ಈ ದೇಶಗಳಲ್ಲಿ ವೀಸಾ ಇಲ್ಲದೇ ಹೋಗಿ ಹೊಸ ವರ್ಷ ಸೆಲೆಬ್ರೇಟ್ ಮಾಡಬಹುದು

First Published Dec 5, 2022, 5:45 PM IST

ಇತ್ತೀಚಿನ ದಿನಗಳಲ್ಲಿ ವಿದೇಶಕ್ಕೆ ಪ್ರಯಾಣಿಸುವ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಬೇಸಿಗೆ ರಜೆ, ಚಳಿಗಾಲದ ರಜೆ ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಾಗಲಿ, ಭಾರತೀಯರು ವಿದೇಶಕ್ಕೆ ಪ್ರಯಾಣಿಸಲು ಹೊರಗೆ ಹೋಗುತ್ತಲೇ ಇರುತ್ತಾರೆ. ಈ ಬಾರಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ವೀಸಾ ಇಲ್ಲದೇನೆ ಈ ತಾಣಗಳಿಗೆ ಭೇಟಿ ನೀಡಿ.

ಡಿಸೆಂಬರ್ 25 ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಭಾರತೀಯರು ವಿದೇಶಗಳಿಗೆ ಹೋಗುತ್ತಾರೆ. ಅನೇಕ ದೇಶಗಳಿಗೆ ಹೋಗಲು ವೀಸಾ ಅಗತ್ಯವಿದ್ದರೂ, ವೀಸಾ ಇಲ್ಲದೇ ನೀವು ಕ್ರಿಸ್ ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ವಿದೇಶಕ್ಕೆ ಹೋಗಲು ಬಯಸಿದರೆ, ನೀವು ಈ ಲೇಖನವನ್ನು ಓದಬೇಕು.ನಿಮಗೆ ಕೆಲವು ದೇಶಗಳ ಬಗ್ಗೆ ಹೇಳಲಿದ್ದೇವೆ, ಅಲ್ಲಿ ನೀವು ಡಿಸೆಂಬರ್ 25 ಮತ್ತು ಹೊಸ ವರ್ಷವನ್ನು ವೀಸಾ ಇಲ್ಲದೆ ಆಚರಿಸಬಹುದು. ಅವುಗಳ ಬಗ್ಗೆ ತಿಳಿಯೋಣ
 

ಥೈಲ್ಯಾಂಡ್ (Thailand)

ಥೈಲ್ಯಾಂಡ್, ಭಾರತೀಯ ಜನರು ಹೆಚ್ಚು ಭೇಟಿ ನೀಡುವಂತಹ ಸ್ಥಳ. ಡಿಸೆಂಬರ್ 25 (Christmas) ಮತ್ತು ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಬಯಸಿದರೆ, ನೀವು ಥೈಲ್ಯಾಂಡ್‌ಗೆ ಭೇಟಿ ನೀಡಬಹುದು. ಭಾರತೀಯ ಜನರಿಗೆ ಥೈಲ್ಯಾಂಡ್ ಗೆ ಹೋಗಲು ವೀಸಾ ಅಗತ್ಯವಿಲ್ಲ.

ಮಾಲ್ಡೀವ್ಸ್ (Maldives)

ಮಾಲ್ಡೀವ್ಸ್ ಬಹುತೇಕ ಪ್ರತಿಯೊಬ್ಬ ಭಾರತೀಯನು ಭೇಟಿ ನೀಡಲು ಬಯಸುವ ದೇಶ. ಕೇರಳದಿಂದ ಸುಮಾರು 719 ಕಿ.ಮೀ ದೂರದಲ್ಲಿರುವ ಈ ದೇಶವು ಭಾರತೀಯರಿಗೆ ವೀಸಾ ಮುಕ್ತವಾಗಿದೆ. ಡಿಸೆಂಬರ್ 25 ಮತ್ತು ಹೊಸ ವರ್ಷದಂದು ಸಾವಿರಾರು ಭಾರತೀಯರು ಇಲ್ಲಿಗೆ ಆಗಮಿಸುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ, ಮಾಲ್ಡೀವ್ಸ್ ನಲ್ಲಿ ವರ್ಣರಂಜಿತ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.  

ಮಾಲ್ಡೀವ್ಸ್ ನಲ್ಲಿ, ನೀವು ಮಾಲೆ ಸಿಟಿ, ಬನಾನಾ ರೀಫ್ ಮತ್ತು ಚೀನಾ ಮಾಲ್ಡೀವ್ಸ್ ಫ್ರೆಂಡ್ ಶಿಪ್ ಬ್ರಿಡ್ಜ್ ನಂತಹ ಸ್ಥಳಗಳಿಗೆ ಭೇಟಿ ನೀಡಬಹುದು ಮತ್ತು ಹೊಸ ವರ್ಷವನ್ನು ಆಚರಿಸಬಹುದು. ಇಲ್ಲಿ ನೀವು ಖಂಡಿತವಾಗಿಯೂ ಹೊಸ ನಿಮ್ಮ ಹಾಲಿಡೆಯನ್ನು ಸಂಪೂರ್ಣವಾಗಿ ಎಂಜಾಯ್ ಮಾಡುತ್ತೀರಿ. 

ಮಕಾವ್ (Macau)

ಟ್ರಾವೆಲ್ ಮಾಡಲು ಇಷ್ಟಪಡುವ ವ್ಯಕ್ತಿಯ ಕನಸು ಮಕಾವುವನ್ನು ಒಮ್ಮೆ ತಲುಪುವುದು. ನೀವು ವರ್ಷಾಂತ್ಯದ ಲಾಂಗ್ ಹಾಲಿಡೇ ಎಂಜಾಯ್ ಮಾಡಲು ನೀವು ಸುಂದರವಾದ ವಿದೇಶಕ್ಕೆ ಹೋಗಲು ಬಯಸಿದರೆ, ನೀವು ಮಕಾವ್‌ಗೆ ಹೋಗಬಹುದು. ಕ್ರಿಸ್ಮಸ್, ನ್ಯೂ ಇಯರ್ ಈ ಎರಡೂ ಸಂದರ್ಭಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ನೀವು ಸೇಂಟ್ ಪಾಲ್, ವೆನಿಷಿಯನ್ ಮಕಾವ್ ಮತ್ತು ಮಕಾವ್ ಟವರ್ ಕನ್ವೆನ್ಷನ್ ಮತ್ತು ಮನರಂಜನಾ ಕೇಂದ್ರದಂತಹ ಅತ್ಯುತ್ತಮ ಸ್ಥಳಗಳಿಗೆ ಭೇಟಿ ನೀಡಬಹುದು. ನೀವು ಹೊಸ ವರ್ಷದ ಪಾರ್ಟಿಯನ್ನು ಸಹ ಆನಂದಿಸಬಹುದು.  

ಇಂಡೋನೇಷ್ಯಾ (Indonesia)

ನೀವು ಡಿಸೆಂಬರ್ 25 ಅಥವಾ ಹೊಸ ವರ್ಷವನ್ನು ಮುಕ್ತ ಹೃದಯದಿಂದ ಆನಂದಿಸಲು ಬಯಸಿದರೆ, ನೀವು ಖಂಡಿತವಾಗಿಯೂ ಈ ಬಾರಿ ಇಂಡೋನೇಷ್ಯಾಕ್ಕೆ ಹೋಗಬಹುದು. ಈ ಎರಡೂ ಸಂದರ್ಭಗಳಲ್ಲಿ, ಮಾರಿಷಸ್ ನಲ್ಲಿ ರಾತ್ರಿಯಿಡೀ ಒಂದು ಪಾರ್ಟಿ ಇರುತ್ತದೆ. 
 

ಕೇವಲ ಭಾರತೀಯ ಜನರು ಮಾತ್ರವಲ್ಲದೆ ಯೂರೋಪಿನಿಂದಲೂ ಜನರು ಇಂಡೋನೇಷ್ಯಾಕ್ಕೆ ಭೇಟಿ ನೀಡಲು ಬರುತ್ತಲೇ ಇರುತ್ತಾರೆ. ಇಂಡೋನೇಷ್ಯಾದಲ್ಲಿ, ನೀವು ಬಾಲಿ ಮತ್ತು ಜಕಾರ್ತಾದಂತಹ ನಗರಕ್ಕೆ ಭೇಟಿ ನೀಡುವುದರ ಜೊತೆಗೆ ಇತರ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ಇದಲ್ಲದೆ, ನೀವು ಭೇಟಿ ನೀಡಲು ಮಡಗಾಸ್ಕರ್ ಗೆ ಸಹ ಹೋಗಬಹುದು. 

click me!