‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ವಿಶ್ವ ಪಾತ್ರದಲ್ಲಿ ನಟ ಭವಿಷ್ ಗೌಡ ಅಭಿನಯಿಸುತ್ತಿದ್ದರು. ವಿಶ್ವ ಆಗಿ ಅವರು ವೀಕ್ಷಕರಿಗೆ ಹತ್ತಿರ ಆಗಿದ್ದರು. ಇಷ್ಟು ಜನಪ್ರಿಯತೆ ನೀಡಿದ ಧಾರಾವಾಹಿಯನ್ನು ಯಾವ ಕಾರಣಕ್ಕೆ ಬಿಟ್ಟೆ, ನಿಜಕ್ಕೂ ಏನಾಯ್ತು ಎಂದು ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.
ಜಾನು-ವಿಶ್ವ ಕಾಂಬಿನೇಶನ್ ದೊಡ್ಡ ಮಟ್ಟದಲ್ಲಿ ಜನರಿಗೆ ಹತ್ತಿರ ಆಗಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕೊಟ್ಟಿದ್ದ ವಿಶ್ವ ಪಾತ್ರಕ್ಕೆ ಭವಿಷ್ ಗೌಡ ಅವರು ಗುಡ್‌ಬೈ ಹೇಳಿ, ಇನ್ನೊಂದು ಸೀರಿಯಲ್ ತಂಡವನ್ನು ಸೇರಿಕೊಂಡಿದ್ದರು. ಇದು ವೀಕ್ಷಕರಿಗೆ ಬೇಸರ ತಂದಿತ್ತು.
25
ಸೀರಿಯಲ್ ಬಿಟ್ಟಿದ್ಯಾಕೆ?
“ನನಗೆ ಲಕ್ಷ್ಮೀ ನಿವಾಸ ಧಾರಾವಾಹಿ ನಿಜಕ್ಕೂ ಒಳ್ಳೆಯ ಹೆಸರು ತಂದುಕೊಟ್ಟಿದೆ. ಎಲ್ಲರೂ ವಿಶ್ವ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ನಾನು ಈ ಸೀರಿಯಲ್‌ನಲ್ಲಿ ತಿಂಗಳಿಗೆ ಒಂದೆರಡು ದಿನ ಮಾತ್ರ ನಟಿಸುತ್ತಿದ್ದೆ, ಆದರೆ ಧಾರಾವಾಹಿಯಲ್ಲಿ ತಿಂಗಳು ಪೂರ್ತಿ ಕಾಣಿಸಿಕೊಳ್ಳುತ್ತಿದ್ದೆ” ಎಂದು ಅವರು ಹೇಳಿದ್ದಾರೆ.
35
ಕಾಲ್‌ಶೀಟ್ ಕಡಿಮೆ ಸಿಕ್ಕಿತು
“ಕಲಾವಿದರಿಗೆ ಬದುಕಲು ಸಂಭಾವನೆಯೂ ಬೇಕು. ನನಗೆ ಧಾರಾವಾಹಿ ತಂಡದಿಂದ ಪೇಮೆಂಟ್ ಸಮಸ್ಯೆ, ಅಥವಾ ಇನ್ಯಾವುದೇ ಸಮಸ್ಯೆ ಆಗಿಲ್ಲ. ಈ ಧಾರಾವಾಹಿಯನ್ನು ಬೇರೆಯವರು ಬೇರೆ ಕಾರಣಕ್ಕೆ ಬಿಟ್ಟಿರಬಹುದು. ಆದರೆ ನಾನು ಕಾಲ್‌ಶೀಟ್ ಕಡಿಮೆ ಸಿಕ್ಕಿತು ಎಂದು ಬಿಟ್ಟಿದ್ದೇನೆ ಅಷ್ಟೇ” ಎಂದು ಅವರು ಹೇಳಿದ್ದಾರೆ.
“ಆ ಧಾರಾವಾಹಿ ತಂಡದವರನ್ನು ನಾನು ಕಾಂಟ್ಯಾಕ್ಟ್ ಕೂಡ ಮಾಡಿಲ್ಲ. ಹೀಗಾಗಿ ಬೇರೆಯವರು ಯಾವ ಕಾರಣಕ್ಕೆ ಸೀರಿಯಲ್ ಬಿಟ್ಟರು ಎಂದು ಗೊತ್ತಾಗಿಲ್ಲ. ಆದರೆ ನಾನು ಮಾತ್ರ ಯಾವುದೋ ಸಮಸ್ಯೆಯಿಂದ ಧಾರಾವಾಹಿಯನ್ನು ಬಿಟ್ಟಿಲ್ಲ. ನನಗೆ ಬರಬೇಕಾದ ಸಂಭಾವನೆ ಸಿಕ್ಕಿದೆ, ಆದರೆ ಕಾಲ್‌ಶೀಟ್ ಕಡಿಮೆ ಸಿಕ್ಕಿತ್ತು ಎನ್ನುವ ಕಾರಣಕ್ಕೆ ಬಿಟ್ಟೆ” ಎಂದು ಅವರು ಹೇಳಿದ್ದಾರೆ.
55
ಹೊಸ ಧಾರಾವಾಹಿಯಲ್ಲಿ ಭವಿಷ್ ಗೌಡ
“ಶ್ರೀಗಂಧದಗುಡಿ ಧಾರಾವಾಹಿಯಲ್ಲಿ ಹರಿಶ್ಚಂದ್ರ ಎನ್ನುವ ಪಾತ್ರ ಮಾಡುತ್ತಿದ್ದೇನೆ. ಹರಿಶ್ಚಂದ್ರ ಯಾವಾಗಲೂ ಸುಳ್ಳು ಹೇಳುತ್ತಾನೆ, ಇದರಿಂದ ಯಾರಿಗೂ ಸಮಸ್ಯೆ ಆಗೋದಿಲ್ಲ. ಲಕ್ಷ್ಮೀ ನಿವಾಸದಲ್ಲಿ ಅಳುತ್ತಿದ್ದೆ, ಇಲ್ಲಿ ಕಾಮಿಡಿ ಮಾಡ್ತೀನಿ. ನಿಜಕ್ಕೂ ಜನರಿಗೆ ಇಷ್ಟ ಆಗತ್ತೆ” ಎಂದು ಅವರು ಹೇಳಿದ್ದಾರೆ.