Kannada Bigg Boss Season 12: ಕನ್ನಡ ಬಿಗ್ ಬಾಸ್ ಸೀಸನ್ 12 ವಾದ ವಿವಾದ ನಡುವೆ ಬಲು ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಟಾಪ್ 5 ಹಂತ ತಲುಪುವ ಸ್ಪರ್ಧಿಗಳು ಯಾರು ಅನ್ನೋದನ್ನು ಈಗಾಗಲೇ ವೀಕ್ಷಕರು ಡಿಸೈಡ್ ಮಾಡಿದ್ದಾರೆ. ಯಾರು ಅನ್ನೋದನ್ನು ನೋಡಿ.
ಬಿಗ್ ಬಾಸ್ ಕನ್ನಡದಲ್ಲಿ ದಿನದಿಂದ ದಿನಕ್ಕೆ ರೋಚಕ ತಿರುವುಗಳು ಪಡೆದುಕೊಳ್ಳುತ್ತಿವೆ. ಈಗಾಗಲೇ ಸ್ಪರ್ಧಿಗಳ ಪೈಪೋಟಿ ನಡುವೆ ನಡೆಯುತ್ತಿದೆ. ಇನ್ನು ಬಿಗ್ ಬಾಸ್ ಫಿನಾಲೆಗೆ ತಿಂಗಳುಗಳು ಬಾಕಿ ಇರುವಾಗಲೇ ಇದೀಗ ಟಾಪ್ 5 ಫಿನಾಲೆ ಸ್ಪರ್ಧಿಗಳನ್ನು ವೀಕ್ಷಕರು ಈಗಾಗಲೇ ಡಿಸೈಡ್ ಮಾಡಿದ್ದಾರೆ.
27
ಏನಾಗ್ತಿದೆ ಬಿಗ್ ಬಾಸ್ ಮನೆಯಲ್ಲಿ
ಸದ್ಯ ಕೊನೆಯ ವಾರ ಚಂದ್ರಪ್ರಭ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇದೀಗ ಆರು ಜನ ನಾಮಿನೇಟ್ ಆಗಿದ್ದು, ಅವರಲ್ಲಿ ಒಬ್ಬರನ್ನು ಸೇವ್ ಮಾಡಿ ಉಳಿಸುವ ಟಾಸ್ಕ್ ನಡೆಯುತ್ತಿದೆ.
37
ರಕ್ಷಿತಾ-ರಾಶಿಕಾ ನಡುವೆ ಜಗಳ
ಇದೀಗ ನಾಮಿನೇಷನ್ ನಿಂದ ಸೇವ್ ಆಗುವ ಬಗ್ಗೆ ರಕ್ಷಿತಾ ಮತ್ತು ರಾಶಿಕಾ ನಡುವೆ ಭಾರಿ ಜಗಳ ನಡೆಯುತ್ತಿದೆ. ಇವತ್ತಿನ ಎಪಿಸೋಡ್ ನಲ್ಲಿ ಯಾರು ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಶನ್ ನಿಂದ ಸೇಫ್ ಆಗ್ತಾರೆ ಅನ್ನೋದನ್ನು ತಿಳಿದುಕೊಳ್ಳಬೇಕು.
ಒಂದೂವರೆ ತಿಂಗಳಿಂದ ಬಿಗ್ ಬಾಸ್ ನೋಡಿಕೊಂಡು ಬರುತ್ತಿರುವ ವೀಕ್ಷಕರು ಈಗಾಗಲೇ ಟಾಪ್ 5 ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆ ಪ್ರಕಾರ ಫಿನಾಲೆ ತಲುಪುವ ಸ್ಪರ್ಧಿಗಳು ಎಂದರೆ ಗಿಲ್ಲಿ, ಕಾವ್ಯ, ರಕ್ಷಿತಾ, ರಘು ಮತ್ತು ಧನುಷ್ ಎನ್ನಲಾಗುತ್ತಿದೆ.
57
ಗಿಲ್ಲಿ-ಕಾವ್ಯ ಆರಂಭದಿಂದಲೇ ಜನರ ಫೇವರಿಟ್
ಬಿಗ್ ಬಾಸ್ ಮನೆಗೆ ಜಂಟಿಯಾಗಿ ಬಂದ ಕಾವ್ಯ ಮತ್ತು ಗಿಲ್ಲಿ ಆರಂಭದಿಂದಲೇ ಜನರ ಫೇವರಿಟ್ ಆಗಿದ್ದಾರೆ. ಅವರಿಬ್ಬರ ಆಟ, ವ್ಯಕ್ತಿತ್ವ, ಗಿಲ್ಲಿಯ ಕಾಮಿಡೀ ಟೈಮಿಂಗ್ಸ್, ಎಲ್ಲವನ್ನೂ ಜನರು ಇಷ್ಟಪಟ್ಟಿದ್ದರು. ಆರಂಭದಿಂದಲೇ ಗಿಲ್ಲಿ ಮತ್ತು ಕಾವ್ಯ ಫಿನಾಲೆ ತಲುಪುತ್ತಾರೆ ಎನ್ನುತ್ತಿದ್ದಾರೆ.
67
ರಕ್ಷಿತಾಳ ಅಭಿಮಾನಿಗಳ ಹೆಚ್ಚಳ
ರಕ್ಷಿತಾ ಶೆಟ್ಟಿ ಟ್ರೋಲ್ ನಿಂದಲೇ ಫೇಮಸ್ ಆಗಿದ್ದರೂ ಸಹ, ಬಿಗ್ ಬಾಸ್ ಗೆ ಬಂದ ಬಳಿಕ ಆಕೆಯ ಮಾತು, ಮೆಚ್ಯೂರಿಟಿ ಎಲ್ಲವನ್ನೂ ನೋಡಿ ಜನರು ಆಕೆಯನ್ನು ಇಷ್ಟಪಟ್ಟರು. ಇದೀಗ ರಕ್ಷಿತಾ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹಾಗಾಗಿ ರಕ್ಷಿತಾ ಟಾಪ್ 5 ಕಂಟೆಸ್ಟಂಟ್ ಆಗೋದು ಖಚಿತಾ ಎಂದಿದ್ದಾರೆ.
77
ಧನುಷ್ ಮತ್ತು ರಘು
ಗೀತಾ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಧನುಷ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಮತ್ತು ಉತ್ತಮ ನಡವಳಿಕೆಯ ಮೂಲಕವೇ ಜನಕ್ಕೆ ಇಷ್ಟವಾದರು. ರಘು ಅವರ ವೈಲ್ಡ್ ಕಾರ್ಡ್ ಎಂಟ್ರಿಯಾದರೂ ಸಹ ಅವರ ಆಟವನ್ನು ಜನ ಇಷ್ಟಪಟ್ಟರು. ಹಾಗಾಗಿ ಸದ್ಯ ಈ 5 ಜನರ ಹೆಸರು ಟಾಪ್ 5 ಸ್ಪರ್ಧಿಗಳ ಲಿಸ್ಟ್ ನಲ್ಲಿ ಸೇರಿದೆ. ನಿಮಗೂ ಹಾಗೇ ಅನಿಸ್ತಿದೆಯಾ?