ಜಾತಿ, ಧರ್ಮ ಅಥವಾ ಸಮಾಜವೇ ಆಗಿರಲಿ, ಮದುವೆಗೆ ಎಲ್ಲಾ ಧರ್ಮಗಳಲ್ಲೂ ವಿಶಿಷ್ಟವಾದ ಸ್ಥಾನವನ್ನು ನೀಡಲಾಗಿದೆ. ಅದು ಜೀವನದ ಒಂದು ಭಾಗವಾಗಿದೆ ಮತ್ತು ಭಾರತದಲ್ಲಿ ಅದನ್ನು ಏಳು ಜನ್ಮಗಳ ಅನುಬಂಧ ಎಂದು ಸಹ ಕರೆಯಲಾಗುತ್ತದೆ. ಇಲ್ಲಿ ಏಳು ಸುತ್ತುಗಳನ್ನು ತೆಗೆದುಕೊಂಡ ನಂತರ, ಅಂದರೆ ಸಪ್ತಪದಿ ತುಳಿದ ನಂತರ ವಧು ಮತ್ತು ವರರು ಏಳು ಜನ್ಮಗಳ ಕಾಲ ಪರಸ್ಪರ ಒಟ್ಟಿಗೆ ಇರುವುದಾಗಿ ವಚನ ನೀಡುತ್ತಾರೆ. ಆದ್ರೆ ಎಲ್ಲಾ ದೇಶದಲ್ಲಿ ಇದೇ ಸಂಪ್ರದಾಯ ಇರಬೇಕು ಎನ್ನಲಾಗೋದಿಲ್ಲ.