ಸಾಗರದೊಳಗಿದೆ ವಿಶ್ವದ ಅತ್ಯಂತ ದುಬಾರಿ ಹೋಟೆಲ್, ಒನ್ ಡೇ ಉಳಿದುಕೊಳ್ಳೋ ದುಡ್ಡಿಗೆ BMW ಕಾರೇ ಬರುತ್ತೆ!

First Published | Oct 13, 2023, 3:23 PM IST

ಜಗತ್ತಿನಲ್ಲಿ ದುಬಾರಿ ಜಾಗ, ದುಬಾರಿ ಮನೆ, ದುಬಾರಿ ಉಡುಗೆ-ತೊಡುಗೆ ಇರೋ ಹಾಗೆ ವಿಶ್ವದ ಅತ್ಯಂತ ದುಬಾರಿ ಹೊಟೇಲ್ ಕೂಡಾ ಇದೆ. ಇಲ್ಲಿ ಒಂದು ರೂಮಲ್ಲಿ ಒಂದು ದಿನ ಕಳೆಯೋಕೆ ವ್ಯಯಿಸಬೇಕಾದ ಹಣದ ಬಗ್ಗೆ ತಿಳಿದ್ರೆ ನಿಮಗೆ ಗಾಬರಿಯಾಗೋದು ಖಂಡಿತ.

ಜಗತ್ತಿನಲ್ಲಿ ಅತೀ ಕಡಿಮೆ ಬೆಲೆಯ ವಸ್ತುಗಳು ಸಿಗೋ ಹಾಗೆ ಅತ್ಯಂತ ಕಾಸ್ಟ್ಲೀಯಾಗಿರುವ ವಸ್ತುಗಳು, ಸ್ಥಳಗಳು ಸಹ ಇವೆ. ದುಬಾರಿ ಜಾಗ, ದುಬಾರಿ ಮನೆ, ದುಬಾರಿ ಉಡುಗೆ-ತೊಡುಗೆ ಇರೋ ಹಾಗೆ ವಿಶ್ವದ ಅತ್ಯಂತ ದುಬಾರಿ ಕೊಠಡಿ ಇಲ್ಲಿದೆ. ಆದ್ರೆ ಇಲ್ಲಿ ಒಂದು ದಿನ ಕಳೆಯೋಕೆ ವ್ಯಯಿಸಬೇಕಾದ ಹಣದ ಬಗ್ಗೆ ತಿಳಿದ್ರೆ ನಿಮಗೆ ಗಾಬರಿಯಾಗೋದು ಖಂಡಿತ.

ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಇರುವುದು ಭೂಮಿಯೇ ಮೇಲೆ ಅಲ್ಲ. ಬದಲಿಗೆ ನೀರಿನ ಕೆಳಗೆ. ಲವರ್ಸ್ ಡೀಪ್ ಎಂಬ ಜಲಾಂತರ್ಗಾಮಿ ನೌಕೆಯಲ್ಲಿ ಈ ಹೊಟೇಲ್‌ ಇದೆ. ಅಟ್ಲಾಂಟಿಕ್ ಸಾಗರದ ಗಡಿಯಲ್ಲಿರುವ ವೆಸ್ಟ್ ಇಂಡೀಸ್‌ನ ಪೂರ್ವ ಕೆರಿಬಿಯನ್ ಸಮುದ್ರದಲ್ಲಿರುವ ದ್ವೀಪ ರಾಷ್ಟ್ರವಾದ ಸೇಂಟ್ ಲೂಸಿಯಾದಲ್ಲಿ ಈ ನೌಕೆಯಿದೆ.

Tap to resize

ಲವರ್ಸ್ ಡೀಪ್ ಸೇಂಟ್ ಲೂಸಿಯಾ ಜಲಾಂತರ್ಗಾಮಿ, ಅಂಡರ್‌ವಾಟರ್ ಹೋಟೆಲ್ ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಆಗಿದೆ. ಈ ರೂಮಿನಲ್ಲಿ ಒಂದು ರಾತ್ರಿ ತಂಗಲು ಬೇಕಾಗುವ ಹಣ ಎಷ್ಟೂಂತ ಗೊತ್ತಾದರೆ ನಿಮಗೆ ಗಾಬರಿಯಾಗೋದು ಖಂಡಿತ. ಈ ಐಷಾರಾಮಿ ಹೊಟೇಲ್‌ನಲ್ಲಿ ತಂಗಲು ಪ್ರತಿ ರಾತ್ರಿಯ ದುಬಾರಿ SUV ಅಥವಾ ಹೊಸ BMW XM ಕೊಂಡಷ್ಟೇ ವೆಚ್ಚವಾಗುತ್ತದೆ.

ದಿ ಗಾರ್ಡಿಯನ್ ಲೈಫ್ ಪ್ರಕಾರ, ಈ ಹೊಟೇಲ್‌ನಲ್ಲಿ ಒಂದು ರಾತ್ರಿ ಕಳೆಯಲು ಸುಮಾರು ಎರಡೂವರೆ ಕೋಟಿ ರೂ. ವೆಚ್ಚವಾಗುತ್ತದೆ. ಸರಿಯಾಗಿ ಹೇಳುವುದಾದರೆ ಈ ಐಷಾರಾಮಿ ಹೊಟೇಲ್‌ನಲ್ಲಿ ಒಂದು ದಿನ ತಂಗಲು ಬರೋಬ್ಬರಿ 2 ಕೋಟಿಯ 43 ಲಕ್ಷದಷ್ಟು ವೆಚ್ಚವಾಗುತ್ತದೆ  (2,43,06,518 ರೂ.)

ಈ ಐಷಾರಾಮಿ ಹೊಟೇಲ್‌ ಅತ್ಯದ್ಭುತವಾದ ಇಂಟೀರಿಯರ್‌, ಮಿನಿ ಬಾರ್, ಆರಾಮದಾಯಕ ಡಬಲ್ ಬೆಡ್ ಸೇರಿದಂತೆ ಪ್ರತಿಯೊಂದು ಪ್ರದೇಶದಿಂದ ಸಮುದ್ರದ ವೀಕ್ಷಣೆಗಳನ್ನು ಒದಗಿಸುತ್ತದೆ.

ಮಾತ್ರವಲ್ಲ ಮೀನು, ಶಂಖ-ಚಿಪ್ಪು ಮೊದಲಾದವುಗಳನ್ನು ತುಂಬಾ ಹತ್ತಿರದಿಂದ ನೋಡಬಹುದು. ಕೆರಿಬಿಯನ್ ದ್ವೀಪದಿಂದ ಈ ಹೊಟೇಲ್‌ಗೆ ಹತ್ತಬಹುದು.

ಕ್ಯಾಪ್ಟನ್, ಬಾಣಸಿಗ ಮತ್ತು ವೈಯಕ್ತಿಕ ಬಟ್ಲರ್ ಲವರ್ಸ್ ಡೀಪ್ ಬೋರ್ಡ್‌ನಲ್ಲಿರುವ ಮೂವರು ಸಿಬ್ಬಂದಿ, ಮತ್ತು ಅವರೆಲ್ಲರೂ ಸಂದರ್ಶಕರ ಸುರಕ್ಷತೆಯ ದೃಷ್ಟಿಯಿಂದ ಹಡಗಿನ ಇನ್ನೊಂದು ಬದಿಯಲ್ಲಿ ಪ್ರತ್ಯೇಕ ಕ್ವಾರ್ಟರ್‌ನಲ್ಲಿ ವಾಸಿಸುತ್ತಾರೆ.

Latest Videos

click me!