Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಶಾಕುಂತಲಾ ಮಾಡಿದ ಕೆಲಸ ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ. ಶಕುಂತಲಾ ಮತ್ತೆ ತನ್ನ ಬುದ್ಧಿಯನ್ನು ಬಿಡದಿರೋದನ್ನು ನೋಡಿ ಏನಿದು ಹೀಗೆ ಆಗ್ತಿದೆಯಲ್ಲಾ ಎಂದು ಬೇಸರ ಮಾಡಿಕೊಂಡಿದ್ದಾರೆ.
ಈ ಹಿಂದೆ ಜೆಡಿಯೇ ಸ್ವತಃ ತನ್ನ ತಾಯಿಗೆ ಬಾಯಿಗೆ ಬಂದ ಹಾಗೆ ಬೈದು, ಮನೆಯಿಂದ ಹೊರಹಾಕಿದ್ದನು. ಆಗ ಗೌತಮ್ ಈ ಹಿಂದೆ ಅವಳು ಮಾಡಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಮನೆಗೆ ಕರೆದುಕೊಂಡು ಬಂದು ಆಶ್ರಯ ಕೊಟ್ಟಿದ್ದನು. ಇದನ್ನು ಶಕುಂತಲಾ ನೆನಪಿನಲ್ಲಿ ಇಟ್ಟುಕೊಂಡಂತಿಲ್ಲ. ದೇವಸ್ಥಾನದಲ್ಲಿ ಕೂತು ಭಿಕ್ಷೆ ಬೇಡಿದ್ದು ಶಕುಂತಲಾಗೆ ನೆನಪಿಲ್ಲ ಎಂದು ಕಾಣುತ್ತದೆ.
25
ಜಯದೇವ್‌ನನ್ನು ಜೈಲಿಗೆ ಕಳಿಸಿದ್ದ ಶಕುಂತಲಾ
ಗೌತಮ್ ಪದೇ ಪದೇ ಒಳ್ಳೆಯತನ ತೋರಿಸಿದರೂ ಕೂಡ ಅವಳಿಗೆ ಬುದ್ಧಿ ಬರ್ತಿಲ್ಲ. ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ ಎನ್ನೋ ತರ ಆಯ್ತು. ಮತ್ತೆ ಅವಳು ಜೆಡಿಯನ್ನು ಕಾಪಾಡುತ್ತಿದ್ದಾಳೆ. ಗೌತಮ್ ಮಗಳು ಮಿಂಚುವನ್ನು ಜಯದೇವ್ ಕಿಡ್ನ್ಯಾಪ್ ಮಾಡಿದ್ದನು, ಆ ಮಕ್ಕಳ ಹುಟ್ಟುಹಬ್ಬದಂದು ಕೇಕ್‌ನಲ್ಲಿ ಬಾಂಬ್ ಇಟ್ಟಿದ್ದು ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ಶಕುಂತಲಾಳೇ ಜಯದೇವ್‌ನನ್ನು ಜೈಲಿಗೆ ಕಳಿಸಿದ್ದಳು.
35
ಶಕುಂತಲಾ ಕುರುಡು ಪ್ರೀತಿ
ಈಗ ಮತ್ತೆ ಅವಳು ಜಯದೇವ್‌ನನ್ನು ಜೈಲಿನಿಂದ ಬಿಡಿಸಿದ್ದಾಳೆ. ಏನೇ ಆದರೂ ನಾನು ನನ್ನ ಮಕ್ಕಳನ್ನು ಬಿಟ್ಟುಕೊಡೋದಿಲ್ಲ ಎಂದು ಅವಳು ಗುಡುಗಿದ್ದಾಳೆ. ಜಯದೇವ್ ತನಗೆ ಏನೇ ಮಾಡಿದರೂ ಕೂಡ, ಅವನು ನನ್ನ ಮಗನೇ ಎಂದು ಕುರುಡು ಪ್ರೀತಿಯಿಂದ ಅವಳು ಈ ರೀತಿ ಮಾಡಿದ್ದಾಳೆ.
ಶಕುಂತಲಾ ಹೀಗೆಲ್ಲ ಮಾಡಿದ್ದು ನೋಡಿ ವೀಕ್ಷಕರಿಗೆ ಸಿಟ್ಟು ಬಂದಿದೆ, ಇಷ್ಟು ಕಷ್ಟ ಅನುಭವಿಸಿದರೂ ಕೂಡ ಅವಳಿಗೆ ಬುದ್ಧಿ ಬಂದಿಲ್ಲ ಎಂದು ವೀಕ್ಷಕರು ಸಿಟ್ಟಾಗಿದ್ದಾರೆ. ಅತ್ತ ಗೌತಮ್-ಭೂಮಿಕಾ ತಮ್ಮ ಮಕ್ಕಳ ಜೊತೆಗೆ ಚೆನ್ನಾಗಿದ್ದರೆ, ಇತ್ತ ಅಮ್ಮ-ಮಗ ಹೇಗೆ ಗೌತಮ್ ಸಾಮ್ರಾಜ್ಯವನ್ನು ಮರಳಿ ಪಡೆಯಬಹುದು ಎಂದು ಯೋಜನೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.
55
ಮುಂದೆ ಏನಾಗಬಹುದು?
ಶಕುಂತಲಾ ಬುದ್ಧಿ ಗೌತಮ್, ಭೂಮಿಗೆ ಗೊತ್ತಾದರೆ ಅವರು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ತಾವಾಯ್ತು, ತಮ್ಮ ಜೀವನ ಆಯ್ತು ಎಂದು ಊರು ಬಿಟ್ಟು ಹೋಗಿದ್ದ ಭೂಮಿ, ಗೌತಮ್ ಮತ್ತೆ ದಿವಾನ್ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾರೆ. ಒಂದು ವೇಳೆ ಆಸ್ತಿಯನ್ನು ಜಯದೇವ್-ಶಕುಂತಲಾಗೆ ಬಿಟ್ಟುಕೊಟ್ಟರೂ ಕೂಡ ಅದನ್ನು ಅವರಿಗೆ ಉಳಿಸಿಕೊಳ್ಳಲು ಬರೋದಿಲ್ಲ ಎನ್ನೋದು ಸಾಬೀತಾಗಿದೆ. ಹೀಗಾಗಿ ಗೌತಮ್ ಮುಂದಿನ ನಿರ್ಧಾರ ಏನು ಎನ್ನೋದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.