳಿಸುತ್ತಿದ್ದಾಳೆ. ಕರ್ಣ ಪಂಚೆ ಧರಿಸಿ ಸುರಸುಂದಾರಂಗನಂತೆ ಮಿಂಚುತ್ತಿದ್ದಾನೆ. ದೊಡ್ಡ ಅರಮನೆಯ ಹಾಗೆ ಕಾಣುತ್ತಿರುವ ಸ್ಥಳದಲ್ಲಿ ಹೂಗಳಿಂದ ಅಲಂಕಾರ ಮಾಡಲಾಗಿದೆ. ಇಲ್ಲಿ ಕರ್ಣ ನಿಧಿಗೆ ಪ್ರಪೋಸ್ ಮಾಡುವುದನ್ನ ನೋಡಿದ್ರೇನೇ ಒಂಥರಾ ಖುಷಿಯಾಗುತ್ತೆ.
56
ಪ್ರಪೋಸ್ ಮಾಡಿದ್ದು ಹೇಗೆ?
ಇನ್ನು ಪ್ರಪೋಸ್ ಮಾಡುವಾಗ ಕರ್ಣ ಬಳಸಿರುವ ಒಂದೊಂದು ಪದಗಳು ಪಡ್ಡೆ ಹೈಕಳಿಗೆ ಕಚಗುಳಿ ಇಡುವುದು ಗ್ಯಾರಂಟಿ. ಹಾಗಾದ್ರೆ ಕರ್ಣ ಪ್ರಪೋಸ್ ಮಾಡಿದ್ದು ಹೇಗೆ ಅಂತೀರಾ?.
ನೀವು ಇಡುತ್ತಿರುವ ಮೊದಲನೆಯ ಹೆಜ್ಜೆ ನಮ್ಮಿಬ್ಬರ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ…ನಮ್ಮ ಬದುಕಿಗೆ ಖುಷಿ ಹೊತ್ತಿ ತಂದೋರು ನೀವು...ಇಷ್ಟು ವರ್ಷ ಮರ್ತಿದ್ದ ನನ್ನ ಮತ್ತೆ ಹುಡುಕಿ ಕೊಟ್ಟೋರು ನೀವು... ನಿಮ್ಮನ್ನ ಎದೆಗೂಡಲ್ಲಿ ಯಾವಾಗ್ಲೂ ಜೋಪಾನ ಮಾಡ್ತೀನಿ...ನಿಮ್ಮ ಮನಸ್ಸು, ದೇಹ ಯಾವ್ದಕ್ಕೂ ಒಂದಿಷ್ಟು ನೋವಾಗದೆ ಇರೋ ಹಾಗೆ ನೋಡ್ಕೊತೀನಿ...ನೀವು ನನ್ನ ಜೀವನದಲ್ಲಿ ಬಂದ ಮೇಲೆ ಕಪ್ಪು ಬಿಳುಪಿನ ಹೊರತಾಗಿ ಬೇರೆ ಬಣ್ಣಗಳು ಇವೆ ಅಂತ ಗೊತ್ತಾಗಿದ್ದು...ನಿಮ್ಮ ಹೆಜ್ಜೆಗೆ ಸೋಕುತ್ತಿರುವ ಪ್ರತಿ ಬಣ್ಣ ನಮ್ಮಿಬ್ಬರ ಜೀವನದಲ್ಲಿ ಕಾಮನಬಿಲ್ಲು ಮೂಡಿಸೋಕೆ ಕಾಯ್ತ ಇದೆ.. ಏಳು ಹೆಜ್ಜೆ ಇಟ್ಟು ಹೃದಯದಂಗಳಕ್ಕೆ ಬಂದು ಬಿಡು...ಕೈ ಚಾಚಿ ಕರೆಯುವೆನು, ಬಂದು ಬಿಗಿದಪ್ಪಿಕೊ ಕೈ ಜಾರಿ ಹೋಗದಂತೆ ಕಾಯುವೆ ಏಳೇಳೂ ಜನ್ಮಕ್ಕೂ..
66
ಕರ್ಣ-ನಿಧಿ ಮದ್ವೆ ಆಗಲ್ವಲ್ಲ!
ಕರ್ಣ ನಿಧಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಜೋಡಿ ಸೂಪರ್ ಅಂದಿದ್ದಾರೆ. ಕೃಷ್ಣ-ರಾಧೆಗೆ ಕಂಪೇರ್ ಮಾಡಿದ್ದಾರೆ. ಆದರೆ ಅವರಿಗಿರುವ ಬೇಸರ ಒಂದೇ ..ಕರ್ಣ ನಿಧಿ ಮದ್ವೆ ಆಗಲ್ವಲ್ಲ…