Amruthadhaare Serial: ಪಂಕಜಾ ಬಗ್ಗೆ ಆನಂದ್‌ಗೆ ಸತ್ಯ ಗೊತ್ತಾಗೋಯ್ತು! ಇನ್ನು ಅಸಲಿ ಕಥೆ ಶುರು!

Published : May 24, 2025, 09:24 AM ISTUpdated : May 24, 2025, 09:26 AM IST

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ, ಆನಂದ್‌ ಇಬ್ಬರೂ ಪಂಕಜಾ ಯಾರು ಎಂದು ಕಂಡುಹಿಡಿಯಲು ಕನಕದುರ್ಗಕ್ಕೆ ಹೋಗಿದ್ದಾರೆ. ಅಲ್ಲಿ ಅವರಿಗೆ ಪಂಕಜಾ ಬಗ್ಗೆ ಗೊತ್ತಾಗಿದೆ. 

PREV
16

ʼಅಮೃತಧಾರೆʼ ಧಾರಾವಾಹಿಯಲ್ಲಿ ಶಕುಂತಲಾ ಯಾರು ಎನ್ನೋದು ಇನ್ನಷ್ಟೇ ಬಯಲಾಗಬೇಕಿದೆ. ಶಕುಂತಲಾ ಬಣ್ಣ ಬಯಲು ಮಾಡುವ ಕನಕದುರ್ಗಕ್ಕೆ ಗೌತಮ್‌, ಭೂಮಿಕಾ, ಆನಂದ್‌, ಅಪರ್ಣಾ ಹೋಗಿದ್ದಾರೆ. ಅಲ್ಲಿ ಪಂಕಜಾ ಯಾರು ಎನ್ನೋದು ಗೊತ್ತಾಗಬೇಕಿದೆ.

26

ಕನಕದುರ್ಗದಲ್ಲಿ ಪಂಕಜಾ ಬಗ್ಗೆ ತಿಳಿದುಕೊಳ್ಳೋಕೆ ಭೂಮಿಕಾ, ಆನಂದ್‌ ಹರಸಾಹಸ ಪಡುತ್ತಿದ್ದಾರೆ. ನಂಜಮ್ಮ ಎನ್ನುವ ಹೆಂಗಸಿನಿಂದ ಪಂಕಜಾ ಬಗ್ಗೆ ತಿಳಿದುಕೊಳ್ಳಬೇಕು ಅಂತ ಭೂಮಿಕಾ ಪರದಾಡುತ್ತಿದ್ದಾಳೆ. ನಂಜಮ್ಮಗೆ ಪಂಕಜಾ ಬಗ್ಗೆ ಗೊತ್ತಿದೆ. ಶಕುಂತಲಾಗೆ ಪದೇ ಪದೇ ಫೋನ್‌ ಮಾಡುವ ನಂಜಮ್ಮ ಎಲ್ಲ ವರದಿ ಒಪ್ಪಿಸುತ್ತಾಳೆ.

36

ಕನಕದುರ್ಗದಲ್ಲಿ ಪಂಕಜಾ ಬಗ್ಗೆ ಭೂಮಿಕಾ, ಆನಂದ್‌ ಹುಡುಕಾಟ ಮಾಡುತ್ತಿರೋದನ್ನು ನಂಜಮ್ಮ, ಶಕುಂತಲಾಗೆ ಫೋನ್‌ ಮಾಡಿ ಹೇಳಿದ್ದಾಳೆ. ಈ ವಿಷಯ ಶಕುಂತಲಾಗೆ ಗೊತ್ತಾದರೆ ಅವಳು ಏನು ಮಾಡ್ತಾಳೋ ಏನೋ! ತನ್ನ ಸತ್ಯ ಏನಾದರೂ ಗೊತ್ತಾದರೆ ಕಷ್ಟ ಅಂತ ಇವರಿಬ್ಬರನ್ನು ಶಕುಂತಲಾ ಸಾಯಿಸಿದರೂ ಕೂಡ ಆಶ್ಚರ್ಯ ಇಲ್ಲ.

46

ನಂಜಮ್ಮನ ಗಂಡ ಕುಡುಕ. ಅವನಿಂದ ಎಲ್ಲ ಸತ್ಯಹೊರಗಡೆ ಬರಬಹುದು ಅಂತ ಅವಳಿಗೆ ಗೊತ್ತಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡ ಆನಂದ್‌, ಅವನಿಗೆ ಕುಡಿಸಿ ಪಂಕಜಾ ಯಾರು ಎಂದು ತಿಳಿದುಕೊಳ್ಳುವ ಯತ್ನದಲ್ಲಿದ್ದಾನೆ. ಪಂಕಜಾಳ ಅಣ್ಣನೇ ಕಾಂತ. ಪಂಕಜಾ ಸಿಕ್ಕಾಪಟ್ಟೆ ಅನ್ಯಾಯ ಮಾಡಿದ್ದಾಳೆ ಅಂತ ನಂಜಮ್ಮ ಗಂಡ ಹೇಳಿದ್ದಾನೆ.

56

ಪಂಕಜಾ, ಕಾಂತ ಸ್ಮಗಲಿಂಗ್‌ ಮಾಡುತ್ತಿದ್ದರು. ಸ್ಮಗಲಿಂಗ್‌ ಮಾಡುವಾಗ ಅಪಘಾತ ಮಾಡಿದರು. ಆ ಅಪಘಾತದಲ್ಲಿ ಒಬ್ಬ ಸತ್ತೋದ. ಆಮೇಲೆ ಜೈಲಿಗೆ ಹೋಗಬೇಕಾಗುತ್ತದೆ ಅಂತ ಅವರು ಊರು ಬಿಟ್ಟು ಹೋದರು ಎಂದು ನಂಜಮ್ಮನ ಗಂಡ ಹೇಳಿದ್ದನು. ಸದ್ಯ ಈ ಪ್ರೋಮೋ ಪ್ರಸಾರ ಆಗಿದ್ದು, ನಂಜಮ್ಮನ ಗಂಡ ಇನ್ನೂ ಹೆಚ್ಚಿನ ವಿಷಯ ಹೇಳುತ್ತಾನಾ? ಅಥವಾ ಅಲ್ಲಿಗೆ ಯಾರಾದರೂ ಬಂದು ಅವನ ಮಾತನ್ನು ನಿಲ್ಲಿಸ್ತಾರಾ ಎಂದು ಕಾದು ನೋಡಬೇಕಿದೆ.

66

ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಆನಂದ್‌ ಪಾತ್ರದಲ್ಲಿ ಸಿಲ್ಲಿ ಲಲ್ಲಿ ಆನಂದ್‌, ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಮುಂತಾದವರು ನಟಿಸುತ್ತಿದ್ದಾರೆ. 

Read more Photos on
click me!

Recommended Stories