ಅಜ್ಜಿಯ ವಿರೋಧದ ನಡುವೆಯೂ ಕರ್ಣ ತನ್ನ ಸಂಪೂರ್ಣ ಆಸ್ತಿಯನ್ನು ಕುತಂತ್ರಿ ಸಂಜಯ್‌ಗೆ ಬರೆದುಕೊಟ್ಟಿದ್ದಾನೆ. ಈ ಅನಿರೀಕ್ಷಿತ ನಿರ್ಧಾರದಿಂದ, ಸಂಜಯ್ ಮುಂದೇನು ಮಾಡುತ್ತಾನೆ ಮತ್ತು ಕರ್ಣನ ನಿಜವಾದ ಉದ್ದೇಶವೇನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಕರ್ಣ ಸೀರಿಯಲ್ನಲ್ಲಿ ಸದ್ಯ ಕರ್ಣನ ಸಾಲದ ಸಮಸ್ಯೆ ತೀರಿದ್ದು, ಕರ್ಣ ಮತ್ತು ನಿಧಿ ಖುಷಿಯಿಂದ ಇರುವ ಕಾಲ ಬಂದಿದೆ. ಅದೇ ಇನ್ನೊಂದೆಡೆ, ಕುತಂತ್ರಿ ಸಂಜಯ್ ದಿಯಾಳಿಗೆ ಮೋಸ ಮಾಡಲು ಬಿಡದೇ ಇಬ್ಬರ ಮದುವೆ ಮಾಡಿಸಿದ್ದಾನೆ ಕರ್ಣ.
26
ಆಸ್ತಿಯ ಜಪ
ಮೂರು ಹೊತ್ತು ಆಸ್ತಿ ಆಸ್ತಿ ಎಂದು ಹಪಹಪಿಸುತ್ತಿದ್ದ ಸಂಜಯ್‌ಗೆ ತನ್ನ ಹೆಸರಿನ ಸಂಪೂರ್ಣ ಆಸ್ತಿಯನ್ನು ಬರೆದುಕೊಟ್ಟು ದಾನಶೂರನಾಗಿದ್ದಾನೆ ಕರ್ಣ. ಅವನ ಹೆಸರಿಗೆ ಆಸ್ತಿ ಕೊಡಬೇಡ, ಹಾವಿಗೆ ಹಾಲು ಹಾಕಿದ್ರೆ ಪ್ರಯೋಜನ ಇಲ್ಲ ಎಂದು ಅಜ್ಜಿ ಹೇಳಿದ್ದರೂ ಕೇಳದೇ ಆಸ್ತಿಯೆಲ್ಲಾ ಕೊಟ್ಟಿದ್ದಾನೆ.
36
ಬಡವ-ಶ್ರೀಮಂತ
ಇಡೀ ವಿಶ್ವದಲ್ಲಿ ಇರುವ ಆಸ್ತಿಯನ್ನು ಎಲ್ಲಾ ಜನರಿಗೆ ಸಮನಾಗಿ ಹಂಚಿದರೆ, ಕೆಲವೇ ವರ್ಷಗಳಲ್ಲಿ ಒಂದಷ್ಟು ಜನ ಶ್ರೀಮಂತರಾಗುತ್ತಾರೆ, ಮತ್ತೊಂದಷ್ಟು ಜನ ಬಡವರಾಗುತ್ತಾರೆ. ಬಂದಿರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಯೋಚಿಸುವವರು ಅದರಿಂದ ಪ್ರಯೋಜನ ಪಡೆದರೆ, ಬೇಕಾಬಿಟ್ಟೆ ಖರ್ಚು ಮಾಡಿಲೂಟಿ ಮಾಡುವವರು ಮತ್ತೆ ಅದೇ ಸ್ಥಿತಿಗೆ ಹೋಗುತ್ತಾರೆ. ಇದು ಜಗದ ನಿಯಮ. ಅದೇ ರೀತಿ ಕರ್ಣ ಸೀರಿಯಲ್ನಲ್ಲಿಯೂ ಆಗಲಿದೆ.
ಅಷ್ಟಕ್ಕೂ ಇದಾಗಲೇ ಅಮೃತಧಾರೆ ಸೀರಿಯಲ್ನಲ್ಲಿ (Amruthadhaare) ಹಿಂದೊಮ್ಮೆ ಗೌತಮ್ ಆಸ್ತಿಗಾಗಿ ಬಾಯಿ ಬಿಡುವ ತನ್ನ ತಮ್ಮ ಜೈದೇವ್ಗೆ ಎಲ್ಲಾ ಆಸ್ತಿ ಬರೆದುಕೊಟ್ಟಿದ್ದ. ಕೊನೆಗೆ ಪರಿಸ್ಥಿತಿ ಏನಾಯ್ತು ಎನ್ನುವುದು ಗೊತ್ತೇ ಇದೆ. ಮತ್ತೆ ಬೀದಿ ಬಿಕಾರಿಯೇ ಆದ ಜೈದೇವ.
56
ಕರ್ಣದಲ್ಲಿ ಅದೇ ಸ್ಟ್ರ್ಯಾಟಜಿ
ಅದೇ ಸ್ಟ್ರ್ಯಾಟಜಿ ಈಗ ಕರ್ಣ ಸೀರಿಯಲ್ಲಿಯೂ ಕಾಣಿಸುವಂತಿದೆ. ಆಸ್ತಿ ಸಿಕ್ಕರೆ ಏನು ಬೇಕಾದರೂ ಮಾಡಬಹುದು ಎನ್ನುತ್ತಾನಲ್ಲ ಸಂಜಯ್. ಅದಕ್ಕೆ ನೋಡೋಣ ಏನು ಮಾಡುತ್ತಾನೆ ಎಂದು ಹೇಳುವ ಮೂಲಕ ಆಸ್ತಿ ಬರೆದುಕೊಟ್ಟಿದ್ದಾನೆ.
66
ಮುಂದಿನ ನಡೆ ಏನು?
ಸಂಪೂರ್ಣ ಆಸ್ತಿಗೆ ವಾರಸುದಾರನಾಗಿರುವ ಸಂಜಯ್ ಮುಂದಿನ ನಡೆ ಏನು? ಕರ್ಣ ಮತ್ತು ಇತರರನ್ನೇ ಹೊರ ಹಾಕ್ತಾನಾ? ಕರ್ಣ ಹೀಗೇಕೆ ಮಾಡಿದ? ದಿಯಾ ಗತಿ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.