ಮದುವೆ ಬಗ್ಗೆ ಬಾಯ್ಬಿಟ್ಟ Bigg Boss ವಿನ್ನರ್‌ ಹನುಮಂತು! ಹುಡುಗಿಯ ಬಗ್ಗೆ ರಿವೀಲ್‌ ಮಾಡಿ ಸಿಕ್ಕಿಬಿದ್ರು

Published : Jul 02, 2026, 08:48 PM IST

ಬಿಗ್‌ಬಾಸ್‌ ಖ್ಯಾತಿಯ ಗಾಯಕ ಹನುಮಂತ ಲಮಾಣಿ, ಈ ಹಿಂದೆ ತಮ್ಮ ಪ್ರೇಯಸಿ ಪವಿತ್ರಾ ಎಂದು ಹೇಳಿದ್ದರು. ಆದರೆ ಇದೀಗ ಸಂದರ್ಶನವೊಂದರಲ್ಲಿ ಪವಿತ್ರಾಳನ್ನು ಮರೆತು, ನಾಚುತ್ತಲೇ ತಮ್ಮ ನಿಜವಾದ ಪ್ರೇಯಸಿಯ ಹೆಸರು ದುರ್ಗಾ ಎಂದು ಬಾಯ್ಬಿಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದ್ದಾರೆ.

PREV
16
ಹಾವೇರಿಯ ಪ್ರತಿಭೆ

ಬಿಗ್‌ಬಾಸ್‌ 11 ರಲ್ಲಿ ಗೆಲುವು ಸಾಧಿಸುವ ಮೂಲಕ ಸದ್ದು ಮಾಡಿದವರು ಹಾವೇರಿ ಮೂಲದ ಜನಪ್ರಿಯ ಗಾಯಕ ಹನುಮಂತ ಲಮಾಣಿ. ‘ಸರಿಗಮಪ ಸೀಸನ್‌ 15’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಇವರ ಲೈಫ್‌ ಚೇಂಜ್‌ ಆಯಿತು. ಬಳಿಕ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ಅಲ್ಲಿ ಪ್ರತಿಭೆ ತೋರಿಸಿದ ಬಳಿಕ ‘ಬಿಗ್ ಬಾಸ್’ ಗೆ ಅವಕಾಶ ಸಿಕ್ಕು, ಕನ್ನಡಿಗರ ಮನೆ ಮಾತಾದರು.

26
ಮನೆ ಕಟ್ಟಿಸ್ತಿರೋ ಹನುಮಂತ

ಬಿಗ್‌ಬಾಸ್‌ನ 50 ಲಕ್ಷ ರೂಪಾಯಿಗಳಲ್ಲಿ ಕೈಗೆ ಸಿಕ್ಕ 35 ಲಕ್ಷ ರೂಪಾಯಿ ಹಾಗೂ ‘ಸರಿಗಮಪ ಸೀಸನ್ 15’ ಕಾರ್ಯಕ್ರಮದಲ್ಲಿ ಮೊದಲ ರನ್ನರ್‌ ಅಪ್ ಆದಾಗ ಸಿಕ್ಕ ಬಹುಮಾನದಿಂದ ಸದ್ಯ ಮನೆ ಕಟ್ಟುವಲ್ಲಿ ಹನುಮಂತ ಅವರು ನಿರತರಾಗಿದ್ದಾರೆ.

36
‘ಕ್ವಾಟ್ಲೆ ಕಿಚನ್’ ಶೋ

ಪ್ರಸ್ತುತ ಹನುಮಂತ ಲಮಾಣಿ ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಕ್ವಾಟ್ಲೆ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆಯೇ ಹನುಮಂತ ಅವರ ಮದುವೆ ಯಾವಾಗ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆ.

46
ಬಿಗ್‌ಬಾಸ್‌ನಲ್ಲಿ ಪವಿತ್ರಾ ಹೆಸರು

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಹನುಮಂತ ಅವರು ತಮ್ಮ ಮದುವೆಯ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಂಡರು. ಆದರೆ ಬಿಗ್‌ಬಾಸ್‌ನಲ್ಲಿ ತಮ್ಮ ಪ್ರೇಯಸಿಯ ಹೆಸರು ಪವಿತ್ರಾ ಎಂದು ಹೇಳಿದ್ದರು. ಆದರೆ ಇದೀಗ ಯಾರು ಪವಿತ್ರಾ ಎಂದು ಪ್ರಶ್ನಿಸುವ ಮೂಲಕ ಸಿಕ್ಕಿಬಿದ್ದಿದ್ದಾರೆ.

56
ಪವಿತ್ರಾ ಹೆಸರನ್ನೇ ಮರೆತರು!

ತಾವು ಪವಿತ್ರಾ ಎಂಬಾಕೆಯ ಹೆಸರು ಹೇಳಿರುವುದನ್ನು ಮರೆತಿರುವ ಹನುಮಂತು, ನಿಜವಾಗಿಯೂ ನಾನು ಆ ಹೆಸರು ಹೇಳಿದ್ನಾ? ಇಲ್ಲಪ್ಪ ನನಗೆ ಅಂಥ ಯಾವ ಸ್ನೇಹಿತೆಯೂ ಇಲ್ಲ. ಮದುವೆ=ಗಿದುವೆ ಏನೂ ಇಲ್ಲ ಎಂದರು.

66
ಆಕೆಯ ಹೆಸರು...

ಕೊನೆಗೆ ತುಂಬಾ ಒತ್ತಾಯ ಮಾಡಿದಾಗ, ಕೊನೆಗೂ ಬಾಯ್ಬಿಟ್ಟ ಹನುಮಂತ, ನನಗೆ ಹುಡುಗಿ ಇರುವುದು ನಿಜ. ಆದರೆ ಆಕೆಯ ಹೆಸರು ಪವಿತ್ರಾ ಅಲ್ಲ, ಹಾಗೆ ಹೇಳಿರುವುದು ನನಗೆ ನೆನಪೂ ಇಲ್ಲ ಎಂದರು. ಕೊನೆಗೆ ನಾಚುತ್ತಲೇ ತಾವು ಮದುವೆಯಾಗುವ ಹುಡುಗಿಯ ಹೆಸರು ದುರ್ಗಾ ಎಂದು ಬಾಯ್ಬಿಟ್ಟರು. ಏನು ಮಾಡ್ತಾರೆ ಎಂದಾಗ ಮನೆಯಲ್ಲಿ ಇರ್‍ತಾಳೆ ಎಂದರು. ಮದುವೆ ಯಾವಾಗ ಎಂದಾಗ ಸರಿಯಾದ ಉತ್ತರವನ್ನು ಹನುಮಂತು ನೀಡಲಿಲ್ಲ. ಸದ್ಯ ಯಾರೀ ದುರ್ಗಾ ಎನ್ನುವ ಬಗ್ಗೆ ಹನುಮಂತು ಫ್ಯಾನ್ಸ್‌ ಹುಡುಕಾಟ ನಡೆಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories