ಅಮೃತಧಾರೆ ಸೀರಿಯಲ್ನಲ್ಲಿ ಮಿಂಚು ತಮ್ಮ ಸ್ವಂತ ಮಗಳು ಎಂದು ತಿಳಿದ ಬಳಿಕ ಭೂಮಿಕಾ ಮತ್ತು ಗೌತಮ್ ಅವರ ವರ್ತನೆ ಬದಲಾಗಿದೆ. ಮಗಳನ್ನು ಮಹಿಮಾಗೆ ದತ್ತು ನೀಡುವುದನ್ನು ನಿಲ್ಲಿಸಿ, ವಿಶೇಷ ಆರೈಕೆ ತೋರುತ್ತಿರುವುದು ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಮಿಂಚು ಸಿಕ್ಕ ಖುಷಿಯಲ್ಲಿ ಭೂಮಿಕಾ ಮತ್ತು ಗೌತಮ್ ಇದ್ದಾರೆ. ಆಕೆ ತಮ್ಮ ಸ್ವಂತ ಮಗಳು ಎಂದು ತಿಳಿದಾಕ್ಷಣ ಅವರಿಗೆ ಆಗಿರುವ ಆನಂದಕ್ಕೆ ಪಾರವೇ ಇಲ್ಲ.
26
ವೀಕ್ಷಕರ ಅಸಮಾಧಾನ
ಆದರೆ, ಇದರ ಬೆನ್ನಲ್ಲೇ ಅಮೃತಧಾರೆ ವೀಕ್ಷಕರು ಮಾತ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದಕ್ಕೆ ಕಾರಣ, ಮಿಂಚು ತಮ್ಮದೇ ಮಗಳು ಎಂದು ಗೊತ್ತಾದ ತಕ್ಷಣದಿಂದ ಭೂಮಿಕಾ ಮತ್ತು ಗೌತಮ್ ವರಸೆ ಬದಲಾಗಿರುವುದಕ್ಕೆ.
36
ಮಹಿಮಾಗೆ ದತ್ತು
ಇದಾಗಲೇ ಮಿಂಚುವನ್ನು ಮಹಿಮಾಗೆ ದತ್ತು ಕೊಡಲು ಈ ಜೋಡಿ ಒಪ್ಪಿಕೊಂಡಿತ್ತು. ಹೀಗೆ ದತ್ತು ಕೊಡಲು ಮನಸ್ಸು ಇರಲಿಲ್ಲವಾದರೂ ಕೊನೆಗೆ ಮಿಂಚುವಿನ ಮನಸ್ಥಿತಿಗಿಂತಲೂ ಮಹಿಮಾನೇ ಮುಖ್ಯ ಎಂದುಕೊಂಡಿತ್ತು ಜೋಡಿ.
ಆದರೆ ಇದೀಗ ಮಿಂಚು ಮಗಳು ಎಂದು ತಿಳಿದಾಕ್ಷಣ, ಭೂಮಿಕಾ ಅವಳನ್ನು ಅಪ್ಪಿಕೊಂಡು ನಿನ್ನನ್ನು ಎಲ್ಲಿಯೂ ಕಳಿಸಲ್ಲ, ಯಾರ ಮನೆಗೂ ಕಳಿಸಲ್ಲ ಎಂದಿದ್ದಾಳೆ. ಇದರ ಅರ್ಥ ಮಿಂಚು ಬೇರೆಯವರ ಮಗಳು ಎಂದಾಗ ಕಳಿಸಲು ರೆಡಿ ಇದ್ದಳು ಎಂದಾ?
56
ವಿಶೇಷ ಆರೈಕೆ
ಅದೇ ಇನ್ನೊಂದೆಡೆ, ಆಕೆ ಸ್ವಂತ ಮಗಳು ಎಂದು ತಿಳಿದಾಗಿನಿಂದ ಗೌತಮ್ ಕೂಡ ಮಿಂಚುವನ್ನು ಬೇರೆಯ ರೀತಿಯಲ್ಲಿಯೇ ನೋಡುತ್ತಿದ್ದಾನೆ. ಆಕೆ ಮಲಗಿದಾಗ ನೇಲ್ ಪಾಲಿಷ್ ಹಚ್ಚುವುದರಿಂದ ಹಿಡಿದು ವಿವಿಧ ರೀತಿಯಲ್ಲಿ ಶೃಂಗಾರ ಮಾಡುತ್ತಿದ್ದಾನೆ.
66
ಅಭಿಮಾನಿಗಳ ನಿರಾಸೆ
ಎಲ್ಲಿಯೋ ಸಿಕ್ಕ ಬಾಲಕಿಯನ್ನು ಸ್ವಂತ ಮಗಳಂತೆ ಸಾಕಿರುವುದು ನಿಜವೇ ಆದರೂ, ಅವಳು ತಾವೇ ಹೆತ್ತ ಮಗಳು ಎಂದು ಗೊತ್ತಾದಾಗ ಆಗಿರುವ ಈ ಬದಲಾವಣೆಯಿಂದ ಅಭಿಮಾನಿಗಳು ಕೊಂಚ ನಿರಾಸೆ ಆದಂತಿದೆ. ಈ ಇಬ್ಬರಿಂದಲೂ ಈ ರೀತಿಯನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.