ನಮ್ಮಲ್ಲೇ ನೇತ್ರಾಣಿ ಐಲ್ಯಾಂಡ್ ಇರೋವಾಗ ಸ್ಕೂಬಾ ಡೈವಿಂಗ್‌ಗಾಗಿ ಥೈಲ್ಯಾಂಡ್‌ಗೆ ಯಾಕೆ?

First Published Mar 31, 2023, 7:01 PM IST

ನೀವು ಸಾಹಸ ಚಟುವಟಿಕೆಗಳನ್ನು, ವಿಶೇಷವಾಗಿ ಸ್ಕೂಬಾ ಡೈವಿಂಗ್ ಅನ್ನು ಇಷ್ಟಪಡುತ್ತಿದ್ದರೆ, ಇದಕ್ಕಾಗಿ ಥೈಲ್ಯಾಂಡ್ ಅಥವಾ ಮಾಲ್ಡೀವ್ಸ್ ಗೆ ಹೋಗೋ ಅಗತ್ಯಾನೇ ಇಲ್ಲ, ಯಾಕಂದ್ರೆ ನಮ್ಮ ಕರ್ನಾಟಕದಲ್ಲೇ ಅದ್ಭುತ ಅನುಭವ ನೀಡುವ ನೇತ್ರಾಣಿ ಐಲ್ಯಾಂಡ್ ಇದೆ. ಇಲ್ಲಿ ಕಡಿಮೆ ಹಣದಲ್ಲಿ ನೀವು ಮೋಜಿನ ಅನುಭವವನ್ನು ಪಡೆಯಬಹುದು.
 

ನೇತ್ರಾಣಿ (Netrani Island) ಭಾರತದ ಅರೇಬಿಯನ್ ಸಮುದ್ರದಲ್ಲಿರುವ ಒಂದು ಸಣ್ಣ ದ್ವೀಪವಾಗಿದ್ದು, ಇದನ್ನು ಹಾರ್ಟ್ ಶೇಪ್ ಐಲ್ಯಾಂಡ್, ಭಜರಂಗಿ ದ್ವೀಪ ಮತ್ತು ಪಾರಿವಾಳ ದ್ವೀಪ ಎಂದೂ ಕರೆಯಲಾಗುತ್ತದೆ. ಇದು ಕರ್ನಾಟಕದ ಕರಾವಳಿಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಈ ದ್ವೀಪವು ಸ್ಕೂಬಾ ಡೈವಿಂಗ್ಗಾಗಿ ಪ್ರವಾಸಿಗರಲ್ಲಿ ವಿಶೇಷವಾಗಿ ಪ್ರಸಿದ್ಧವಾಗಿದೆ. ಇದಲ್ಲದೆ, ನೀವು ಸ್ನೋರ್ಕೆಲಿಂಗ್ ಅನ್ನು ಸಹ ಆನಂದಿಸಬಹುದು. 

ಪ್ರಸಿದ್ಧ ಭಜರಂಗಬಲಿ ದೇವಸ್ಥಾನವೂ ಇಲ್ಲಿದೆ. ಹಾಗಾಗಿ ಇದಕ್ಕೆ ಭಜರಂಗಿ ದ್ವೀಪ (Bhajarangi Island) ಎಂದು ಸಹ ಕರೆಯಲಾಗುತ್ತೆ. ಇದನ್ನು ನೋಡಲು ಪ್ರತಿವರ್ಷ ಸಾವಿರಾರು ಜನರು ಬರುತ್ತಾರೆ. ಹನುಮಾನ್ ಜಿ ಇಲ್ಲಿಗೆ ಬಂದಿಳಿದರು ಮತ್ತು ಅವರು ರಾಮನ ಮಣ್ಣಿನ ವಿಗ್ರಹವನ್ನು ಮಾಡಿದರು ಎಂದು ಹೇಳಲಾಗುತ್ತದೆ.
 

ಈ ಸ್ಥಳವು ವೀಕೆಂಡ್ ತಾಣವಾಗಿ ಅತ್ಯುತ್ತಮವಾಗಿದೆ, ಏಕೆಂದರೆ ಇಲ್ಲಿ ಭೇಟಿ ನೀಡಲು ಹೆಚ್ಚಿನ ಆಯ್ಕೆಗಳಿಲ್ಲ, ಆದ್ದರಿಂದ ಜನರು ವಿಶೇಷವಾಗಿ ಸ್ಕೂಬಾ ಡೈವಿಂಗ್ಗಾಗಿ ಬರುತ್ತಾರೆ. ಈ ದ್ವೀಪದ ನೀರು ತುಂಬಾನೆ ಸ್ವಚ್ಛವಾಗಿದೆ, ಈ ಕಾರಣದಿಂದಾಗಿ ನೀವು ಸ್ಕೂಬಾ ಡೈವಿಂಗ್ (scuba diving) ಮತ್ತು ಸ್ನೋರ್ಕೆಲಿಂಗ್ ಸಮಯದಲ್ಲಿ ಸಮುದ್ರದೊಳಗೆ ಸುಂದರವಾದ ನೋಟವನ್ನು ಪಡೆಯಬಹುದು. ಈ ಸ್ಥಳವನ್ನು ಅನ್ವೇಷಿಸಲು ಎರಡು ದಿನಗಳು ಸಾಕು. 

ಸಾಹಸ ಚಟುವಟಿಕೆಗಳ ಪ್ಯಾಕೇಜ್ (adventurous package)
ಇದರಲ್ಲಿ ಸ್ಕೂಬಾ ಡೈವಿಂಗ್ ನಿಂದ ಹಿಡಿದು ಸ್ನೋರ್ಕೆಲಿಂಗ್, ಬೋಟ್ ರೈಡ್, ಅಂಡರ್ ವಾಟರ್ ಫೋಟೋಗ್ರಫಿ (under water photography), ಡೈವಿಂಗ್ ಸರ್ಟಿಫಿಕೇಟ್, ರಿಫ್ರೆಶ್ ಮೆಂಟ್, ಡೈವಿಂಗ್ ಗೆ ಬೇಕಾದ ಸಲಕರಣೆಗಳು ಸೇರಿವೆ. 

 10 ಜನರಿಗೆ, ನೀವು ಪ್ರತಿ ವ್ಯಕ್ತಿಗೆ 2999 ರೂ.ಗಳನ್ನು ಪಾವತಿಸಬೇಕಾಗುತ್ತದೆ.
- 5 ಜನರಿಗೆ ಪ್ರತಿ ವ್ಯಕ್ತಿಗೆ 3499 ರೂ.
ನೀವು ಈ ಚಟುವಟಿಕೆಗಳನ್ನು ಏಕಾಂಗಿಯಾಗಿ ಮಾಡಿದರೆ, ಇದಕ್ಕಾಗಿ ನೀವು 3999 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ನೇತ್ರಾಣಿ ದ್ವೀಪಕ್ಕೆ ಭೇಟಿ ನೀಡಲು ಡಿಸೆಂಬರ್ ನಿಂದ ಜನವರಿ ತಿಂಗಳು ಸೂಕ್ತವಾಗಿದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ. ಜೊತೆಗೆ ಚುಮು ಚುಮು ಚಳಿಯಲ್ಲಿ ಎಂಜಾಯ್ ಮಾಡುತ್ತಾ ಡೈವ್ ಮಾಡಬಹುದು. ಉಳಿದ ಸಮಯದಲ್ಲಿ ಹೆಚ್ಚು ಬಿಸಿಲಿನಿಂದ ಕೂಡಿರುತ್ತೆ.

ನೇತ್ರಾಣಿ ದ್ವೀಪವನ್ನು ತಲುಪುವುದು ಹೇಗೆ?: ವಿಮಾನದ ಮೂಲಕ: ನೀವು ವಿಮಾನದ ಮೂಲಕ ಇಲ್ಲಿಗೆ ಬರಲು ಯೋಜಿಸುತ್ತಿದ್ದರೆ, ಮಂಗಳೂರು ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ನೀವು ಸುಲಭವಾಗಿ ಟ್ಯಾಕ್ಸಿಯನ್ನು ಹಿಡಿದುಕೊಂಡು ನೇತ್ರಾಣಿಗೆ ತೆರಳಬಹುದು. 

ರೈಲುಮಾರ್ಗದ ಮೂಲಕ: ಮುರುಡೇಶ್ವರವು ಇಲ್ಲಿಗೆ ತಲುಪಲು ಅತ್ಯ೦ತ ಸನಿಹದಲ್ಲಿರುವ ರೈಲು ನಿಲ್ದಾಣವಾಗಿದೆ. ಅಲ್ಲಿಂದ ನೇತ್ರಾಣಿಯನ್ನು ತಲುಪಲು ಬಸ್ ಮತ್ತು ಆಟೋರಿಕ್ಷಾ ಸೌಲಭ್ಯ ಲಭ್ಯವಿದೆ. 

ರಸ್ತೆಯ ಮೂಲಕ: ಮುರುಡೇಶ್ವರಕ್ಕೆ ಬೆಂಗಳೂರು, ಮುಂಬೈ ಮತ್ತು ಕೊಚ್ಚಿಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು. 
 

ಬೆ೦ಗಳೂರಿನಿ೦ದ ಹೇಗೆ ಹೋಗುವುದು?: ಮುರುಡೇಶ್ವರವನ್ನು (Murudeshwar) ಬೆ೦ಗಳೂರಿನಿ೦ದ ಸರಿಸುಮಾರು 8 ಘ೦ಟೆಗಳ ಪ್ರಯಾಣದ ಮೂಲಕ ತಲುಪಬಹುದು. ನೇತ್ರಾಣಿ ದ್ವೀಪವು ಮುರುಡೇಶ್ವರದಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಅಲ್ಲಿಗೆ ತಲುಪಲು ಇದು ಒಂದು ಗಂಟೆಯ ದೋಣಿ ಸವಾರಿ ಮೂಲಕ ಹೋಗಬೇಕಾಗಿದೆ

click me!