ಸಾವಿರ ಸಂಚಿಕೆಗಳನ್ನು ಪೂರೈಸಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ, ದೂರವಾಗಿದ್ದ ಗೌತಮ್ ಮತ್ತು ಭೂಮಿಕಾ ಒಂದಾಗಿದ್ದಾರೆ. ಆದರೆ, ಒಳ್ಳೆಯವಳಂತೆ ನಟಿಸಿದ್ದ ಖಳನಾಯಕಿ ಶಕುಂತಲಾ, ತನ್ನ ಮಗ ಜೈದೇವ್ ಜೊತೆ ಸೇರಿ ಮತ್ತೆ ದಂಪತಿಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದ್ದಾಳೆ.
ಮಧ್ಯ ವಯಸ್ಸಿನಲ್ಲಿ ಮದುವೆಯಾಗಿ ಪ್ರೀತಿಯ ಧಾರೆಯನ್ನೇ ಹರಿಸಿರುವ ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ಒಂದು ಸಾವಿರ ಸಂಚಿಕೆಯನ್ನು ಪೂರೈಸಿದೆ. ಭೂಮಿಕಾ ಮತ್ತು ಗೌತಮ್ ಅವರ ಆದರ್ಶ ದಾಂಪತ್ಯ ಕಂಡು ವೀಕ್ಷಕರು ಪುಳಕಿತರಾಗಿರುವುದೂ ಇದೆ.
26
ಎಲ್ಲವೂ ಸುಖಾಂತ್ಯ
ಹಲವಾರು ಕಷ್ಟಗಳನ್ನು ಅನುಭವಿಸಿದ ಬಳಿಕ, ದೂರ ದೂರವಾಗಿದ್ದ ಗೌತಮ್ ಮತ್ತು ಭೂಮಿಕಾ ಒಂದಾಗಿದ್ದಾರೆ. ಕಳೆದು ಹೋಗಿದ್ದ ಪುತ್ರಿ ಮತ್ತೆ ಸಿಕ್ಕಿದ್ದಾಳೆ. ಮಿಂಚುವೇ ಅವರ ಪುತ್ರಿ ಎನ್ನುವುದು ತಿಳಿದ ಬಳಿಕ ಇನ್ನೇನು ಸೀರಿಯಲ್ ಮುಗಿಯತ್ತೆ ಎಂದೇ ಅಂದುಕೊಳ್ಳಲಾಗಿತ್ತು.
36
ಎಳೆದ ಸೀರಿಯಲ್
ಆದರೆ, ಟಿಆರ್ಪಿ ಹೆಚ್ಚಿಗೆ ಇರುವಾಗ ಸೀರಿಯಲ್ಗಳನ್ನು ಅಷ್ಟು ಬೇಗ ಮುಗಿಸುವುದಿಲ್ಲ. ಅದೇ ರೀತಿ ಅಮೃತಧಾರೆ ಸೀರಿಯಲ್ ಅನ್ನು ಮತ್ತೆ ಎಳೆಯಲಾಗಿದೆ. ಈಗ ಇನ್ನೊಂದು ಟ್ವಿಸ್ಟ್ ಕೊಡಲಾಗಿದೆ.
ಜೈದೇವನನ್ನು ಅಮ್ಮ ಶಕುಂತಲಾ ಜೈಲಿಗೆ ಸೇರಿಸಿ ಎಲ್ಲರ ದೃಷ್ಟಿಯಲ್ಲಿಯೂ ಒಳ್ಳೆಯವಳಾಗಿದ್ದಾಳೆ. ಆದರೆ ಜೈದೇವ್ನನ್ನು ಇದೀಗ ಬಿಡಿಸಿಕೊಂಡು ಬಂದು, ಹಾವಿಗೆ ಹಾಲೆರೆದರೆ ಅದು ಕೊಡುವುದು ವಿಷವನ್ನೇ ಎನ್ನುವುದು ಸಾಬೀತು ಮಾಡಿದ್ದಾಳೆ.
56
ಅಮ್ಮ-ಮಗ ಒಗ್ಗಟ್ಟು
ಅಮ್ಮ-ಮಗ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಗೌತಮ್ ಮತ್ತು ಭೂಮಿಕಾ ಜೀವನವನ್ನು ಹಾಳು ಮಾಡುವುದು ಅವರ ಉದ್ದೇಶ. ಇದರ ಅರ್ಥ, ಅಮೃತಧಾರೆ ಸೀರಿಯಲ್ ಸಾವಿರ ಸಂಚಿಕೆಯ ಮೊದಲು ಎಲ್ಲಿತ್ತೋ ಮತ್ತಲ್ಲೇ ಬಂದು ನಿಂತಿದೆ.
66
ಮತ್ತದೇ ಗೋಳು?
ಈಗ ಶಕುಂತಲಾ ಬಗ್ಗೆ ಗೌತಮ್ಗೂ ಡೌಟ್ ಬರಲ್ಲ, ಭೂಮಿಕಾಗೂ ಬರಲ್ಲ. ಮತ್ತೆ ವಿಲನ್ಗಳ ಆರ್ಭಟ ಹೆಚ್ಚಾಗುತ್ತದೆ. ನಿಧಾನವಾಗಿ ವಿಷ್ಯ ಭೂಮಿಕಾಗೆ ಗೊತ್ತಾದ್ರೂ ಗೌತಮ್ಗೆ ಗೊತ್ತಾಗಲ್ಲ.... ಹೀಗೆ ಮತ್ತೆ ಅದೇ ರಿಪೀಟೆಡ್ ಕಥೆಯ ಜಾಡು ಹಿಡಿದು ಹೋಗುವಂತೆ ಕಾಣುತ್ತಿದೆ ಸೀರಿಯಲ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.