BBK 12: ಬಿಗ್‌ಬಾಸ್ ಮನೆಗೆ ಬಂದ ಸ್ಟಾರ್ ಹೀರೋ: ಗಿಲ್ಲಿಗೆ ಮೋಸ ಆಗ್ತಿದೆ ಎಂದ ಅಭಿಮಾನಿಗಳು

Published : Dec 18, 2025, 08:52 AM IST

ಕನ್ನಡದ ಸ್ಟಾರ್ ಹೀರೋ ಸಿನಿಮಾದ ಪ್ರಚಾರಕ್ಕಾಗಿ ಬಿಗ್‌ಬಾಸ್ ಮನೆಗೆ ಆಗಮಿಸಿದ್ದಾರೆ. ಆದರೆ ಇದು ಗಿಲ್ಲಿ' ನಟ ಅವರ ಅಭಿಮಾನಿಗಳು ಅಸಮಾಧಾನಕ್ಕೆ ಕಾರಣವಾಗಿದ್ದು, ಬಿಗ್‌ಬಾಸ್ ವಿರುದ್ಧ ಭೇದಭಾವದ ಆರೋಪ ಮಾಡುತ್ತಿದ್ದಾರೆ.

PREV
15
ಬಿಗ್‌ಬಾಸ್ ಮನೆಗೆ ಸ್ಟಾರ್ ನಟನ ಎಂಟ್ರಿ

ಬಿಗ್‌ಬಾಸ್ ಮನೆಗೆ ಆಗಾಗ್ಗೆ ವಿಶೇಷ ಅತಿಥಿಗಳು ಆಗಮಿಸುತ್ತಿರುತ್ತಾರೆ. ಈ ಹಿಂದೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತಮ್ಮ ಜಿಎಸ್‌ಟಿ ಚಿತ್ರತಂಡದೊಂದಿಗೆ ಆಗಮಿಸಿ ಸಿನಿಮಾ ಪ್ರಮೋಟ್ ಮಾಡಿದ್ದರು. ಇದೀಗ ಕನ್ನಡದ ಮತ್ತೋರ್ವ ಸ್ಟಾರ್ ನಟ ಆಗಮಿಸಿದ್ದಾರೆ. ಈ ವಿಷಯ ತಿಳಿಯುತ್ತಲೇ ಸ್ಪರ್ಧಿ ಗಿಲ್ಲಿ ನಟ ಅವರ ಅಭಿಮಾನಿಗಳು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

25
ಮನೆಗೆ ಬಂದ ಸ್ಟಾರ್ ನಟ ಯಾರು?

ಬಿಗ್‌ಬಾಸ್ ಮನೆಗೆ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಆಗಮಿಸಿದ್ದಾರೆ. ರಾಶಿಕಾ ಶೆಟ್ಟಿ ಅಭಿನಯದ ಪ್ಯಾರ್ ಸಿನಿಮಾದ ಪ್ರಚಾರಕ್ಕಾಗಿ ಚಿತ್ರದ ಹೀರೋ ರಿಶ್ವಿನ್ ಜೊತೆ ರವಿಚಂದ್ರನ್ ಬಂದಿದ್ದು, ಇಲ್ಲಿಯೇ ಟ್ರೈಲರ್ ಲಾಂಚ್ ಮಾಡೋದಾಗಿ ಹೇಳಿದ್ದಾರೆ. ಈ ಚಿತ್ರದಲ್ಲಿ ರಾಶಿಕಾ ಅವರ ತಂದೆ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ. ನಿನ್ನೆಯಷ್ಟೇ ಚಿತ್ರದ ಮೆಲೋಡಿ ಹಾಡಿನ ಝಲಕ್ ಬಿಡುಗಡೆಯಾಗಿತ್ತು.

35
ಗಿಲ್ಲಿ ಫ್ಯಾನ್ಸ್ ಬೇಸರ!

ಕೆಲ ದಿನಗಳ ಹಿಂದೆಯಷ್ಟೇ ಗಿಲ್ಲಿ ನಟ ಅಭಿನಯದ ಡೆವಿಲ್ ಸಿನಿಮಾ ಬಿಡುಗಡೆಯಾಗಿತ್ತು. ಹಾಗಾಗಿ ಬಿಗ್‌ಬಾಸ್ ಮನೆಯಲ್ಲಿ ಡೆವಿಲ್ ಸಿನಿಮಾದ ಟ್ರೈಲರ್ ತೋರಿಸಬೇಕು ಅನ್ನೋದು ಗಿಲ್ಲಿ ನಟ ಮತ್ತು ದರ್ಶನ್ ಅಭಿಮಾನಿಗಳ ಆಸೆಯಾಗಿತ್ತು. ಆದ್ರೆ ಕಾರಣಾಂತರಗಳಿಂದ ಈ ಆಸೆ ನೆರವೇರಲಿಲ್ಲ. ಇದೀಗ ಇದೇ ಮನೆಯಲ್ಲಿರುವ ರಾಶಿಕಾ ನಟನೆಯ ಪ್ರಾರ್ ಪ್ರಚಾರಕ್ಕೆ ಗಿಲ್ಲಿ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

45
ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು

ಬಿಗ್‌ಬಾಸ್ ಸೀಸನ್ 11ರಲ್ಲಿ ಉಗ್ರಂ ಮಂಜು ನಟನೆಯ 'ಮ್ಯಾಕ್ಸ್' ಸಿನಿಮಾದ ಟ್ರೈಲರ್ ಮತ್ತು ಸಕ್ಸಸ್ ವಿಡಿಯೋಗಳನ್ನು ತೋರಿಸಲಾಗಿತ್ತು. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್, ಜಿಎಸ್‌ಟಿ ಸಿನಿಮಾದ ಭಾಗವಾಗಿದ್ದರು. ಸೃಜನ್ ಲೋಕೇಶ್ ಜೊತೆಯಲ್ಲಿ ನಿಂತುಕೊಂಡು ರಜತ್ ಸಿನಿಮಾದ ಬಗ್ಗೆ ಮಾತನಾಡಿದ್ದರು.

ಇದನ್ನು ಓದಿ: BBK 12: ಗಿಲ್ಲಿಯ ಚಿತ್ತಾಲ ಪತ್ತಾಲ್ ಆಟಕ್ಕೆ ಸುಸ್ತಾದ ರಾಶಿಕಾ; ಈ ವಾರದ ಕ್ಯಾಪ್ಟನ್ ಯಾರು?

55
ಭೇದಭಾವಕ್ಕೆ ಅಸಮಾಧಾನ?

ಈ ಎಲ್ಲಾ ಘಟನೆಗಳಿಂದ ಬೇಸರ ವ್ಯಕ್ತಪಡಿಸಿರುವ ಗಿಲ್ಲಿ ಅಭಿಮಾನಿಗಳು, ಬಿಗ್‌ಬಾಸ್‌ನಿಂದ ಭೇದಭಾವ ಆಗ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಗಿಲ್ಲಿಗೊಂದು ನ್ಯಾಯ? ರಾಶಿಕಾಗೆ ಮತ್ತೊಂದು ನ್ಯಾಯಾನಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: BBK 12: ನ್ಯಾಯವಾಗಿಯೇ ಆಡಲ್ಲ, ನಾಯಿ ಬಾಲ ಡೊಂಕೆ; ಏನಿದು ಹೊಸ ಕಿರಿಕ್?

Read more Photos on
click me!

Recommended Stories