ಸಹಸ್ರಾರು ಕೋಟಿ ಒಡೆಯನಾಗಿದ್ದ 'ಅಮೃತಧಾರೆ' ಸೀರಿಯಲ್‌ನ ಜೈದೇವ್ ಈಗ ಬೀದಿಗೆ ಬಿದ್ದಿದ್ದಾನೆ. ಪತ್ನಿ ದಿಯಾ ತಿರಸ್ಕರಿಸಿದ ನಂತರ, ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ವಿಲನ್ ಪಾತ್ರವಾದರೂ ಜೈದೇವ್‌ನ ಈ ದುಸ್ಥಿತಿಯನ್ನು ಅಭಿಮಾನಿಗಳು ಸಹಿಸುತ್ತಿಲ್ಲ.
ಅಮೃತಧಾರೆ ಸೀರಿಯಲ್ (Amruthadhaare)ನಲ್ಲಿ ಸದ್ಯ ಜೈದೇವನ ಸ್ಥಿತಿ ನೋಡಲು ಆಗುತ್ತಿಲ್ಲ. ಸಹಸ್ರಾರು ಕೋಟಿ ಒಡೆಯನಾಗಿರೋ ಜೈದೇವ್ ಈಗ ತುತ್ತು ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ.
26
ದಿಯಾ ಮುಂದೆ ಗೋಳಾಟ
ಪತ್ನಿ ದಿಯಾಳ ಮನೆಯ ಮುಂದೆ ಬಂದು, ಆತ ಗೋಳಾಡುತ್ತಿದ್ದಾನೆ. ನನ್ನನ್ನು ನಾಯಿಯ ಥರ ನೋಡಬೇಡ, ಹೀಗೆ ಮಾಡಬೇಡ. ನಾನು ಬೀದಿಗೆ ಬಂದಿದ್ದೇನೆ ಎಂದೆಲ್ಲಾ ಅಳುತ್ತಿದ್ದರೂ, ಅವಳು ಕಾರಿನಲ್ಲಿ ಕೇರೇ ಮಾಡದೇ ಹೋಗಿದ್ದಾಳೆ.
36
ಜೈದೇವ್ ವಿಷ್ಯದಲ್ಲಿ ಹಾಗಲ್ಲ
ಈ ದೃಶ್ಯಗಳನ್ನು ನೋಡಿದ ಜೈದೇವ್ ಫ್ಯಾನ್ಸ್ಗೆ ಭಾರಿ ನೋವು ಉಂಟಾಗಿದೆ. ಸಾಮಾನ್ಯವಾಗಿ ಸೀರಿಯಲ್ಗಳಲ್ಲಿ ವಿಲನ್ಗಳನ್ನು ಕಂಡರೆ ಹೊರಗಡೆ ಅವರೇನಾದ್ರೂ ಸಿಕ್ಕರೆ ಅವರು ನಿಜಕ್ಕೂ ವಿಲನ್ಗಳೇ ಎನ್ನುವ ಹಾಗೆ ಹಲವು ಅಭಿಮಾನಿಗಳು ಮಾಡುವುದು ಉಂಟು. ಆದರೆ ಜೈದೇವ್ ವಿಷ್ಯದಲ್ಲಿ ಹಾಗಲ್ಲ.
ಜೈದೇವ್ ಪಾತ್ರಧಾರಿ ರಾಣವ್ ಗೌಡ ಅವರ ಫ್ಯಾನ್ಸ್ಗೆ ಜೈದೇವ್ ವಿಲನ್ ಆಗಿದ್ರೂ ಚೆಂದನೇ. ಮೆರೆಯುತ್ತಿದ್ದ ಜೈದೇವ್ನನ್ನು ಈ ರೀತಿ ಬೀದಿಯಲ್ಲಿ ನೋಡುವುದು ಅವರಿಗೆ ಇಷ್ಟವಾಗುತ್ತಿಲ್ಲ.
56
ಕರ್ಕೊಂಡು ಹೋಗು ಪ್ಲೀಸ್
ಅಷ್ಟಕ್ಕೂ ರಾಣವ್ ಗೌಡ ಅವರ ಮದುವೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಭಾರ್ಗವಿ ಎಲ್ಎಲ್ಬಿ ಸೀರಿಯಲ್‌ನ ರಾಧಾ ಭಗವತಿ ಅವರ ಜೊತೆ ನೆರವೇರಲಿದೆ. ಅದಕ್ಕಾಗಿಯೇ ಭಾವಿ ಗಂಡನನ್ನು ಕರ್ಕೊಂಡು ಹೋಗು, ನಟನ ಸ್ಥಿತಿ ನೋಡಲು ಆಗ್ತಿಲ್ಲ ಎಂದು ಗೋಗರೆಯುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು. ಅದೇ ಇನ್ನೊಂದೆಡೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರ ಮದುವೆಯೂ ಫಿಕ್ಸ್ ಆಗಿರೋದ್ರಿಂದ ಇವಳನ್ನು ಬಿಟ್ಟುಬಿಡು ಎನ್ನುತ್ತಿದ್ದಾರೆ ಫ್ಯಾನ್ಸ್.
66
ಫ್ಯಾನ್ಸ್ ನಿರಾಶೆ
ಒಟ್ಟಿನಲ್ಲಿ ಜೈದೇವ್ ಕ್ಯಾರೆಕ್ಟರ್ ಹೀಗೆ ಬೀದಿಗೆ ಬಂದಿರುವುದನ್ನು ಹಲವರು ಸಹಿಸುತ್ತಿಲ್ಲ. ವಿಲನ್ ಆಗಿರೋ ಆತನಿಗೆ ಇದು ಸರಿಯಾದ ಶಿಕ್ಷೆ ಎಂದು ಮತ್ತೆ ಕೆಲವರು ಹೇಳುತ್ತಿದ್ದರೂ, ಅಭಿಮಾನಿಗಳು ಮಾತ್ರ ನಿರಾಶರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.