ಈ ಹಿಂದೆ ನಿಂತುಕೊಂಡ ಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡುತ್ತಿದ್ದರಂತೆ ಮಹಿಳೆಯರು!

First Published Aug 20, 2022, 4:05 PM IST

ಮಗುವಿಗೆ ಜನ್ಮ ನೀಡುವುದು ಎಂದರೆ ತಾಯಿಗೆ ಪುರ್ನಜನ್ಮ. ಈ ಸಮಯದಲ್ಲಿ ತಾಯಿ ತುಂಬಾನೆ ನೋವು ಅನುಭವಿಸುತ್ತಾಳೆ. ಸಾಮಾನ್ಯವಾಗಿ ನಾವು ನೋಡಿರುವಂತೆ ಡೆಲಿವರಿ ಸಂದರ್ಭದಲ್ಲಿ ತಾಯಿಗೆ ಮಲಗುವಂತೆ ಹೇಳಲಾಗುತ್ತೆ. ಅದೇ ಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡಲಾಗುತ್ತೆ. ಆದರೆ ಹಿಂದಿನ ಕಾಲದಲ್ಲಿ ಹೀಗಿಲ್ಲವಾಗಿತ್ತು, ಅನ್ನುತ್ತಿದೆ ಪುರಾವೆಗಳು. ಸಂಗಮ್ ಯುಗದಲ್ಲಿ ವಾಸಿಸುತ್ತಿದ್ದ ಮಹಿಳೆಯರು ನಿಂತುಕೊಂಡೇ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಂಜಾವೂರು ದಾರಾಸುರಂ ದೇವಾಲಯದಲ್ಲಿ ಇದನ್ನು ದೃಢಪಡಿಸುವ ವಿವಿಧ ರೀತಿಯ ಶಾಸನಗಳನ್ನು, ವಾಸ್ತು ಶಿಲ್ಪಗಳನ್ನು ನಾವು ಇಂದಿಗೂ ಕಾಣಬಹುದು. 

ಹೆರಿಗೆಯು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಸ್ಮರಣೀಯ, ಜೊತೆಗೆ ಮರುಜೀವ ಪಡೆಯುವ ಕ್ಷಣ. ಪ್ರತಿಯೊಬ್ಬ ಮಹಿಳೆಯೂ ಮಗುವಿಗೆ ಜನ್ಮ ನೀಡಿದಾಗ, ಅವಳು ಪುನರ್ಜನ್ಮ ಪಡೆದಿದ್ದೇನೆ ಎಂದು ಭಾವಿಸುತ್ತಾಳೆ. ಏಕೆಂದರೆ ಈ ಡೆಲಿವರಿ ಸಮಯವು ಕೆಲವು ಜನರಿಗೆ ತುಂಬಾನೆ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವೊಮ್ಮೆ ಸಾವು ಸಹ ಸಂಭವಿಸುತ್ತದೆ. ಆದುದರಿಂದ ಈ ಕ್ಷಣಗಳು ತುಂಬಾನೆ ಭಯಾನಕ.

ಆಧುನಿಕ ಕಾಲದಲ್ಲಿ ವೈದ್ಯಕೀಯ ಸೌಲಭ್ಯಗಳು ಹೇರಳವಾಗಿವೆ. ಆದಾಗ್ಯೂ, ಹಿಂದಿನ ಕಾಲದಿಂದ ಈ ಸಮಯದವರೆಗೆ, ಮಹಿಳೆಯರು ಹೆರಿಗೆಯ ಸಮಯದಲ್ಲಿ ಮಲಗಿರುವ ಸ್ಥಿತಿಯಲ್ಲಿ ಶಿಶುಗಳಿಗೆ ಜನ್ಮ ನೀಡುತ್ತಿದ್ದಾರೆ ಎಂದು ನೀವು ಭಾವಿಸಿರಬಹುದು, ಆದರೆ ಅದು ಸಂಪೂರ್ಣವಾಗಿ ತಪ್ಪು, ಸಂಗಮ ಯುಗದಲ್ಲಿ, ನಮ್ಮ ಪೂರ್ವಜರು ನಿಂತಿರುವ ಭಂಗಿಯಲ್ಲಿ (standing position) ಮಗುವಿಗೆ ಜನ್ಮ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ಕೇಳಿ ಅಚ್ಚರಿಯಾಗಿರಬಹುದು ಅಲ್ವಾ?  ಹೌದು, ಇದನ್ನು ದೃಢೀಕರಿಸಲು ತಂಜಾವೂರು ದಾರಾಸುರಂ ದೇವಾಲಯದಲ್ಲಿ ವಿವಿಧ ರೀತಿಯ ಶಾಸನಗಳಿವೆ.
 

Latest Videos


ಹೆರಿಗೆಯು ಮಗುವಿಗೆ ಮಾತ್ರವಲ್ಲ, ತಾಯಿಗೆ ಹೊಸ ಜನ್ಮವಾಗಿದೆ. ಈ ಹೆರಿಗೆಯ ಮೂಲಕ ನಮ್ಮ ಸಂತತಿ ಎಷ್ಟು ಪರೀಕ್ಷೆಗಳು ಮತ್ತು ನೋವುಗಳನ್ನು ಅನುಭವಿಸಬೇಕಾಗಿತ್ತು, ಅನ್ನೋದು ನಮಗೆ ಗೊತ್ತು. ಕ್ರಿ.ಪೂ. 5ರ ಸಂಗಮ್ ಸ್ತೋತ್ರಗಳಲ್ಲಿ ಹೆರಿಗೆಯ ಕಷ್ಟ, ನೋವುಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ.

ಸಂಗಮ್ ಸಂಪ್ರದಾಯ ಹೀಗಿದೆ

ಮಗುವಿನ ಜನನದ ನಂತರ, ತಾಯಿಯನ್ನು ತುಪ್ಪದಿಂದ ಸ್ನಾನ ಮಾಡಿಸಲಾಗುತ್ತಿತ್ತಂತೆ. ಅಂತೆಯೇ,  ಮಗುವಿನ ಜನನದ ನಂತರ, ಶಂಖ, ಚಕ್ರ, ಖಡ್ಗ, ಬಿಲ್ಲು ಮತ್ತು ದಂಡಾಯುಧಮ್ ಎಂಬ ಐದು ವಸ್ತುಗಳನ್ನು ಸೊಂಟಕ್ಕೆ ಕಟ್ಟಲಾಗುತ್ತದೆ ಮತ್ತು ನವಜಾತ ಶಿಶುವನ್ನು (newborn baby) ತೊಟ್ಟಿಲಿನಲ್ಲಿ ಇರಿಸಿ, ಕಿವಿಯನ್ನು ಚುಚ್ಚಿ ಎದೆಹಾಲುಣಿಸಲಾಗುತ್ತಿತ್ತು ಎಂದು ಶಾಸನಗಳು ತಿಳಿಸಿವೆ. 
 

ತಂಜಾವೂರು ಐರಾವತೀಶ್ವರರ್ ದೇವಾಲಯ

ದಾರಾಸುರಮ್ ಐರಾವತೀಶ್ವರರ್ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಬಳಿ ಇದೆ. ಈ ದೇವಾಲಯವನ್ನು 12ನೇ ಶತಮಾನದಲ್ಲಿ ಇಮ್ಮಡಿ ರಾಜರಾಜ ಚೋಳನು ನಿರ್ಮಿಸಿದನು. ಈ ದೇಗುಲವು ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ವಾಸ್ತು ಗಮನಿಸಿದರೆ ಹಿಂದಿನ ಕಾಲದ ಆಚರಣೆಗಳನ್ನು ಸಹ ನಾವು ಕಾಣಬಹುದು.
 

ಚೋಳರ ವಾಸ್ತುಶಿಲ್ಪ

ಈ ದೇವಾಲಯದ ಸುತ್ತಲೂ ಹಲವಾರು ಶಾಸನಗಳಿವೆ, ಇದು ಚೋಳರ ವಾಸ್ತುಶಿಲ್ಪವನ್ನು ಚಿತ್ರಿಸುವ ಶಿಲ್ಪಗಳಿಂದ ತುಂಬಿದೆ. ಚೋಳರು ಕಲೆಗಳತ್ತ ಒಲವು ಹೊಂದಿದ್ದರು ಅನ್ನೋದನ್ನು ತೋರಿಸಲು ಸ್ಥಳದಾದ್ಯಂತ ವಿವಿಧ ಸಂಕೀರ್ಣ ಕಟ್ಟಡಗಳಿವೆ. ದಾರಾಸುರಾಮ್ ದೇವಾಲಯವು ನೃತ್ಯ ದೃಶ್ಯಗಳು, ಯುದ್ಧದ ದೃಶ್ಯಗಳು, ಧಾರ್ಮಿಕ ಘಟನೆಗಳು, ಋಷಿಗಳು, ಪ್ರಾಣಿಗಳು ಮತ್ತು ಕಾಲ್ಪನಿಕ ವ್ಯಕ್ತಿಗಳ ಶಿಲ್ಪಗಳನ್ನು ಸಹ ಹೊಂದಿದೆ.

ಈ ದೇವಾಲಯದ ಮತ್ತೊಂದು ವಿಶೇಷ

ನಿಂತಿರುವ ಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡಿದ ಸಂಗಮ್ ಯುಗದ ಮಹಿಳೆಯರು:ವೆಂದರೆ ನಿಂತಿರುವ ಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯರ ಶಿಲ್ಪ. ಇದಲ್ಲದೆ, ವಿವಿಧ ಸ್ಥಳಗಳಲ್ಲಿನ ಇದೇ ರೀತಿಯ ಶಾಸನಗಳು ಮಹಿಳೆಯರು ನಿಂತಿರುವಾಗ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ದೃಢಪಡಿಸಿವೆ. ಇಂದಿಗೂ ಸಹ, ಈ ಶಿಲ್ಪಗಳನ್ನು ನೀವು ತಂಜಾವೂರಿನಿಂದ ಕುಂಭಕೋಣಂ ದೇವಾಲಯದ ಸ್ವಲ್ಪ ಮುಂದೆ, ಮೈಲಾಡುತುರೈಗೆ ಹೋಗುವ ಮಾರ್ಗದಲ್ಲಿ ನೋಡಬಹುದು. 

click me!