Madenur Manu Case: ನನ್ ಗಂಡ ಬೇರೆಯವ್ಳ ಹಿಂದೋದ್ರೆ ನಾನ್‌ ಸುಮ್ನಿರ್ತಿದ್ನಾ? ವೈಯಕ್ತಿಕ ಬಿಡಿ, ಸಿನಿಮಾ ನೋಡಿ: ಪತ್ನಿ

Published : May 23, 2025, 02:33 PM ISTUpdated : May 23, 2025, 02:40 PM IST

‘ಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್‌ ಟೈಮ್‌ನಲ್ಲಿ ದೊಡ್ಡ ವಿವಾದ ಸೃಷ್ಟಿ ಆಗಿತ್ತು. ಆಮೇಲೆ ಅವರು ಈ ದೂರಿನಿಂದ ಹಿಂದೆ ಸರಿಯೋದಾಗಿ ಹೇಳಿದ್ದರು. ಈಗ ಈ ಬಗ್ಗೆ ಪತ್ನಿ ಮಾತನಾಡಿದ್ದಾರೆ.   

PREV
15
Madenur Manu Case: ನನ್ ಗಂಡ ಬೇರೆಯವ್ಳ ಹಿಂದೋದ್ರೆ ನಾನ್‌ ಸುಮ್ನಿರ್ತಿದ್ನಾ? ವೈಯಕ್ತಿಕ ಬಿಡಿ, ಸಿನಿಮಾ ನೋಡಿ: ಪತ್ನಿ

ʼಕಾಮಿಡಿ ಕಿಲಾಡಿಗಳುʼ ಶೋ ಖ್ಯಾತಿಯ ಮಡೆನೂರು ಮನು ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಇಂದು ಮನು ನಟನೆಯ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ರಿಲೀಸ್‌ ಆಗಿದೆ. ಇದು ಮನು ಹೀರೋ ಆಗಿರುವ ಮೊದಲ ಸಿನಿಮಾ. ನಿನ್ನೆ ಆರೋಪ ಮಾಡಿದ್ದ ಸಹನಟಿ ಇಂದು ಯೂಟರ್ನ್‌ ಹೊಡೆದಿದ್ದು, ಈ ಬಗ್ಗೆ ಮನು ಪತ್ನಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.
 

25

"ಆರು ತಿಂಗಳಿನಿಂದ ನನ್ನ ಗಂಡ ತುಂಬ ಕಷ್ಟಪಟ್ಟು ಬಾಡಿ ಬಿಲ್ಡಿಂಗ್‌ ಮಾಡಿದ್ದಾರೆ. ಬಾಡಿ ಬಿಲ್ಡಿಂಗ್‌ ಮಾಡೋದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತಿದೆ. ಮೂರು ವರ್ಷಗಳಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಇಂದು ನನ್ನ ಗಂಡ ಥಿಯೇಟರ್‌ನಲ್ಲಿ ಇಲ್ಲ. ನನಗೆ ಈ ವಿಷಯ ತುಂಬ ಬೇಸರ ಆಗಿದೆ. ನಿರ್ಮಾಪಕರು, ನಿರ್ದೇಶಕರು, ತಾರಾ ಬಳಕ ತುಂಬ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಯಾರಿಗೂ ಮೋಸ ಆಗಬಾರದು, ಎಲ್ಲರೂ ಸಿನಿಮಾ ನೋಡಿ" ಎಂದು ಮನು ಪತ್ನಿ ಹೇಳಿದ್ದಾರೆ. 

35

"ವೈಯಕ್ತಿಕ ವಿಷಯವನ್ನು ಅಲ್ಲಿಗೆ ಬಿಡಿ, ತನಿಖೆ ಆಗಲಿ. ಆದರೆ ಸಿನಿಮಾ ನೋಡಿ. ಹೆಣ್ಣುಮಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದಾಗ ಮನೆಗೆ ಕರೆದುಕೊಂಡು ಬಿಡುತ್ತಿದ್ದಾರೆ. ಹೆಣ್ಣನ್ನು ಕೇರ್‌ ಮಾಡಬೇಕು ಅಂತ ಈ ಥರ ಮಾಡಿದ್ದರು. ಆ ನಟಿಯು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ಇವೆಲ್ಲವೂ ಷಡ್ಯಂತ್ರ ಆಗಿರತ್ತೆ" ಎಂದು ಹೇಳಿದ್ದಾರೆ. 

45

"ಓರ್ವ ವ್ಯಕ್ತಿ ಬೆಳೆಯುತ್ತಿದ್ದಾನೆ ಅಂದ್ರೆ ಬೆಳೆಯಬೇಕು ಅಂತ ಹೇಳಬೇಕು. ಅಷ್ಟು ವರ್ಷ ರಿಲೇಶನ್‌ಶಿಪ್‌ನಲ್ಲಿದ್ದರೆ ಮೊದಲೇ ದೂರು ನೀಡಬೇಕಿತ್ತು, ಈಗ ಯಾಕೆ ಸಿನಿಮಾ ರಿಲೀಸ್‌ ಟೈಮ್‌ನಲ್ಲಿ ದೂರು ಕೊಡಬೇಕು?" ಎಂದು ಹೇಳಿದ್ದಾರೆ. 

55

"ನನ್ನ ಗಂಡ ಈ ರೀತಿ ಮಾಡ್ತಿದ್ರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ರಿಯಾಲಿಟಿ ಶೋನಲ್ಲಿ ಸ್ಕ್ರಿಪ್ಟ್‌ ರಿಹರ್ಸಲ್‌ ಹೇಗಿರತ್ತೋ ಹಾಗೆ ಇಲ್ಲಿಯೂ ಏನೋ ಆಗಿರತ್ತೆ. ಎಲ್ಲದಕ್ಕೂ ತನಿಖೆ ಆಗಬೇಕು, ಸತ್ಯ ಹೊರಗಡೆ ಬರಬೇಕು" ಎಂದು ಹೇಳಿದ್ದಾರೆ. 

Read more Photos on
click me!

Recommended Stories