ಬಿಗ್ಬಾಸ್ 12ರ ಫಿನಾಲೆಗೆ ಎರಡೇ ದಿನಗಳು ಬಾಕಿಯಿದ್ದು, ಗಿಲ್ಲಿ ನಟನ ಹವಾ ಜೋರಾಗಿದೆ. ಇದೀಗ ನಟ ಶಿವರಾಜ್ ಕುಮಾರ್ ಅವರು ಗಿಲ್ಲಿ ನಟನ ಸಹಜ ಗುಣವನ್ನು ಮೆಚ್ಚಿಕೊಂಡಿದ್ದು, ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಪರೋಕ್ಷವಾಗಿ ಹಿಂಟ್ ಕೊಟ್ಟರು.
ಬಿಗ್ಬಾಸ್ 12ರ (Bigg Boss)ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಎರಡೇ ದಿನಗಳು ಇವೆ. ಇದೇ 18ರಂದು ಫಿನಾಲೆ ನಡೆಯಲಿದೆ. ಇದಾಗಲೇ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಅಭಿಮಾನಿಗಳು ಭರ್ಜರಿಯಾಗಿ ಕೊನೆಯ ಕ್ಷಣದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
25
ಗಿಲ್ಲಿ ನಟನ ಹವಾ
ಇದರ ನಡುವೆಯೇ, ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿನಟನ (Bigg Boss Gilli Nata) ಹವಾ ಜೋರಾಗಿಯೇ ಇದೆ. ಬಿಗ್ಬಾಸ್ನಿಂದ ಹೊರ ಬಂದಿರುವ ಸ್ಪರ್ಧಿಗಳೂ ಸೇರಿದಂತೆ ಎಲ್ಲರ ಬಾಯಲ್ಲಿಯೂ ಗಿಲ್ಲಿ ನಟನ ಮಾತೇ. ಅವರೇ ವಿನ್ ಆಗುವುದು ಎಂದು ಬಹುತೇಕ ಎಲ್ಲರೂ ಹೇಳುತ್ತಿದ್ದಾರೆ.
35
ಶಿವರಾಜ್ ಕುಮಾರ್ ಹೇಳಿದ್ದೇನು?
ಇದೀಗ ನಟ ಶಿವರಾಜ್ ಕುಮಾರ್ ಕೂಡ ಗಿಲ್ಲಿ ನಟನ ಬಗ್ಗೆ ಒಳ್ಳೆಯ ಮಾತುಗಳನ್ನಾಗಿಡಿದ್ದಾರೆ. ತಮ್ಮದೇ ಆದ ಸ್ಟೈಲ್ನಲ್ಲಿ ಗಿಲ್ಲಿ ಅವರಿಗೆ ವಿಷ್ ಮಾಡಿದ್ದಾರೆ ಶಿವಣ್ಣ.
ಇದೇ ವೇಳೆ ಗಿಲ್ಲಿ ಅವರ ಗುಣದ ಬಗ್ಗೆ ಹಾಗೂ ಅವರು ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದು ತಿಳಿಸಿದ್ದಾರೆ ನಟ ಶಿವರಾಜ್ ಕುಮಾರ್ (Shivaraj Kumar about Gilli Nata). ಗಿಲ್ಲಿ ನಟ ಎಲ್ಲೂ ಫೇಕ್ ಇಲ್ಲ. ಅದಕ್ಕೇ ನನಗೆ ಇಷ್ಟ ಆಗೋದು. ಅವರಿಗೆ ತುಂಬಾ ಪ್ರಚಾರ ಬರುತ್ತಿದೆ ನಿಜವಾದರೂ ನ್ಯಾಚುರಲ್ ಆಗಿ ಒಳ್ಳೆಯವರಾಗಿರುವವರಿಗೆ ಅಷ್ಟೊಂದು ಪ್ರಚಾರವೂ ಬೇಡ. ಆತ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.
55
ಹಿಂಟ್ ಕೊಟ್ಟರು?
ಗಿಲ್ಲಿ ನಟ ಸ್ಟ್ರೇಟ್ ಫಾರ್ವರ್ಡ್ ಆಗಿ ಮಾತನಾಡುತ್ತಾರೆ.ಕೆಲವರು ಕಂಟೆಂಟ್ಗೋಸ್ಕರ ಮಾತನಾಡುತ್ತಾರೆ. ಆದರೆ ಗಿಲ್ಲಿ ಹಾಗಲ್ಲ. ನ್ಯಾಚುರಲ್ ಇನ್ಸ್ಟೆಂಟ್ ಇದೆ, ಅದೇ ಜನರಿಗೆ ಇಷ್ಟವಾಗೋದು ಎನ್ನುವ ಮೂಲಕ ಬಿಗ್ಬಾಸ್ ಗೆಲ್ಲುವುದು ಗಿಲ್ಲಿ ನಟನೇ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.