Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಈಗ ಜೈಲಿಗೆ ಸೇರಿದ್ದಾನೆ. ಪದೇ ಪದೇ ಅವನು ದಿಯಾ ಮನೆಗೆ ಹೋಗಿ ತೊಂದರೆ ಕೊಡುತ್ತಿದ್ದನು, ಇದನ್ನು ನೋಡಿ ಅವಳೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಜಯದೇವ್‌ನನ್ನು ಸ್ಟೇಶನ್‌ಗೆ ಹಾಕಲಾಗಿದೆ. ಅವನೀಗ ಅಲ್ಲಿಯೂ ಧಿಮಾಕು ಕಡಿಮೆ ಆಗಿಲ್ಲ.
ಎಲ್ಲ ಆಸ್ತಿಯನ್ನು ಕಳೆದುಕೊಂಡರೂ ಕೂಡ ಅವನಿಗೆ ಪಾಪಪ್ರಜ್ಞೆ ಕಾಡ್ತಿಲ್ಲ, ನಾನು ಮಾಡಿದ್ದು ತಪ್ಪು ಅಂತ ಕೂಡ ಅವನಿಗೆ ಅನಿಸಿಲ್ಲ. ಒಂದು ತುತ್ತು ಊಟ ಸಿಕ್ಕಿಲ್ಲ ಅಂದ್ರೂ ಅವನಿಗೆ ಕೊಬ್ಬು ಕಡಿಮೆ ಆಗಿಲ್ಲ. ಇದು ವೀಕ್ಷಕರಿಗೆ ಇನ್ನಷ್ಟು ಕೋಪ ತರಿಸಿದೆ.
25
ಹೊಸ ಮನೆಗೆ ಕಾಲಿಟ್ಟ ಗೌತಮ್ ದಿವಾನ್
ಗೌತಮ್ ದಿವಾನ್ ಹಾಗೂ ಭೂಮಿಕಾ ಸೇರಿ ಇಡೀ ಕುಟುಂಬ ಆ ಮನೆಗೆ ಕಾಲಿಟ್ಟಿದೆ. ಎಲ್ಲರೂ ಈ ಖುಷಿಯಿಂದ ಇದ್ದಾರೆ. ಅಂದಹಾಗೆ ಮಲ್ಲಿ ಹಾಗೂ ಸುನೀಲ್ ಮಾತ್ರ ಕಾಣಿಸ್ತಿಲ್ಲ. ಗೌತಮ್ ತಂಗಿ, ತಾಯಂದಿರು, ಪಾರ್ಥ-ಅಪೇಕ್ಷಾ, ಮಹಿಮಾ ಮುಂತಾದವರು ಕೂಡ ಆ ಮನೆಗೆ ಕಾಲಿಡಲಿದ್ದಾರೆ. ಒಟ್ಟಿನಲ್ಲಿ ದಿವಾನ್ ಕುಟುಂಬದ ಕಳೆ ಮತ್ತೆ ಬರುತ್ತಿದೆ.
35
ಮಗಳು ಎಲ್ಲಿ?
ಮಗಳಿಂದಲೇ ಗೌತಮ್‌ಗೆ ಅಪಾಯ ಎಂದು ಜ್ಯೋತಿಷಿ ಹೇಳಿದ್ದಾರೆ. ಈಗ ಮಗಳನ್ನು ಹುಡುಕುವ ಸಮಯ ಕೂಡ ಬಂದಿದೆ. ಒಟ್ಟಿನಲ್ಲಿ ಗೌತಮ್ ಮನೆಯಲ್ಲಿರುವ ಮಿಂಚುನೇ ತನ್ನ ಮಗಳು ಎಂದು ಅವನಿಗೆ ಗೊತ್ತಾಗೋ ಸಮಯ ಹತ್ತಿರದಲ್ಲಿದೆ.
ಈಗ ಜಯದೇವ್ ಪೊಲೀಸ್ ಠಾಣೆಯಲ್ಲಿದ್ದಾನೆ. ಸ್ಟೇಶನ್‌ನಲ್ಲಿ ಅವನಿಗೆ ಬಟ್ಟೆ ಕೂಡ ಇಲ್ಲ. ಮುಂದೆ ಅವನಿಗೆ ಜಾಮೀನು ಸಿಕ್ಕಿ, ಹೊರಗಡೆ ಬಂದರೆ ಮತ್ತೆ ಗೌತಮ್‌ಗೆ ತೊಂದರೆ ಕೊಡಲೂಬಹುದು. ಅವನು ಇನ್ನಂತೂ ಸುಮ್ಮನೆ ಇರೋದಿಲ್ಲ.
55
ಕ್ಲೈಮ್ಯಾಕ್ಸ್ ಏನಾಗಬಹುದು?
ಗೌತಮ್ ಮಗಳು ಮಿಂಚುಳನ್ನು ಜಯದೇವ್ ಕಿಡ್ನ್ಯಾಪ್ ಮಾಡಲೂಬಹುದು, ಅವಳನ್ನು ಗೌತಮ್ ಕಾಪಾಡಲು ಹೋಗುತ್ತಾನೆ. ಅಲ್ಲಿ ಅವನ ಜೀವಕ್ಕೆ ಅಪಾಯ ಆಗಲೂಬಹುದು. ಆ ನಂತರ ಗೌತಮ್ ಸೇವ್ ಆಗಲೂಬಹುದು. ಇದೇ ರೀತಿ ಕಥೆ ಅಂತ್ಯ ಆಗಲೂಬಹುದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.