ನೈಜೀರಿಯಾದಲ್ಲಿ ವೈನ್ ಮದುವೆ (wine marriage in Nigeria)
ನೈಜೀರಿಯಾದಲ್ಲಿ ಮದುವೆಯ ಸಮಯದಲ್ಲಿ, ಹೊಸ ವಧುವಿಗೆ ಅವಳ ತಂದೆ ಒಂದು ಕಪ್ ನಲ್ಲಿ ವೈನ್ ನೀಡುತ್ತಾರೆ. ಇದರ ನಂತರ, ಹುಡುಗಿ ಆ ಲೋಟವನ್ನು ಮದುವೆಗೆ ಬಂದ ಜನರ ನಡುವೆ ತನ್ನ ಗಂಡನಿಗೆ ನೀಡುತ್ತಾಳೆ. ಹುಡುಗಿ ತನ್ನ ಲೋಟವನ್ನು ಅವನಿಗೆ ನೀಡಿದಾಗ, ಅದನ್ನು ಮದುವೆ ಎಂದು ಪರಿಗಣಿಸಲಾಗುತ್ತದೆ.
ರಷ್ಯಾ ಮತ್ತು ಪೋಲೆಂಡ್ ನಲ್ಲಿ ವೋಡ್ಕಾ (Vodka in Russia and Poland)
ರಷ್ಯಾ ಮತ್ತು ಪೋಲೆಂಡ್‌ನಲ್ಲಿ ಇನ್ನೊಂದು ಸಂಪ್ರದಾಯವಿದೆ. ಇಲ್ಲಿ, ವೋಡ್ಕಾಗೆ ಜ್ಯೂಸ್ ಅಥವಾ ಮಿಕ್ಸರ್ ಸೇರಿಸುವುದು ಕೆಟ್ಟದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನೀಟ್ ಕುಡಿಯುವುದು ಸರಿ ಎಂದು ಪರಿಗಣಿಸಲಾಗಿದೆ.
ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಐ ಕಾಂಟಾಕ್ಟ್ (Eye contact in France and Germany)
ಫ್ರಾನ್ಸ್ ಮತ್ತು ಜರ್ಮನಿಯಲ್ಲಿ, ನೀವು ಚಿಯರ್ಸ್ ಹೇಳುವಾಗ ಐ ಕಾಂಟಾಕ್ಟ್ ಮಾಡದಿದ್ದರೆ ಅಥವಾ ಐ ಕಾಂಟಾಕ್ಟ್ ಮುರಿದರೆ ಅದರಿಂದ ಲೈಂಗಿಕ ಜೀವನದ ಮೇಲೆ 7 ವರ್ಷಗಳವರೆಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತೆ. ಇದನ್ನು Seven Years Of Bad Sex ಎಂದೂ ಕರೆಯಲಾಗುತ್ತದೆ.
ಜರ್ಮನಿಯಲ್ಲಿ ವಧು ಅಪಹರಣ (Kidnaping bride in Germany)
ಜರ್ಮನಿಯಲ್ಲಿ, ವರನ ಸ್ನೇಹಿತ ವಧುವನ್ನು ಅಪಹರಿಸಿ ಬಾರ್ ಗೆ ಕರೆದೊಯ್ಯುತ್ತಾನೆ, ವರನ ಆಗಮನಕ್ಕಾಗಿ ಕಾಯುತ್ತಾನೆ. ನಂತರ ವರನು ಬಂದು ವಧುವನ್ನು ಕರೆದೊಯ್ಯಬೇಕು ಅಂದ್ರೆ ಎಲ್ಲರಿಗೂ ಡ್ರಿಂಕ್ಸ್ ತೆಗೆಸಿ ಕೊಡಬೇಕು ಆ ನಂತರವಷ್ಟೇ ವಧುವನ್ನು ಕರೆದೊಯ್ಯುತ್ತಾನೆ.
ವಧುವಿನ ಬೂಟುಗಳಲ್ಲಿ ಡ್ರಿಂಕ್ಸ್ ಮಾಡೋದು (Drinking alcohol in brides shoes)
ಭಾರತದಲ್ಲಿ, ಶೂಗಳನ್ನು ಕದಿಯುವ ಸಂಪ್ರದಾಯದಲ್ಲಿ, ವರನ ಶೂ ಕದಿಯಲಾಗುತ್ತದೆ, ಆದರೆ ಉಕ್ರೇನ್‌ನಲ್ಲಿ ವಧುವಿನ ಶೂ ಕಳ್ಳತನವಾಗುತ್ತದೆ. ಅದರ ನಂತರ ಮದುವೆಗೆ ಬರುವ ಜನರು ಬೂಟುಗಳಲ್ಲಿ ಆಲ್ಕೋಹಾಲ್ ಕುಡಿಯಬೇಕು. ಆಸ್ಟ್ರೇಲಿಯಾದಲ್ಲಿ, ಸಂತೋಷದ ಸಂದರ್ಭಗಳಲ್ಲಿ ಬೂಟುಗಳಲ್ಲಿ ಆಲ್ಕೋಹಾಲ್ ಕುಡಿಯಲಾಗುತ್ತೆ.
ಚಿಯರ್ಸ್ ಹೇಳೋದು ನಿಷಿದ್ಧ (Saying cheers is banned)
ಜನರು ಡ್ರಿಂಕ್ಸ್ ಮಾಡುವ ಮೊದಲು ಚಿಯರ್ಸ್ ಹೇಳಲು ಬಯಸುತ್ತಾರೆ, ಆದರೆ ಹಂಗೇರಿಯಲ್ಲಿ ಗ್ಲಾಸ್ ಹಿಡಿದು ಚಿಯರ್ಸ್ ಹೇಳೋದನ್ನು ನಿಷೇಧಿಸಲಾಗಿದೆ. 1849 ರಲ್ಲಿ, ಕೆಲವು ಹಂಗೇರಿಯನ್ ಕ್ರಾಂತಿಕಾರಿಗಳನ್ನು ಹತ್ಯೆ ಮಾಡಲಾಯಿತು, ನಂತರ ಆಸ್ಟ್ರಿಯಾದ ಸೈನ್ಯವು ಡ್ರಿಂಕ್ಸ್ ಮಾಡುತ್ತಾ ಚಿಯರ್ಸ್ ಎಂದು ಹೇಳಿ ಸಂಭ್ರಮಿಸಿತು, ಅಂದಿನಿಂದ ಹಂಗೇರಿಯಲ್ಲಿ ಹಾಗೆ ಮಾಡುವುದನ್ನು ನಿಷೇಧಿಸಲಾಗಿದೆ.
ಸ್ಪರ್ಶಿಸದೆ ಶಾಟ್ ಕುಡಿಯೋದು (having shot without touching the glass)
ನೆದರ್ಲ್ಯಾಂಡ್‌ನಲ್ಲಿ ಕೋಪ್-ಸ್ಟೋ-ಚೆ ಎಂಬ ಪದ್ಧತಿಯಿದೆ, ಇದರಲ್ಲಿ ಬಾರ್ ಎಟೆಂಡರ್‌ಗಳು ಜಿನೀವರ್ ನ್ನು ಒಂದು ಲೋಟದಲ್ಲಿ ಮತ್ತು ಬಿಯರ್ ಅನ್ನು ಮತ್ತೊಂದು ಲೋಟದಲ್ಲಿ ಸುರಿಯುತ್ತಾರೆ. ಡ್ರಿಂಕ್ಸ್ ಮಾಡುವವರು ಮೊದಲು ಕೈಗಳಿಂದ ಸ್ಪರ್ಶಿಸದೆ ಜಿನೀವರ್ ನ್ನು ಕುಡಿಯಬೇಕು ಮತ್ತು ನಂತರ ಬಿಯರ್ ಕುಡಿಯಬೇಕು.