Lakshmi Nivasa Serial: ಲಕ್ಷ್ಮೀ ಪಾತ್ರಕ್ಕೆ ಎಂಟ್ರಿ ಕೊಟ್ಟ ಕನ್ನಡ ಚಿತ್ರರಂಗದ ಖ್ಯಾತ ನಟಿ! ಯಾರದು?

Published : Jun 20, 2025, 08:14 AM ISTUpdated : Jun 20, 2025, 09:52 AM IST

ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಲಕ್ಷ್ಮೀ ಆಗಿ ನಟಿಸುತ್ತಿದ್ದ ಶ್ವೇತಾ ಅವರು ಸೀರಿಯಲ್‌ನಿಂದ ಹೊರಗಡೆ ಬಂದಿದ್ದಾರೆ. ತಾಯಿಯ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಹೀಗಾಗಿ ಇವರ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ. 

PREV
16

ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಮಾಧುರಿ ಈಗ ಲಕ್ಷ್ಮೀ ನಿವಾಸ ಧಾರಾವಾಹಿಗೆ ಲಕ್ಷ್ಮೀಯಾಗಿ ಎಂಟ್ರಿ ಕೊಡುತ್ತಿದ್ದಾರೆ.

26

ಹೌದು, ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಮಾಧುರಿ ಅವರು ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರೋದನ್ನು ಈ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

46

ಅಮೃತವರ್ಷಿಣಿ, ಗೌತಮಿ, ಮಾಂಗಲ್ಯ ಮುಂತಾದ ಧಾರಾವಾಹಿಗಳಲ್ಲಿ ಮಾಧುರಿ ನಟಿಸಿದ್ದರು.

56

ಇಂದು ಆಡಿಷನ್‌ ಕೊಡಿ ಅಂತ ಹಿರಿಯ ಕಲಾವಿದರಿಗೆ ಅವಮಾನ ಮಾಡ್ತಾರೆ, ಈ ಹಿಂದೆ ಆಡಿಷನ್‌ ಇರುತ್ತಿರಲಿಲ್ಲ, ಈಗ ಆಡಿಷನ್‌ ಕೊಡಬೇಕು ಅಂತ ನಟಿ ಮಾಧುರಿ ಅವರು ನಟನೆಯಿಂದ ದೂರ ಇದ್ದರು.

66

ನಟಿ ಮಾಧುರಿ ಅವರಿಗೆ ಮೊದಲು ಆಕ್ಷನ್‌ ಕಟ್‌ ಹೇಳಿದ್ದೇ ನಟ ಉಪೇಂದ್ರ ಅವರು. ಅಜಾಗಜಾಂತರ ಸಿನಿಮಾದಲ್ಲಿ ಹೀರೋಯಿನ್‌ ಫ್ರೆಂಡ್‌ ಆಗಿ ಮಾಧುರಿ ನಟಿಸಿದ್ದರು.

Read more Photos on
click me!

Recommended Stories