ವಿಮಾನದಲ್ಲಿ ಫೋನ್ ಫ್ಲೈಟ್ ಮೋಡ್ ನಲ್ಲಿ ಇಡದಿದ್ದರೆ ಏನಾಗುತ್ತೆ?

First Published Mar 31, 2023, 2:35 PM IST

ವಿಮಾನದಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಮೊಬೈಲ್ ಫೋನ್ ಅನ್ನು ಫ್ಲೈಟ್ ಮೋಡ್ ನಲ್ಲಿ ಇಡಿ ಎಂದು ಏರ್ ಹೋಸ್ಟಸ್ ಹೇಳಿರೋದನ್ನು ನೀವು ಕೇಳಿರಬಹುದು ಅಲ್ವಾ? ಆದರೆ ಏಕೆ ಇಡಬೇಕು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ಕಾರಣವನ್ನು ತಿಳಿಸ್ತೀವಿ ಕೇಳಿ…
 

ವಿಮಾನದಲ್ಲಿ ಪ್ರಯಾಣದ ಸಮಯದಲ್ಲಿ ಅನೇಕ ಸೂಚನೆಗಳನ್ನು ನೀಡಲಾಗುತ್ತದೆ. ಈ ಸೂಚನೆಗಳಲ್ಲಿ ಒಂದು, ವಿಮಾನದ ಹಾರಾಟದ ಸಮಯದಲ್ಲಿ, ಮೊಬೈಲ್ ಫೋನ್ ಅನ್ನು ಫ್ಲೈಟ್ ಮೋಡ್ನಲ್ಲಿ (flight mode) ಇಡಬೇಕು. ಆದರೆ ಇದನ್ನು ಮಾಡಲು ನಿಮ್ಮನ್ನು ಏಕೆ ಕೇಳಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 

ನಿಮಗೂ ಈ ಪ್ರಶ್ನೆ ತುಂಬಾ ಸಲ ಕಾಡಿರಬಹುದು ಅಲ್ವಾ? ವಿಮಾನ ಹಾರಾಟದ ಸಮಯದಲ್ಲಿ ನೀವು ಫೋನ್ ನಲ್ಲಿ ಮಾತನಾಡಿದರೆ ಅದರಿಂದ ಏನಾಗುತ್ತೆ? ಯಾಕೆ ಮೊಬೈಲ್ ನ್ನು ಫ್ಲೈಟ್ ಮೋಡ್ ನಲ್ಲಿಡಬೇಕು ಅನ್ನೋದರ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ಕೇಳಿ…

ಫ್ಲೈಟ್ ಮೋಡ್ ಎಂದರೇನು?  (what is flight mode)
ಫ್ಲೈಟ್ ಮೋಡ್ ಕರೆ ಮತ್ತು ಇಂಟರ್ನೆಟ್ ನಂತಹ ನೆಟ್ ವರ್ಕ್ ಸಂಬಂಧಿತ ಕಾರ್ಯಗಳಿಗೆ ಸಂಬಂಧಿಸಿದೆ. ಫೋನಿನಲ್ಲಿ ಫ್ಲೈಟ್ ಮೋಡ್ ಆನ್ ಮಾಡಿದಾಗ, ಫೋನ್ ನೆಟ್ ಯಾವುದೇ ನೆಟ್‌ವರ್ಕ್‌ಗೆ ಕನೆಕ್ಟ್ ಆಗೋದಿಲ್ಲ .  ವಿಮಾನದಲ್ಲಿ ಇದನ್ನ ಮಾಡದೇ ಇದ್ರೆ ಸಮಸ್ಯೆ ಉಂಟಾಗುವ ಸಾಧ್ಯತೆಯೇ ಹೆಚ್ಚು. 

ವಿಮಾನದಲ್ಲಿ ಮೊಬೈಲ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇಡದೇ ಇದ್ರೆ, ಅದರಿಂದ ಹೊರಹೊಮ್ಮುವ ತರಂಗಗಳು ಸ್ಥಳದ ಸಂಪರ್ಕ ವ್ಯವಸ್ಥೆಗೆ ಕನೆಕ್ಟ್ ಆಗುತ್ತೆ. ಹೀಗೆ ಆಗೋದರಿಂದ ವಿಮಾನವು ರೇಡಿಯೋ ನಿಲ್ದಾಣದೊಂದಿಗಿನ ಸಂಪರ್ಕವನ್ನು ಕಳೆದುಕೊಳ್ಳುತ್ತದೆ ಮತ್ತು ಪೈಲಟ್ ಸೂಚನೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ ಮತ್ತು ಇದು ಸಂಭವಿಸಿದರೆ, ವಿಮಾನ ದುರಂತ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಫ್ಲೈಟ್ ಮೋಡ್ ಅನ್ನು ಆನ್ ಮಾಡಿದ ನಂತರವೂ, ಮೊಬೈಲ್ ನಲ್ಲಿರುವ ಚಲನಚಿತ್ರಗಳು ಮತ್ತು ವೀಡಿಯೊಗಳನ್ನು (watch movie and video) ವೀಕ್ಷಿಸಬಹುದು ಅಥವಾ ನಿಮಗಿಷ್ಟವಾದ ಮ್ಯೂಸಿಕ್ ಕೂಡ ಕೇಳಬಹುದು. ಕೆಲವು ಸ್ಮಾರ್ಟ್ಫೋನ್ಗಳಲ್ಲಿ, ಫ್ಲೈಟ್ ಮೋಡ್ ಆನ್ ಮಾಡಿದ ನಂತರವೂ ಬ್ಲೂಟೂತ್ ಮತ್ತು ವೈಫೈ ಅನ್ನು ಬಳಸಬಹುದು. ಜೊತೆಗೆ ನೀವು ಫೋಟೋವನ್ನು ತೆಗೆಯಬಹುದು.

ಫ್ಲೈಟ್ ಮೋಡ್ ಏಕೆ ಆನ್ ಮಾಡಬೇಕು? 
ವಿಮಾನದಲ್ಲಿ ಹಾರಾಟದ ಸಮಯದಲ್ಲಿ, ಪ್ರತಿಯೊಬ್ಬ ವ್ಯಕ್ತಿಗೆ ಮೊಬೈಲ್ ಫೋನ್ ಅನ್ನು ಫ್ಲೈಟ್ ಮೋಡ್ನಲ್ಲಿ ಇರಿಸಲು ಕೇಳಲಾಗುತ್ತದೆ. ನೀವು ಇದನ್ನು ಮಾಡದಿದ್ದರೆ, ಅದು ಹಾರಾಟದ ಸಮಯದಲ್ಲಿ ವಿಮಾನದ ನ್ಯಾವಿಗೇಷನ್ ವ್ಯವಸ್ಥೆಯಲ್ಲಿ(navigation system)  ತಡೆಯನ್ನುಂಟು ಮಾಡುತ್ತೆ, ಇದು ವಿಮಾನವನ್ನು ಹಾರಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿ, ವಿಮಾನ ಪ್ರಯಾಣದಲ್ಲಿ, ವಿಶೇಷವಾಗಿ ಹಾರಾಟದ ಸಮಯದಲ್ಲಿ ಫೋನ್ ಅನ್ನು ಫ್ಲೈಟ್ ಮೋಡ್ ನಲ್ಲಿ ಇಡುವುದು ಸೂಕ್ತ.

ಹಾರಾಟದ ಸಮಯದಲ್ಲಿ, ಪೈಲಟ್ ಯಾವಾಗಲೂ ರಾಡಾರ್ ಮತ್ತು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕದಲ್ಲಿರುತ್ತಾರೆ. ರೆಡಿಯೋ ಸ್ಟೇಷನ್ ಜೊತೆ ಸಂಪರ್ಕದಲ್ಲಿದ್ದರೆ ಮಾತ್ರ ವಿಮಾನ ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯ. ಇಲ್ಲವಾದರೆ ದಾರಿ ತಪ್ಪುವ ಎಲ್ಲಾ ಸಾಧ್ಯತೆಗಳಿವೆ. 
 

ನೀವು ಫೋನ್ ಅನ್ನು ಫ್ಲೈಟ್ ಮೋಡ್ನಲ್ಲಿ ಇಡದಿದ್ದರೆ,  ಕಂಟ್ರೋಲ್ ಸ್ಟೇಷನ್ ಗೆ (control station) ಪೈಲಟ್ನೊಂದಿಗೆ ಸಂವಹನ ನಡೆಸಲು ಕಷ್ಟವಾಗುತ್ತದೆ ಇದು ವಿಮಾನವು ದಾರಿ ತಪ್ಪುವ ಅಥವಾ ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು, ಫ್ಲೈಟ್ ಮೋಡ್ ಅನ್ನು ಆನ್ ಮಾಡಲು ಸೂಚನೆಗಳನ್ನು ನೀಡಲಾಗುತ್ತದೆ. 

click me!