ಗಂಗಾ ಮಾತೆ ಯಾವಾಗ ? ಎಲ್ಲಿ ಹುಟ್ಟಿದ್ದು? ಇಲ್ಲಿದೆ ನಿಮಗೆ ತಿಳಿಯದ ಅಚ್ಚರಿಯ ಸಂಗತಿ

First Published | Jan 8, 2025, 6:48 PM IST

ಭಾರತದ ಪವಿತ್ರ ನದಿಯಾಗಿರುವ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ರೆ ಪಾಪಗಳು ದೂರವಾಗುತ್ತೆ. ಆದರೆ ನಿಮಗೆ ಗಂಗಾನದಿಯ ಹುಟ್ಟು, ಮೂರು ಲೋಕದಲ್ಲಿ ಆಕೆ ಸಂಚರಿಸಿದ ಕಥೆ ಗೊತ್ತ. ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ. 
 

ಭಾರತದ ಪವಿತ್ರ ನದಿಗಳಲ್ಲಿ ಒಂದು ಗಂಗಾ (Ranga River). ಗಂಗಾ ನದಿಯಲ್ಲಿಸ್ನಾನ ಮಾಡಿದರೆ ಎಲ್ಲಾ ಪಾಪಗಳು ದೂರವಾಗುತ್ತೆ ಎನ್ನುತ್ತಾರೆ. ಆದರೆ ಈ ಗಂಗಾ ನದಿಯ ಹುಟ್ಟಿನ ಬಗ್ಗೆ ನಿಮಗೆ ಮಾಹಿತಿ ಇದೆಯೇ? ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ನೀಡುತ್ತಿದ್ದೇವೆ. 
 

ಗಂಗಾ ದೇವಿಯು ವೈಶಾಖ ಮಾಸದ ಶುಕ್ಲಪಕ್ಷದ ಏಳನೇ ದಿನದಂದು ಜನಿಸಿದಳು (Ganga Sapthami). ಗಂಗಾ ಮಾತೆಯ ನಿಖರವಾದ ವಯಸ್ಸು ತಿಳಿದಿಲ್ಲ, ಆದರೆ ಹಿಮಾಲಯ ಪರ್ವತಗಳ ರಚನೆಯ ನಂತರ ಈ ನದಿ ಹಿಮಾಲಯದಲ್ಲಿ ಹುಟ್ಟಿಕೊಂಡಿತು ಎನ್ನುವ ನಂಬಿಕೆ ಅನಾದಿ ಕಾಲದಿಂದಲೂ ಇದೆ. 

Tap to resize

ಒಂದು ಅಂದಾಜಿನ ಪ್ರಕಾರ, ಹಿಮಾಲಯವು (Himalayan Mountain) ಹುಟ್ಟಿಕೊಂಡದ್ದು ಸುಮಾರು 50 ಮಿಲಿಯನ್ ವರ್ಷಗಳ ಹಿಂದೆ ಎಂದಾದರೆ, ಅದಾದ ನಂತರ ಅಂದ್ರೆ, ಅದರ ಆಸು ಪಾಸಿನ ಸಮಯದಲ್ಲಿ ಗಂಗಾ ನದಿ ಹುಟ್ಟಿಕೊಂಡಿತು. ಗಂಗಾ ನದಿಯು ಭಾರತೀಯ ಮತ್ತು ಯುರೇಷಿಯನ್ ಫಲಕಗಳ ಘರ್ಷಣೆಯಿಂದ ರೂಪುಗೊಂಡಿತು ಎಂದು ಸಹ ಹೇಳಲಾಗುತ್ತೆ. 

ಪುರಾಣಗಳ ಪ್ರಕಾರ, ವಾಮನ ಅವತಾರದಲ್ಲಿ, ಬ್ರಹ್ಮನು ವಿಷ್ಣುವಿನ ಪಾದಗಳನ್ನು ತೊಳೆದುನಂತೆ, ನಂತರ ವಿಷ್ಣುವಿನ ಹೆಬ್ಬೆರಳಿನಿಂದ ಗಂಗಾ ಕಾಣಿಸಿಕೊಂಡಳು ಎನ್ನುವ ಪ್ರತೀತಿ ಇದೆ. ಇನ್ನೂ ಕೆಲವು ಕಥೆಗಳಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ಸ್ಪರ್ಶದಿಂದಾಗಿ ಗಂಗೆಯು ಜನಿಸಿದ್ದಾಳೆ ಎನ್ನಲಾಗಿದೆ. 
 

ನಂತರ, ಭಗೀರಥನ ಕಠಿಣ ತಪಸ್ಸಿಗೆ ಮೆಚ್ಚಿದ ಗಂಗೆ ಸ್ವರ್ಗದಿಂದ ಭೂಮಿಗಿಳಿದು ಬಂದಳು, ಆದರೆ ತನ್ನ ರಭಸದಿಂದ ಭೂಮಿ ಕೊಚ್ಚಿ ಹೋಗುವುದನ್ನು ಅರಿತ ಗಂಗೆ, ಇದನ್ನೇ ಭಗೀರಥನ ಮುಂದೆ ಹೇಳಿದಾಗ, ಭಗೀರಥ ಶಿವನ ತಪಸ್ಸು ಮಾಡಿ, ಗಂಗೆಯನ್ನು ತನ್ನ ಜಟೆಯಲ್ಲಿ ಇರಿಸುವಂತೆ ಮಾಡಿ, ಗಂಗೆ ನಿಧಾನವಾಗಿ ಹರಿಯುವಂತೆ ಮಾಡಿದ. 
 

ಶಿವ ತನ್ನ ಜಟೆಯನ್ನು ತಡೆ ಹಿಡಿದರೂ ಸಹ ಗಂಗೆ ಹರಿದ ರಭಸಕ್ಕೆ ಮೊದಲಿಗೆ ಜಹ್ನು ಋಷಿಗಳ ಆಶ್ರಮ ನೀರಿನಲ್ಲಿ ಕೊಚ್ಚಿ ಹೋಯಿತಂತೆ, ಅದಕ್ಕಾಗಿ ಋಷಿಗಳು ಗಂಗೆಯನ್ನು ಪೂರ್ತಿಯಾಗಿ ಕುಡಿದುಬಿಟ್ಟರಂತೆ, ಭಗೀರಥ (Bhagiratha)ಬೇಡಿಕೊಂಡ ನಂತರ ಗಂಗೆಯನ್ನು ಕಿವಿಯ ಮೂಲಕ ಹೊರ ಚೆಲ್ಲಿದರು. ಹಾಗಾಗಿ ಗಂಗೆಗೆ ಜಾಹ್ನವಿ ಎನ್ನುವ ಹೆಸರು ಕೂಡ ಬಂತು. 
 

ಗಂಗೆ ಭೂಮಿಗೆ ಬರಲು ಕಾರಣ ಭಗೀರಥ. ಹಾಗಾಗಿ ಗಂಗೋತ್ರಿಯ ಮೂಲಕ ಹರಿಯುವ ಗಂಗಾ ನದಿಯ ಭಾಗವನ್ನು ಭಗೀರಥಿ ಎನ್ನುತ್ತಾರೆ. ಗಂಗೆ ಮೂರು ಲೋಕಗಳಲ್ಲಿ ಹರಿಯುವುದರಿಂದ ಆಕೆಯನ್ನು ತ್ರಿಪಥಗೆ ಎಂದು ಸಹ ಕರೆಯುತ್ತಾರೆ. 
 

ಪುರಾಣಗಳ ಪ್ರಕಾರ, ಗಂಗಾ ಹಿಮಾಲಯ ಪರ್ವತದ ಮಗಳು. ಅಂದರೆ ಅವರು ತಾಯಿ ಪಾರ್ವತಿಯ (Parvathi Devi) ತಂದೆಯೂ ಹೌದು. ಹಾಗಾಗಿಯೇ ಗಂಗೆಯನ್ನು ತಾಯಿ ಪಾರ್ವತಿಯ ಸಹೋದರಿ ಎಂದು ಹೇಳುತ್ತಾರೆ. 
 

Latest Videos

click me!