ಬ್ಯಾಂಕಾಕ್‌ಗೆ ಭಾರತೀಯರು ಅತಿಹೆಚ್ಚು ವಿಸಿಟ್ ಹಾಕೋದ್ಯಾಕೆ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

First Published | Sep 1, 2024, 2:02 PM IST

ಬೆಂಗಳೂರು: ಭಾರತೀಯ ಪ್ರವಾಸಿಗರ ಪಾಲಿಗೆ ಬ್ಯಾಂಕಾಕ್ ಎನ್ನುವುದು ಒಂದು ರೀತಿ ಒಳ್ಳೆಯ ಟ್ರ್ಯಾವೆಲ್ ಡೆಸ್ಟಿನೇಷನ್. ಭಾರತೀಯರು ಬ್ಯಾಂಕಾಕ್‌ಗೆ ಯಾಕೆ ಹೆಚ್ಚು ಟೂರ್ ಹೋಗಲು ಬಯಸುತ್ತಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಥಾಯ್ಲೆಂಡ್‌ನಲ್ಲಿರುವ ಬ್ಯಾಂಕಾಕ್ ಎನ್ನುವ ಭೂಲೋಕದ ಸ್ವರ್ಗಕ್ಕೆ ಜಗತ್ತಿನಾದ್ಯಂತ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ.  ಅದೇ ರೀತಿ ಭಾರತದಿಂದಲೂ ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಬ್ಯಾಂಕಾಕ್‌ಗೆ ಟೂರ್ ಹೋಗುತ್ತಾರೆ.
 

2023ರಲ್ಲಿ ಥಾಯ್ಲೆಂಡ್‌ಗೆ ಭೇಟಿ ಕೊಟ್ಟ ಪ್ರವಾಸಿಗರ ಪೈಕಿ ಭಾರತೀಯರು 4ನೇ ಸ್ಥಾನ ಪಡೆದಿದ್ದಾರೆ. ಮಲೇಷ್ಯಾ, ಚೀನಾ ಹಾಗೂ ದಕ್ಷಿಣ ಕೊರಿಯಾ ಬಳಿಕ ಭಾರತೀಯರು ಅತಿಹೆಚ್ಚಿನ ಸಂಖ್ಯೆಯಲ್ಲಿ ಥಾಯ್ಲೆಂಡ್‌ಗೆ ಭೇಟಿ ಕೊಟ್ಟಿದ್ದಾರೆ.

Tap to resize

ಥಾಯ್ಲೆಂಡ್‌ನ ರಾಜಧಾನಿಯೇ ಈ ಬ್ಯಾಂಕಾಕ್. ಇಲ್ಲಿರುವ ಮರೀನ್ ಪಾರ್ಕ್‌ ಹಾಗೂ ಸಫಾರಿ ಜಗತ್ತಿನಾದ್ಯಂತ ಇರುವ ಅಪಾರ ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡಿದೆ. ಥಾಯ್ಲೆಂಡ್‌ಗೆ ಪ್ರವಾಸೋದ್ಯಮವೇ ಹೆಚ್ಚಿನ ಆದಾಯ ತಂದು ಕೊಡುತ್ತಿದೆ.

ಇನ್ನು ಭಾರತೀಯರು ಏಕೆ ಹೆಚ್ಚಿನ ಸಂಖ್ಯೆಯಲ್ಲಿ ಥಾಯ್ಲೆಂಡ್‌ಗೆ ಭೇಟಿ ಕೊಡುತ್ತಾರೆ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು ಅಲ್ಲವೇ? ಈ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನಾವಿಂದು ಎಳೆ ಎಳೆಯಾಗಿ ಉತ್ತರ ಕೊಡುತ್ತೇವೆ ನೋಡಿ.

ಹೆಚ್ಚಿನ ಸಂಖ್ಯೆಯ ಭಾರತೀಯರು ಪ್ರವಾಸಕ್ಕಾಗಿ ಬ್ಯಾಂಕಾಕ್‌ ಅನ್ನೇ ಆಯ್ಕೆ ಮಾಡಿಕೊಳ್ಳುವುದೇಕೆ ಎಂದರೆ, ಭಾರತಕ್ಕೆ ಇದು ತುಂಬಾ ಹತ್ತಿರದ ವಿದೇಶಿ ಪ್ರವಾಸಿ ತಾಣ ಎನಿಸಿಕೊಂಡಿದೆ.  ನವದೆಹಲಿಯಿಂದ ಬ್ಯಾಂಕಾಕ್‌ಗೆ ತೆರಳಲು ಕೇವಲ 4-5 ಗಂಟೆ ಸಮಯ ಸಾಕು.

ಇನ್ನು ಮತ್ತೊಂದು ಕಾರಣವೆಂದರೆ, ಭಾರತದಿಂದ ಬ್ಯಾಂಕಾಕ್‌ಗೆ ತೆರಳಲು ವಿಮಾನಯಾನದ ಟಕೆಟ್ ಖರ್ಚು ಕೂಡಾ ದುಬಾರಿಯಲ್ಲ. ಥಾಯ್ಲೆಂಡ್‌ನಲ್ಲಿರುವ ಸುಂದರ ಬೀಚ್‌ಗಳು ಭಾರತೀಯರನ್ನು ಬ್ಯಾಂಕಾಕ್‌ನತ್ತ ಕೈಬೀಸಿ ಕರೆಯುವಂತೆ ಮಾಡಿವೆ.

ಇನ್ನು ಇದೆಲ್ಲದಕ್ಕಿಂತ ಮುಖ್ಯವಾಗಿ ಥಾಯ್ಲೆಂಡ್ ಇಲ್ಲಿನ ನೈಟ್‌ಲೈಫ್ ವಿಚಾರಕ್ಕೆ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಇಲ್ಲಿನ ನೈಟ್‌ಲೈಫ್, ಮಸಾಜ್‌ ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಹೆಚ್ಚಿನ ಮಂದಿ ಬ್ಯಾಂಕಾಕ್‌ಗೆ ಹಾರುತ್ತಾರೆ.

ಬ್ಯಾಂಕಾಕ್‌ನಲ್ಲಿರುವ ವಾತಾವರಣವೂ ಭಾರತೀಯರಿಗೆ ಹೊಂದಿಕೆಯಾಗುವಂತಿದೆ. ಭಾರತದಲ್ಲಿರುವಂತೆ ಥಾಯ್ಲೆಂಡ್‌ನಲ್ಲಿನ ಸ್ಟ್ರೀಟ್‌ ಫುಡ್‌ ಕೂಡಾ ಭಾರತೀಯ ನಾಲಿಗೆ ಸವಿಯನ್ನು ತಣಿಸುವಂತೆ ಮಾಡುತ್ತಿದೆ.

ಈ ಎಲ್ಲಾ ಮಾಹಿತಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಅಭಿಪ್ರಾಯವಲ್ಲ, ಬದಲಾಗಿ ಹಲವು ವರದಿಗಳು ಹಾಗೂ ಅಲ್ಲಿಗೆ ಪ್ರವಾಸ ಮಾಡಿದ ಪ್ರವಾಸಿಗರ ಮಾಹಿತಿ ಆದರಿಸಿ ಈ ಚಿತ್ರ ವರದಿ ಮಾಡಿದ್ದೇವೆ.

Latest Videos

click me!