ಮಿಥುನ ರಾಶಿ, ಪ್ರೇಮ ಕಾವ್ಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನಟಿ ವೈಷ್ಣವಿ ಕೌಂಡಿನ್ಯ, ಲವ್ ಯೂ ಮುದ್ದು ಮೂವಿ ಪ್ರೀಮಿಯರ್ ಗೆ ತುಂಬಾನೆ ಬೋಲ್ಡ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು, ನಟಿಯ ಲುಕ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮೋಡಿ ಮಾಡುತ್ತಿರುವ ನಟಿ ವೈಷ್ಣವಿ ಕೌಂಡಿನ್ಯ. ಮಿಥುನ ರಾಶಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ 16 ವರ್ಷದಲ್ಲೇ ಎಂಟ್ರಿ ಕೊಟ್ಟ ನಟಿ ಇದೀಗ ಮತ್ತೊಂದು ಸೀರಿಯಲ್ ನಲ್ಲಿ ಸದ್ದು ಮಾಡ್ತಿದ್ದಾರೆ.
27
ಪ್ರೇಮಾ ಕಾವ್ಯ ಸೀರಿಯಲ್
ವೈಷ್ಣವಿ ಕೌಂಡಿನ್ಯ ಇದೀಗ ಕಲರ್ಸ್ ಕನ್ನಡ ವಾಹಿನಿಯ ಪ್ರೇಮ ಕಾವ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ವೈಷ್ಣವಿ ಇದೀಗ ಸಿನಿಮಾ ಒಂದರ ಪ್ರೀಮಿಯರ್ ಶೋನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
37
ಬೋಲ್ಡ್ ಅವತಾರದಲ್ಲ್ಲಿ ವೈಷ್ಣವಿ
ವೈಷ್ಣವಿ ಕೌಂಡಿನ್ಯ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮ ಕಾವ್ಯ ಧಾರಾವಾಹಿಯಲ್ಲಿ ಪ್ರೇಮ ಪಾತ್ರಧಾರಿ ಪ್ರಿಯಾ ಆಚಾರ್ ಅವರ ಪತಿ ಸಿದ್ಧು ಮೂಲಿಮನಿ ನಟನೆಯ ಲವ್ ಯೂ ಮುದ್ದು ಸಿನಿಮಾದ ಪ್ರೀಮಿಯರ್ ನಲ್ಲಿ ವೈಷ್ಣವಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ವೈಷ್ಣವಿ ಹಸಿರು ಬಣ್ಣದ ಬ್ಯಾಕ್ ಲೆಸ್, ಡೀಪ್ ನೆಕ್ ಗೌನ್ ಧರಿಸಿ ಮೂವಿ ನೋಡಲು ಬಂದಿದ್ದು, ಕ್ಯಾಮೆರಾ ಕಣ್ಣುಗಳು ವೈಷ್ಣವಿ ಮೇಲೆ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ ಲುಕ್ ವೈರಲ್ ಆಗಿದೆ. ನಟಿಯ ಲುಕ್ ಗೆ ಪಡ್ಡೆಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
57
16ನೇ ವಯಸ್ಸಿಗೆ ನಾಯಕಿಯಾದ ವೈಷ್ಣವಿ
ಅಂದಹಾಗೆ ‘ಮಿಥುನರಾಶಿ’ ಧಾರಾವಾಹಿಯಲ್ಲಿ ವೈಷ್ಣವಿ ಅವರು ರಾಶಿ ಪಾತ್ರ ನಿಭಾಯಿಸಿದ್ದರು. ಆಟೋ ಓಡಿಸುವ ಪಾತ್ರ ಇದಾಗಿತ್ತು. ಅಕ್ಕನಿಗೋಸ್ಕರ ಎಲ್ಲ ತ್ಯಾಗ ಮಾಡುವ ರಾಶಿಯ ಕಥೆ ಇದಾಗಿದ್ದು, ಈ ಧಾರಾವಾಹಿಗೆ ನಾಯಕಿಯಾಗುವಾಗ ನಟಿಯ ವಯಸ್ಸು 16 ಅಷ್ಟೇ.
67
ಬಿಗ್ ಬಾಸ್ ಮಿನಿ ಸೀಸನ್
ವೈಷ್ಣವಿ ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ, ತಮಿಳು ಮತ್ತು ಮಲಯಾಳಂ ಸೀರಿಯಲ್ ಗಳಲ್ಲೂ ನಟಿಸಿ, ಅಲ್ಲಿನ ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಹೆಸರು ಮಾಡಿದ್ದರು ವೈಷ್ಣವಿ.
77
ಉಂಡೆನಾಮ ಸಿನಿಮಾನಲ್ಲಿ ನಟನೆ
ವೈಷ್ಣವಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಇವರು ಕೋಮಲ್ ಕುಮಾರ್ ನಾಯಕನಾಗಿ ನಟಿಸಿದ್ದ ಉಂಡೆನಾಮ ಎನ್ನುವ ಕಾಮಿಡಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.