Amruthadhaare Serial: ಗೌತಮ್‌ ಮಗಳಾಗಿ ಮನೆ ಸೇರಿದ ಬಾಲಕಿ ನಿಜಕ್ಕೂ ಯಾರು? ಇವಳ ಹಿನ್ನೆಲೆ ಏನು?

Published : Oct 11, 2025, 04:40 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್-ಭೂಮಿಕಾ ಪುತ್ರ ಆಕಾಶ್ ತನ್ನ ಅಜ್ಜ-ಅಜ್ಜಿಯನ್ನು ಭೇಟಿಯಾಗಿದ್ದಾನೆ. ಇನ್ನೊಂದೆಡೆ, ಗೌತಮ್‌ಗೆ ಸಿಕ್ಕಿರುವ ಅನಾಥ ಬಾಲಕಿಯೊಬ್ಬಳು ಅದೃಷ್ಟವಂತೆ ಎಂದು ಸಾಬೀತಾಗುತ್ತಿದ್ದು, ಆಕೆಯ ನಿಜವಾದ ಗುರುತಿನ ಬಗ್ಗೆ ಕುತೂಹಲ ಹೆಚ್ಚಾಗಿದೆ.

PREV
16
ಅಜ್ಜ-ಅಜ್ಜಿಗೆ ಸಿಕ್ಕ ಗೌತಮ್ ಪುತ್ರ

ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್‌ ಮತ್ತು ಭೂಮಿಕಾ ಮಗ ಆಕಾಶ್‌, ಅಜ್ಜ-ಅಜ್ಜಿಯ ಕೈ ಸೇರಿದ್ದಾನೆ. ಮಲ್ಲಿ ಆಕಾಶ್‌ಗೆ ಚಾಲೆಂಜ್‌ ಮಾಡಿಸಿ, ಭೂಮಿಕಾಳ ಅಪ್ಪ-ಅಮ್ಮನನ್ನು ಹೋಗಿ ಮಾತನಾಡಿಸುವಂತೆ ಹೇಳಿದ್ದಾಳೆ. ಆ ಬಾಲಕ ತಮ್ಮದೇ ಮೊಮ್ಮಗ ಎಂದು ತಿಳಿಯದ ಅಜ್ಜ-ಅಜ್ಜಿ ಆತನನ್ನು ಚೆನ್ನಾಗಿ ಆಡಿಸುತ್ತಿದ್ದಾರೆ. ಇದನ್ನು ನೋಡಿ ಭೂಮಿಕಾ ಭಾವುಕಳಾಗಿದ್ದು ಕಣ್ಣೀರು ಹರಿಸುತ್ತಿದ್ದಾಳೆ.

26
ಗೌತಮ್‌ ಕೈ ಸೇರಿದ ಅನಾಥ ಬಾಲಕಿ

ಅದೇ ಇನ್ನೊಂದೆಡೆ, ಅನಾಥವಾಗಿದ್ದ ಬಾಲಕಿಯೊಬ್ಬಳು ಗೌತಮ್‌ ಕೈ ಸೇರಿದ್ದಾಳೆ. ಸದ್ಯ ಆತ ಬಾಲಕಿಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆ ಬಾಲಕಿ ಇನ್ನೂ ಬಾಯಿ ಬಿಟ್ಟಿಲ್ಲ. ಆದರೆ ಗೌತಮ್‌ಗೆ ಹತ್ತಿರವಾಗುತ್ತಿದ್ದಾಳೆ. ಅವಳಿಗೆ ಮಾತು ಬರುತ್ತದೆಯೋ ಇಲ್ಲವೋ ಎನ್ನುವುದು ಕೂಡ ಇನ್ನೂ ಗೊತ್ತಿಲ್ಲ. ಅವಳ ಕೆಲವೊಂದು ಸ್ವಭಾವ ಗೌತಮ್‌ನನ್ನೇ ಹೋಲುವ ಕಾರಣ, ಇವಳು ಗೌತಮ್‌ದೇ ಮಗಳು ಎನ್ನುವಂತೆ ಬಿಂಬಿಸಲಾಗಿದೆ.

36
ಬಾಲಕಿಯ ಸೀಕ್ರೆಟ್‌

ಅದೇ ಇನ್ನೊಂದೆಡೆ, ಭೂಮಿಕಾ ಸ್ನೇಹಿತೆಯ ಮನೆಯಲ್ಲಿ ಇರುವ ಹೆಣ್ಣುಮಗುವೊಂದರ ಬಗ್ಗೆ ರಿವೀಲ್‌ ಆಗಬೇಕಿದೆ. ಅದರೆ ನಡುವೆಯೇ, ಗೌತಮ್‌ ಮನೆಯಲ್ಲಿ ಇರುವ ಬಾಲಕಿ ಯಾರು ಎನ್ನುವ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮಗ ಆಗಿರುವ ಆಕಾಶ್‌, ನಿಜವಾಗಿಯೂ ಇದೇ ಸೀರಿಯಲ್‌ನ ಆನಂದ್‌ ಪುತ್ರ ದುಷ್ಯಂತ್‌. ಆತ ಇದಾಗಲೇ ಕೆಲವು ಸೀರಿಯಲ್ ಮತ್ತು ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ್ದಾನೆ.

46
ಯಾರೀ ಬಾಲಕಿ?

ಇದಾಗಲೇ ಆ ಬಾಲಕಿಯನ್ನು ದತ್ತು ಪಡೆಯಲು ಗೌತಮ್​ ಮುಂದಾಗಿದ್ದಾನೆ.ಆದರೆ, ಬಾಲಕಿ ಮಾತ್ರ ಹೊಸಬಳು. ಆಕೆ ಯಾರು, ಎಲ್ಲಿಯವಳು ಎನ್ನುವ ಕ್ಯೂರಿಯಾಸಿಟಿ ವೀಕ್ಷಕರದ್ದು. ಈಕೆಯನ್ನು ಇದೇ ಮೊದಲು ನೋಡುತ್ತಿರುವುದರಿಂದ ಮತ್ತು ನಟನೆಯನ್ನೂ ಚೆನ್ನಾಗಿ ಮಾಡುತ್ತಿರುವ ಕಾರಣ, ವೀಕ್ಷಕರು ಈಕೆಯ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ. ಈ ಬಾಲೆ ಯಾರು ಎನ್ನುವ ಕುತೂಹಲ ಕೆರಳಿಸುತ್ತಿದೆ.

56
ಅದೃಷ್ಟ ದೇವತೆ

ಅದೇ ಇನ್ನೊಂದೆಡೆ, ಸೀರಿಯಲ್‌ನಲ್ಲಿಯೂ ಈಕೆಯೇ ಗೌತಮ್‌ನ ಮಗಳಾಗಿ ಇರಲಿ ಎನ್ನುವುದು ಎಲ್ಲರ ಹಂಬಲ. ಇದಾಗಲೇ ಆಕೆಯ ಕೈಯಲ್ಲಿ ಇರುವ ಮಚ್ಚೆಯೊಂದನ್ನು ನೋಡಿರುವ ವಠಾದರ ಹಿರಿಯೊಬ್ಬರು, ಈಕೆ ಅದೃಷ್ಟವಂತೆ. ಇವಳು ಇದ್ದಲ್ಲಿ ಅದೃಷ್ಟ ಬರುತ್ತದೆ ಎಂದಿದ್ದಾರೆ.

66
ಸಕಲ ಸೌಲಭ್ಯ

ಅದರಂತೆ ಆಕೆ ವಠಾರಕ್ಕೆ ಕಾಲಿಡುತ್ತಿದ್ದಂತೆಯೇ ನೀರು ಪೂರೈಕೆ ಸರಿಯಾಗಿ ಆಗಿದೆ. ಸ್ವಚ್ಛತಾ ಕಾರ್ಯಕ್ಕೂ ಕಾರ್ಮಿಕರು ಬಂದಿದ್ದಾರೆ. ಆದ್ದರಿಂದ ಈಕೆ ಅದೃಷ್ಟವಂತೆ ಎನ್ನುವುದು ಸಾಬೀತಾಗಿದೆ. ಹಾಗಿದ್ದರೆ ಈಕೆ ಯಾರು ಎನ್ನುವುದು ಇನ್ನಷ್ಟೇ ರಿವೀಲ್‌ ಆಗಬೇಕಿದೆ.

Read more Photos on
click me!

Recommended Stories