ಆಶ್ರಮ, ಸಂಸ್ಥೆಗಳಿಗೆ ನೋಟ್​ ಬುಕ್​ ಕೊಡಲು ಮುಂದಾದ 'ಕರ್ಣ': ನಟ Kiran Raj ಹೀಗೊಂದು ಮನವಿ

Published : Jun 22, 2026, 02:00 PM IST

'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್, ತಮ್ಮ ಪಾತ್ರದಂತೆಯೇ ನಿಜ ಜೀವನದಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಒಂದು ಭಾಗವನ್ನು ಬಡವರಿಗೆ, ಅನಾಥಾಶ್ರಮಗಳಿಗೆ ಮೀಸಲಿಟ್ಟು, ಆಹಾರ, ನೋಟ್‌ಬುಕ್‌ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.  

PREV
16
ಅಲ್ಲೂ ಕರ್ಣ ಇಲ್ಲೂ ಕರ್ಣ

ಒಬ್ಬ ಮನುಷ್ಯ ಇಷ್ಟೆಲ್ಲಾ ಒಳ್ಳೆಯವನಾಗೋದು ಸಾಧ್ಯನಾ, ಇದ್ಯಾಕೋ ಸ್ವಲ್ಪ ಅತಿಯಾಯಿತು ಎನ್ನಿಸುತ್ತದೆ ಎಂದು Karna Serialನ ಕರ್ಣ ಪಾತ್ರಧಾರಿಯನ್ನು ನೋಡಿದಾಗ ಹಲವಾರು ಮಂದಿ ಕಮೆಂಟ್​ ಮಾಡಿರುವುದು ಉಂಟು. ಜೀವನದಲ್ಲಿ ಇಷ್ಟು ಒಳ್ಳೆಯವರಾಗುವುದು ಸರಿಯಲ್ಲ ಎಂದೂ, ಯಾರು ಎಷ್ಟೇ ನೋವು ಕೊಟ್ಟರೂ ಅದನ್ನು ಖುಷಿಯಿಂದ ಸ್ವೀಕರಿಸುವ ಕ್ಯಾರೆಕ್ಟರ್​ ಬಹುಶಃ ನಿಜ ಜೀವನದಲ್ಲಿ ಯಾರಿಗೂ ಇರಲು ಸಾಧ್ಯವೇ ಇಲ್ಲ ಬಿಡಿ ಇದ್ಯಾಕೋ ಸ್ವಲ್ಪ ಹೆಚ್ಚೇ ಅನ್ನಿಸ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ ಸೀರಿಯಲ್​ ಪಾತ್ರದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಅದೇ ನಿಜ ಜೀವನದಲ್ಲಿ ಅಂಥದ್ದೇ ವ್ಯಕ್ತಿತ್ವ ಇರುವುದು ತುಂಬಾ ತುಂಬಾ ಕಡಿಮೆಯೇ.

26
ಕರ್ಣ ಪಾತ್ರಧಾರಿಯ ರಿಯಲ್​​ ಸ್ಟೋರಿ

ಆದರೆ, ನಿಜ ಜೀವನದಲ್ಲಿಯೂ ಬೇರೆಯವರಿಗೆ ಬೆಳಕಾಗಿದ್ದಾರೆ ಇದೇ ಕರ್ಣ ಪಾತ್ರಧಾರಿ ನಟ ಕಿರಣ್​ ರಾಜ್​ (Kiran Raj). ಅದಕ್ಕೆ ಸಾಕ್ಷಿಯಾದದ್ದು, ಅವರ ನಿಜ ಜೀವನದ ಕಥೆ ಈ ಹಿಂದೆ ಜೀ ಕುಟುಂಬ ಅವಾರ್ಡ್​ನಲ್ಲಿ ಅನಾವರಣಗೊಂಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ನೆಚ್ಚಿನ ನಾಯಕ ಪ್ರಶಸ್ತಿ ಪಡೆದರು ಕಿರಣ್​ ರಾಜ್. ಈ ಸಂದರ್ಭದಲ್ಲಿ ​ ಅವರು ಮಾಡ್ತಿರೋ ಸೇವೆಯ ಬಗ್ಗೆ ಪ್ರಶಸ್ತಿ ನೀಡಲು ಬಂದ ಮೈಸೂರು ಮಹಾರಾಜ ಯದುವೀರ ದತ್ತ ಅವರ ಎದುರು ವಿಟಿ ಮೂಲಕ ತೋರಿಸಿದಾಗ, ವೇದಿಕೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣಿನಲ್ಲಿಯೂ ನೀರು ಬಂದಿತ್ತು.

36
ನೋಟ್​ಬುಕ್​ ನೀಡಲು ಮುಂದಾದ ನಟ

ಇದೀಗ ನಟ ಕಿರಣ್​ ರಾಜ್​ ಅವರು, ತಮ್ಮ ಕಿರಣ್​ ರಾಜ್​ ಫೌಂಡೇಷನ್​ ವತಿಯಿಂದ ನೋಟ್​ಬುಕ್​ ನೀಡಲು ಮುಂದಾಗಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಸರ್ಕಾರಿ ಸಂಘ- ಸಂಸ್ಥೆ ಅಥವಾ ಆಶ್ರಮಕ್ಕೆ ಅಗತ್ಯವಿದ್ದರೆ ನೋಟ್​ ಬುಕ್​ ಕೊಡುತ್ತೇನೆ. ಈ ಬಗ್ಗೆ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಅಗತ್ಯ ಇರುವವರು ಮಾತ್ರ ಹೇಳಿ, ಬಡವರಿಗೆ ಉಪಯೋಗ ಆಗಲಿ ಎಂದು ನಟ ಕಿರಣ್​ ರಾಜ್​ ತಿಳಿಸಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

46
ಸಮಾಜ ಸೇವೆಯಲ್ಲಿ ಕಿರಣ್​ ರಾಜ್​

ನಟ ಕಿರಣ್ ರಾಜ್ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

56
ಪ್ರತಿ ತಿಂಗಳೂ ರೇಷನ್​

ಅನಾಥಾಶ್ರಮ ಒಂದಕ್ಕೆ ಕಿರಣ್​ ರಾಜ್​ ಕಡೆಯಿಂದ ಪ್ರತಿತಿಂಗಳೂ ರೇಷನ್​ ಬರುತ್ತದೆ. 25 ಮಕ್ಕಳ ಸ್ಕೂಲ್​ ಫೀಸ್​ ತುಂಬುತ್ತಿದ್ದಾರೆ. ಆಶ್ರಮದ ಮಕ್ಕಳನ್ನು ಟೂರ್​ಗೂ ಕರೆದುಕೊಂಡು ಹೋಗ್ತಾರೆ. ಈ ಬಗ್ಗೆ ಖುದ್ದು ಆಶ್ರಮವಾಸಿಗಳು ಭಾವುಕರಾಗಿ ನುಡಿದಿದ್ದಾರೆ.

66
ಆ ದಿನಗಳ ನೆನೆದ ನಟ

ಈ ಬಗ್ಗೆ ಮಾತನಾಡಿದ ಕಿರಣ್​ ರಾಜ್ ಅವರು, ಲೈಫ್​ನಲ್ಲಿ ಒಂದು ಸನ್ನಿವೇಶ ಬಂದಿತ್ತು. ದಾರಿನೇ ಇರಲಿಲ್ಲ. ಆಗ ಅನ್ನಿಸ್ತಿತ್ತು. ದೇವರು ಕಷ್ಟ ಅರ್ಥಮಾಡಿಕೊಂಡು ನನಗೆ ಸಪೋರ್ಟ್​ ಮಾಡಿಬಿಡಲಿ ಎಂದು. ಆದರೆ ಅದು ಸಾಧ್ಯ ಆಗಲಿಲ್ಲ. ನನಗಂತೂ ಆಗಲಿಲ್ಲ. ಆದರೆ ಬೇರೆಯವರಿಗೆ ನನ್ನಿಂದ ನೆರವಾಗಲಿ ಎಂದುಕೊಂಡೆ. ಇಂದು ಆರ್ಥಿಕವಾಗಿ ಸದೃಢ ಆಗಿದ್ದೇನೆ. ಆದರೆ ಇವರ ಸ್ಲೈಲ್​ ನೋಡಿದಾಗ ಅದರ ಮುಂದೆ ಎಲ್ಲವೂ ಗೌಣವಾಗುತ್ತದೆ ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories