ಸಂಜನಾ ಯಾಕೆ ಈ ರೀತಿ ಮಾಡಿದರು ಎನ್ನುವ ಪ್ರಶ್ನೆ ಎದುರಾಗಿತ್ತು. ಅದಕ್ಕೀಗ ಸಂಜನಾ ಬುರ್ಲಿ ಅವರು Asianet Suvarna News ಡಿಜಿಟಲ್ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.
ಇದ್ದರೆ ಸ್ನೇಹಾ ರೀತಿ ಇರಬೇಕು, ದುಡಿಯಬೇಕು, ದುಡಿದು ಬದುಕಬೇಕು, ಸ್ವಾಭಿಮಾನ ಮುಖ್ಯ, ಶಿಕ್ಷಣ ಮುಖ್ಯ ಎಂದು ಸ್ನೇಹಾ ತೋರಿಸಿಕೊಟ್ಟಿದ್ದಳು. ಬಡವರ ಮನೆಯಲ್ಲಿ ಹುಟ್ಟಿದ್ದರೂ ಕೂಡ, ಸ್ನೇಹಾಗೆ ಅನ್ಯಾಯದ ವಿರುದ್ಧ ದನಿ ಎತ್ತುವ ಶಕ್ತಿ ಇತ್ತು. ಸ್ನೇಹಾಳಿಗೆ ಕನ್ನಡ ಕಿರುತೆರೆಯ ಜನರು ತುಂಬ ಪ್ರೀತಿ ಕೊಟ್ಟಿದ್ದರು.