Lakshmi Nivasa Serial ತೊರೆದ ನಟಿ ವಿನೋದಿನಿ; TRP ಚೆನ್ನಾಗಿದ್ರೂ ಹೊರಬಂದಿದ್ದೇಕೆ ಖ್ಯಾತ ನಟಿ?

Published : Jun 19, 2025, 08:49 PM ISTUpdated : Jun 19, 2025, 10:54 PM IST

ಲಕ್ಷ್ಮೀ ನಿವಾಸ ಧಾರಾವಾಹಿ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಅಲಿಯಾಸ್ ವಿನೂದಿನಿ‌ ಅವರು ನಟಿಸುತ್ತಿದ್ದಾರೆ. 

PREV
16

ಈ ಹಿಂದೆ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ಶ್ವೇತಾ ಅವರು ಮದುವೆಯಾದಮೇಲೆ ನಟನೆಯಿಂದ ದೂರವಿದ್ದರು.

26

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ನಟಿಸುತ್ತಿದ್ದಾರೆ. ಈ ಮೂಲಕ ಅವರು ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದರು.

36

ಈಗ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಅವರು ತಾವು ಸೀರಿಯಲ್‌ನಿಂದ ಹೊರಗಡೆ ಬಂದಿರೋದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

46

ವಿನೋದಿನಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದು, “ವೈಯಕ್ತಿಕ ಕಾರಣ ಹಾಗೂ ನನ್ನ ತಾಯಿಯ ಆರೋಗ್ಯ ಚೆನ್ನಾಗಿಲ್ಲದ ಕಾರಣ ನಾನು ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಬ್ರೇಕ್‌ ತಗೊಳ್ತಿದ್ದೇನೆ. ನನ್ನನ್ನು ಒಪ್ಪಿಕೊಂಡಿದ್ದಕ್ಕೆ ಇಡೀ ಕರ್ನಾಟಕ ಜನತೆಗೆ ಧನ್ಯವಾದಗಳು. ಸೆಟ್‌ನಲ್ಲಿರುವ ಕೆಲ ಜನರನ್ನು ಮಿಸ್‌ ಮಾಡಿಕೊಳ್ತೀನಿ. ನನ್ನ ಕನ್ನಡ ಜನತೆಗೆ ಮತ್ತೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಜೀ ಕನ್ನಡ ವಾಹಿನಿಗೆ ಧನ್ಯವಾದಗಳು” ಎಂದಿದ್ದಾರೆ. 

56

ಶ್ವೇತಾ ಅವರು ಧಾರಾವಾಹಿಯಿಂದ ಸಂಪೂರ್ಣ ಹೊರಗಡೆ ಬಂದಿದ್ದಾರಾ? ಅಥವಾ ಮತ್ತೆ ಸೀರಿಯಲ್‌ನಲ್ಲಿ ಕಾಣಿಸಿಕೊಳ್ತಾರಾ ಎಂದು ಕಾದು ನೋಡಬೇಕಿದೆ.

66

ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಕಥೆಗಳಿವೆ. ಹೀಗಾಗಿ ಅವುಗಳ ಮೇಲೆ ಕಥೆ ಸಾಗಬಹುದು. ಆದರೆ ಲಕ್ಷ್ಮೀ ಪಾತ್ರಕ್ಕೆ ಇನ್ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. 

Read more Photos on
click me!

Recommended Stories