ಭಾರತೀಯ ರೈಲ್ವೆಯನ್ನು ದೇಶದ ಲೈಫ್‌ಲೈನ್ ಎಂದು ಕರೆಯಲಾಗುತ್ತದೆ. ಪ್ರತಿದಿನ 2 ಕೋಟಿಗೂ ಅಧಿಕ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ಯಾಸೆಂಜರ್ ರೈಲುಗಳು ದೇಶದ ಮೂಲೆ ಮೂಲೆಯ ಜನರನ್ನು ಸಂಪರ್ಕಿಸಿವೆ.
ದೇಶದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳಲು ಅದರಲ್ಲಿಯೂ ದೀರ್ಘ ಪ್ರಯಾಣಕ್ಕೆ ರೈಲು ಸಾರಿಗೆ ಉತ್ತಮ ಆಯ್ಕೆಯಾಗಿದೆ. ಕೆಲವು ವೇಳೆ ಪ್ರಯಾಣದ ಮಾರ್ಗದಲ್ಲಿ ರೈಲುಗಳನ್ನು ಬದಲಿಸಬೇಕಾಗುತ್ತದೆ.
ಮಥುರಾ ಜಂಕ್ಷನ್ ನಿಲ್ದಾಣದಿಂದ ದೇಶದ ಎಲ್ಲಾ ಭಾಗಕ್ಕೂ ರೈಲು ಸೇವೆ ಲಭ್ಯವಿದೆ. ರಾಜಧಾನಿ ದೆಹಲಿ ಸಮೀಪದಲ್ಲಿರುವ ಈ ನಿಲ್ದಾಣ ದಿನದ 24 ಗಂಟೆಯೂ ಪ್ರಯಾಣಿಕರನ್ನು ಹೊಂದಿರುತ್ತದೆ. ದೇಶದ ಯಾವುದೇ ಭಾಗಕ್ಕೆ ತೆರಳಬೇಕಿದ್ರೆ ನಿಮಗೆ ಇಲ್ಲಿ ರೈಲು ಸಿಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಇಲ್ಲಿ ರೈಲುಗಳು ಲಭ್ಯವಿವೆ.
ಉತ್ತರ ಮಧ್ಯ ರೈಲ್ವೆ ಅಡಿಯಲ್ಲಿ ಮಥುರಾ ಜಂಕ್ಷನ್ ದೇಶದ ಅತಿದೊಡ್ಡ ರೈಲ್ವೆ ಜಂಕ್ಷನ್‌ಗಳಲ್ಲಿ ಒಂದಾಗಿದೆ. 7 ವಿವಿಧ ಮಾರ್ಗಗಳ ರೈಲುಗಳು ಇಲ್ಲಿಂದ ಹೊರಡುತ್ತವೆ. ಮಥುರಾ ಜಂಕ್ಷನ್ ನಿಲ್ದಾಣ 10 ಪ್ಲಾಟ್‌ಫಾರಂಗಳನ್ನು ಹೊಂದಿವೆ.
ಮಥುರಾ ಜಂಕ್ಷನ್ ನಿಲ್ದಾಣದಿಂದ ಪ್ರತಿದಿನ 197 ರೈಲುಗಳು ಹೊರಡುತ್ತವೆ. ಇವುಗಳಲ್ಲಿ ರಾಜಧಾನಿ, ಶತಾಬ್ದಿ, ದುರಂತೋ ಮುಂತಾದ ಸೂಪರ್‌ಫಾಸ್ಟ್ ರೈಲುಗಳೂ ಸೇರಿವೆ. ದೆಹಲಿ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬರುವ ರೈಲುಗಳು ಇಲ್ಲಿ ನಿಲ್ಲುತ್ತವೆ. ಈ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಗೆ 13 ರೈಲುಗಳು ಹೊರಡುತ್ತವೆ.

ಮಥುರಾ ಜಂಕ್ಷನ್ ದೇಶದ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಇಲ್ಲಿ ನಿಮಗೆ 24 ಗಂಟೆಯೂ ರೈಲುಗಳು ಸಿಗುತ್ತವೆ. 10 ಪ್ಲಾಟ್‌ಫಾರ್ಮ್ ಹೊಂದಿರುವ ಕಾರಣ ಹೆಚ್ಚಿನ ಸಂಖ್ಯೆಯ ರೈಲುಗಳ ಸಂಚಾರವನ್ನು ಕಾಣಬಹುದು.