Aase Serial: ಕೊನೆಗೂ ವೀಕ್ಷಕರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಆ ಗಳೀಗೆ ಬಂದೇ ಬಿಟ್ಟಿತು. ಸ್ಟಾರ್ ಸುವರ್ಣ ವಾಹಿನಿಯ ‘ಆಸೆ’ಧಾರಾವಾಹಿಯಲ್ಲಿ ಕೊನೆಗೂ ಸಕ್ರಬೈಲು ಶಾಂತಿ ಸೂರ್ಯನನ್ನು ಮಗ ಎಂದು ಒಪ್ಪಿಕೊಂಡು ಅಪ್ಪಿ ಮುತ್ತಾಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಆಸೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನೂ ಕೂಡ ಜನರ ಫೇವರಿಟ್. ಕಾರಣ ಅವರ ನೈಜ್ಯ ನಟನೆ. ಇದೀಗ ಜನ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಗಳಿಗೆ ಬಂದಿದೆ.
27
ಆ ಗಳಿಗೆ ಬಂದೇ ಬಿಟ್ಟಿತು
ಆಸೆ ಧಾರಾವಾಹಿಯಲ್ಲ ಜನರು ಬಹಳ ಸಮಯದಿಂದ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಆ ಗಳಿಗೆ ಕೊನೆಗೂ ಬಂದೇ ಬಿಟ್ಟಿದೆ. ಸಕ್ರೈಬೈಲು ಶಾಂತಿ ಕೊನೆಗೂ ಸೂರ್ಯನನ್ನು ಮಗ ಎಂದು ಒಪ್ಪಿಕೊಂಡು ಸೂರ್ಯನನ್ನು ಅಪ್ಪಿ ಮುದ್ದಾಡಿದ್ದಾರೆ.
37
ಏನಾಗ್ತಿದೆ ಆಸೆ ಸೀರಿಯಲ್ ನಲ್ಲಿ?
ಆಸೆ ಧಾರಾವಾಹಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪ್ರೊಮೋದಂತೆ ಸೂರ್ಯ ಸಕ್ರೆ ಎಂದು ಕರೆದಾಗ ಶಾಂತಿ ಯಾಕೋ ಸಕ್ರೆ ಅಂತ ಕರಿತಿದ್ದಿ, ಬಾಯಿ ತುಂಬಾ ಅಮ್ಮ ಎಂದು ಕರಿ ಎನ್ನುತ್ತಾಳೆ. ಇದನ್ನು ಕೇಳಿ ಸೂರ್ಯ ಕಣ್ಣೀರಿಟ್ಟಾಗ, ಆತನನ್ನು ಬಿಗಿದಪ್ಪಿ ತಲೆ ಸವರಿದ್ದಾಳೆ ಶಾಂತಿ.
ದಿಢೀರ್ ಆಗಿ ಬದಲಾದ ಶಾಂತಿಯ ವರ್ತನೆ ನೋಡಿ, ಎಷ್ಟೊ ವರ್ಷಗಳ ಬಳಿಕ ಸೂರ್ಯನನ್ನು ತಪ್ಪಿ ಮಗ ಎಂದು ಕರೆದುದ್ದಾಗಿ ಸೂರ್ಯ, ಮೀನಾ ಸೇರಿ ಮನೆಮಂದಿ ಕಣ್ಣಿರಿಟ್ಟಿದ್ದಾರೆ. ಆದರೆ ಇದು ನಿಜವೇ ಅನ್ನೋದು ವೀಕ್ಷಕರಿಗೆ ಡೌಟ್.
57
ವೀಕ್ಷಕರು ಏನು ಹೇಳುತ್ತಿದ್ದಾರೆ?
ತಾಯಿ ಮಗನ ಪ್ರೀತಿ ಕಂಡು ವೀಕ್ಷಕರು ಸಹ ರೋಮಾಂಚನಗೊಂಡಿದ್ದಾರೆ. ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ ಆಯ್ತು. ಇಬ್ಬರನ್ನು ಹೀಗೆ ನೋಡಿ ಖುಷಿ ಆಗ್ತಿದೆ. ಸೂರ್ಯನಿಗೆ ಅಮ್ಮನ ಪ್ರೀತಿ ಹೀಗೆ ಸಿಗುತ್ತಿರಲಿ ಎಂದು ಹಾರೈಸಿದ್ದಾರೆ.
67
ಇದು ಕನಸಲ್ಲ ತಾನೆ?
ಇನ್ನೂ ಹಲವು ವೀಕ್ಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಇದು ಯಾರದ್ದೋ ಕನಸಾಗಿರಬಹುದು. ಇಲ್ಲವಾದರೆ ಶಾಂತಿ ಹೀಗೆಲ್ಲಾ ಮಾಡೋದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಎಪಿಸೋಡ್ ನೋಡಿ ಖುಷಿ ಪಟ್ಟಿದ್ದಾರೆ.
77
ಹಿಂದೆ ಏನಾಗಿತ್ತು?
ಸೂರ್ಯನನ್ನು ನೋಡಿದ್ರೆ ಕಿಡಿ ಕಾರು ಶಾಂತಿ, ಅಮ್ಮ ಎಂದು ಕರೆಸಿಕೊಳ್ಳಲು ಸಹ ಇಷ್ಟ ಪಡಲಿಲ್ಲ. ಆದರೆ ನಿನ್ನೆಯ ಎಪಿಸೋಡ್ ನಲ್ಲಿ ಮೀನಾ ಏನೋ ಮಾಡಲು ಹೋಗಿ ಶಾಂತಿ ತಲೆಗೆ ಕೊಡ ಬಿದ್ದಿತ್ತು. ಅದರದ್ದೆ ಪರಿಣಾಮವಾಗಿ ಶಾಂತಿಗೆ ಎಲ್ಲಾ ಮರೆತು ಹೋಗಿ ಸೂರ್ಯನನ್ನು ಇಷ್ಟೊಂದು ಪ್ರೀತಿ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಜನ. ಯಾವುದಕ್ಕೂ ನಿಜ ತಿಳಿಯಲು ಮುಂದಿನ ಎಪಿಸೋಡ್ ನೋಡಬೇಕು.