ಹೊಸ ವರ್ಷವನ್ನು ಆಚರಿಸಲು (new year celebration) ಜನರು ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ದೇಶವೂ ಹೊಸ ವರ್ಷವನ್ನು ಆಚರಿಸಲು ವಿಭಿನ್ನ ವಿಧಾನ ಹೊಂದಿದೆ. ಅಂದರೆ, ನೀವು ಮನೆಯಲ್ಲಿ ಅಥವಾ ಹೊರಗೆ ಹೊಸ ವರ್ಷವನ್ನು ಆಚರಿಸೋ ಮೂಲಕ ಸೆಲೆಬ್ರೇಟ್ ಮಾಡುತ್ತೀರಿ. ಅಂತೆಯೇ, ಕೆಲವು ದೇಶಗಳಲ್ಲಿ ಹೊಸ ವರ್ಷದ ಆಚರಣೆಯೇ ವಿಶಿಷ್ಟ ಸಂಪ್ರದಾಯಗಳಿವೆ. ಅದರ ಬಗ್ಗೆ ತಿಳಿದುಕೊಂಡರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಹೊಸ ವರ್ಷಾಚರಣೆಯ ಅಂತಹ ಕೆಲವು ವಿಶಿಷ್ಟ ಸಂಪ್ರದಾಯಗಳ ಬಗ್ಗೆ ತಿಳಿಯೋಣ.
ಸ್ಪೇನ್ (Spain)
ಸ್ಪೇನ್ ನ ಹೊಸ ವರ್ಷದ ಸಂಪ್ರದಾಯ (tradition) ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಸ್ಪೇನ್‌ನಲ್ಲಿ, ಹೊಸ ವರ್ಷದ ಮಧ್ಯರಾತ್ರಿಯಲ್ಲಿ ಪ್ರತಿ ಹೊಡೆತಕ್ಕೆ 12 ದ್ರಾಕ್ಷಿಗಳನ್ನು ತಿನ್ನುವುದು ವಾಡಿಕೆಯಾಗಿದೆ. ಇಲ್ಲಿ ಪ್ರತಿ ದ್ರಾಕ್ಷಿ (eating grapes)ಎಂದರೆ ಮುಂಬರುವ ವರ್ಷದ ಒಂದು ತಿಂಗಳಿಗೆ ಅದೃಷ್ಟ ಎಂದು ಅರ್ಥ. ಸ್ಪೇನ್ ನ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾದಂತಹ ದೊಡ್ಡ ನಗರಗಳಲ್ಲಿ, ಜನರು ಮೇನ್ ಸ್ಕ್ವೇರ್ ನಲ್ಲಿ ಒಟ್ಟುಗೂಡುತ್ತಾರೆ ಮತ್ತು ದ್ರಾಕ್ಷಿಯನ್ನು ಒಟ್ಟಿಗೆ ತಿನ್ನುತ್ತಾರೆ.
ಡೆನ್ಮಾರ್ಕ್ (Denmark)
ಡೆನ್ಮಾರ್ಕ್ ನ ಜನರು ಸ್ನೇಹಿತರು ಮತ್ತು ಕುಟುಂಬದವರ ಬಾಗಿಲಿಗೆ ಹಳೆಯ ತಟ್ಟೆ ಮತ್ತು ಕನ್ನಡಕಗಳನ್ನು ಎಸೆಯುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಈ ರೀತಿ ಮಾಡೋದ್ರಿಂದ ಕೆಟ್ಟ ಆತ್ಮಗಳು ಕಣ್ಮರೆಯಾಗುತ್ತವೆ ಎಂದು ಈ ಜನರು ನಂಬುತ್ತಾರೆ. ನಿಮ್ಮ ಬಾಗಿಲಲ್ಲಿ ಹೆಚ್ಚು ಮುರಿದ ಪಾತ್ರೆಗಳನ್ನು ಸಂಗ್ರಹಿಸಿದಷ್ಟೂ ನೀವು ಉತ್ತಮವಾಗಿರುತ್ತೀರಿ ಎಂದು ನಂಬಲಾಗಿದೆ.
ಅಮೆರಿಕ (America)
ಹೊಸ ವರ್ಷದ ಸಂದರ್ಭದಲ್ಲಿ, ಪ್ರತಿಯೊಬ್ಬ ಅಮೇರಿಕನ್ ಜನರು ತಮ್ಮ ಟಿವಿಯ ಮುಂದೆ ಕುಳಿತುಕೊಳ್ಳುತ್ತಾರೆ. ಟೈಮ್ಸ್ ನ ಹೊಸ ಪ್ರಧಾನ ಕಚೇರಿಯಲ್ಲಿ ಚೆಂಡು ಬೀಳುವುದನ್ನು ನೋಡುವ ಈ ಅಭ್ಯಾಸವು ಹೊಸ ವರ್ಷದ ಆಚರಣೆಯ ಅತ್ಯಂತ ಜನಪ್ರಿಯ ಸಂಪ್ರದಾಯಗಳಲ್ಲಿ ಒಂದಾಗಿದೆ.
ಬ್ರೆಜಿಲ್ (Brazil)
ಬ್ರೆಜಿಲ್‌ನಲ್ಲಿ ಹೊಸ ವರ್ಷದ ಆಚರಣೆಗಾಗಿ ಜನರು ಬಹಳ ವಿಶಿಷ್ಟವಾದ ಕೆಲಸವನ್ನು ಮಾಡುತ್ತಾರೆ. ಹೊಸ ವರ್ಷದ ಮುನ್ನಾದಿನದಂದು ವಿಶೇಷ ಒಳ ಉಡುಪುಗಳನ್ನು (special underwear) ಧರಿಸುವುದು ಮುಂಬರುವ ವರ್ಷದಲ್ಲಿ ಅದೃಷ್ಟ ಎಂದು ಇಲ್ಲಿನ ಜನರು ನಂಬುತ್ತಾರೆ.
ಫಿನ್ಲ್ಯಾಂಡ್ (Phinland)
ಫಿನ್ ಲ್ಯಾಂಡ್ ನ ಜನರು ಮುಂಬರುವ ವರ್ಷದ ಬಗ್ಗೆ ಊಹೆ ಮಾಡುತ್ತಾರೆ. ಇದಕ್ಕಾಗಿ, ಅವರು ಕರಗಿದ ಮೆಟಲ್ ಅನ್ನು ನೀರಿನಲ್ಲಿ ಅದ್ದಿ ಲೋಹ ಗಟ್ಟಿಯಾದ ನಂತರ ಯಾವ ಆಕಾರವಿದೆ ಎಂದು ಗೆಸ್ ಮಾಡ್ತಾರೆ. ಲೋಹವು ಹೃದಯ ಅಥವಾ ಉಂಗುರದ ಆಕಾರ ಹೊಂದಿದ್ದರೆ, ಅದರರ್ಥ ಮುಂದಿನ ವರ್ಷ ಮದುವೆಗೆ ಸಂಬಂಧಿಸಿದೆ ಎಂದು. ಅದೇ ಸಮಯದಲ್ಲಿ, ಲೋಹವು ಹಡಗಿನ ರೂಪ ತಾಳಿದರೆ ಮುಂದಿನ ವರ್ಷ ಪ್ರಯಾಣ ಮಾಡುತ್ತೀರಿ ಅನ್ನೋದನ್ನು ಸೂಚಿಸುತ್ತೆ ಎಂದು ಅಲ್ಲಿನ ಜನ ನಂಬುತ್ತಾರೆ.
ಭಾರತ: (India)
ಭಾರತದ ಹಲವೆಡೆ ಮುದುಕನ ಪ್ರತಿಕೃತಿಯನ್ನು ತಯಾರಿಸಿ, ಅದಕ್ಕೆ ಮಧ್ಯರಾತ್ರಿ ಬೆಂಕಿ ಹಚ್ಚಲಾಗುತ್ತಿತ್ತು. ಮುದುಕನ ಪ್ರತಿಕೃತಿ ಹಳೆಯ ವರ್ಷವನ್ನು ಸೂಚಿಸಿದರೆ, ಸುಡುವಿಕೆ ಹಳೆಯ ವರ್ಷದಿಂದ ಕುಂದುಕೊರತೆಗಳನ್ನು ನಾಶ ಮಾಡೋದನ್ನು ಸಂಕೇತಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಚರಣೆ ಕಡಿಮೆಯಾಗಿದೆ.
ಫಿಲಿಪೈನ್ಸ್ (Philipines):
ಹೊಸ ವರ್ಷದ ಮುನ್ನಾದಿನದಂದು, ಫಿಲಿಪೈನ್ಸ್ ನ ಕುಟುಂಬಗಳು ಸೇಬುಗಳು, ದ್ರಾಕ್ಷಿಗಳು ಮತ್ತು ಪ್ಲಮ್ ಗಳಂತಹ 12 ದುಂಡಗಿನ ಹಣ್ಣುಗಳನ್ನು ಸೇವಿಸುತ್ತಾರೆ. ಅವು ತಮ್ಮ ಆಕಾರದಿಂದಾಗಿ ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ. ಪ್ರತಿಯೊಂದು ಹಣ್ಣು ವರ್ಷದ ಒಂದು ತಿಂಗಳನ್ನು ಪ್ರತಿನಿಧಿಸುತ್ತದೆ.
ಗ್ರೀಸ್ (Greece):
ಈರುಳ್ಳಿಯು ಅಡುಗೆಮನೆಯ ಪ್ರಧಾನ ಆಹಾರವಾಗಿರುವುದಲ್ಲದೆ, ಮುಂಬರುವ ಹೊಸ ವರ್ಷಕ್ಕೆ ನಿಮಗೆ ಅದೃಷ್ಟವನ್ನು ತರಬಹುದು. ಹೌದು, ಗ್ರೀಸ್ ನಲ್ಲಿ ಬಾಗಿಲ ಹೊರಗೆ ಈರುಳ್ಳಿಯನ್ನು ನೇತುಹಾಕುವುದು ಸಂಪ್ರದಾಯವಾಗಿದೆ. ಇದು ಫಲವತ್ತತೆ ಮತ್ತು ಬೆಳವಣಿಗೆಯನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ.