ಕಡಿಮೆ ಬಜೆಟ್ ನಲ್ಲಿ ಫಾರಿನ್ ಟ್ರಿಪ್ ಮಾಡಲು ಬಯಸಿದ್ರೆ… ಇದು ನಿಮಗಾಗಿ!

First Published Nov 17, 2022, 5:18 PM IST

ನೀವು ಕಡಿಮೆ ಬಜೆಟ್ ನಲ್ಲಿ ವಿದೇಶಕ್ಕೆ ಪ್ರಯಾಣಿಸಲು ಬಯಸಿದರೆ, ಪ್ರಪಂಚದಾದ್ಯಂತ ಅನೇಕ ಸುಂದರ ದೇಶಗಳಿವೆ, ಅಲ್ಲಿ ಪ್ರಪಂಚದಾದ್ಯಂತದ ಪ್ರವಾಸಿಗರು ಪ್ರತಿ ವರ್ಷ ಹೋಗಿ ಪ್ರವಾಸವನ್ನು ಎಂಜಾಯ್ ಮಾಡುತ್ತಾರೆ. ನೀವು ಕಡಿಮೆ ವೆಚ್ಚದಲ್ಲಿ ಯಾವ ದೇಶಕ್ಕೆ ಪ್ರಯಾಣಿಸಬಹುದು ಮತ್ತು ವಿದೇಶ ಪ್ರವಾಸವನ್ನು ಆನಂದಿಸಬಹುದು ಅನ್ನೋದನ್ನು ನೋಡೋಣ.

ಪ್ರತಿಯೊಬ್ಬರೂ ವಿದೇಶಕ್ಕೆ ಪ್ರಯಾಣಿಸುವ (foreign trip) ಕನಸು ಕಾಣುತ್ತಾರೆ, ಆದರೆ ಅನೇಕ ಜನರಿಗೆ ವಿದೇಶ ಪ್ರಯಾಣಿಸಲು, ಬಜೆಟ್ ಒಂದು ದೊಡ್ಡ ಸಮಸ್ಯೆ. ಬಜೆಟ್‌ ಕೊರತೆಯಿಂದಾಗಿ, ಹೆಚ್ಚಿನ ಜನರು ವಿದೇಶಿ ಪ್ರವಾಸಗಳ ಕನಸು ಕಾಣೋದನ್ನೇ ನಿಲ್ಲಿಸುತ್ತಾರೆ. ಆದಾಗ್ಯೂ, ನೀವು ಪಾಸ್ಪೋರ್ಟ್ ಹೊಂದಿದ್ದರೆ ಮತ್ತು ನೀವು ಪ್ರಪಂಚದಾದ್ಯಂತ ಪ್ರಯಾಣಿಸಲು ಬಯಸಿದರೆ, ಅನೇಕ ದೇಶಗಳು ಪ್ರಾಕೃತಿಕ ಸೌಂದರ್ಯ ಹಾಗೂ ವಿಶೇಷ ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ವಿಶ್ವದಾದ್ಯಂತದ ಪ್ರವಾಸಿಗರ ನೆಚ್ಚಿನ ತಾಣವಾಗಿವೆ. ಈ ಸ್ಥಳಗಳನ್ನು ತಲುಪಲು ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ವೀಸಾಕ್ಕಾಗಿ ಹೆಚ್ಚಿನ ತೊಂದರೆಯೂ ಆಗೋಲ್ಲ. ಹಾಗಿದ್ರೆ ಬನ್ನಿ ಭಾರತದಿಂದ ಯಾವ ದೇಶವು ಬಜೆಟ್ ಫ್ರೆಂಡಿಯಾಗಬಹುದು ಮತ್ತು ನೀವು ಎಲ್ಲಿ ರಜೆಯನ್ನು ಆನಂದಿಸಬಹುದು ಅನ್ನೋದನ್ನು ನೋಡೋಣ. 

ಕಡಿಮೆ ಬಜೆಟ್ ನಲ್ಲಿ ಈ ದೇಶಗಳಿಗೆ ಪ್ರಯಾಣಿಸಿ

ಭೂತಾನ್
ನೀವು ಸಾಹಸ ಮತ್ತು ಪ್ರಕೃತಿ ಪ್ರೇಮಿಯಾಗಿದ್ದರೆ, ಪೂರ್ವ ಹಿಮಾಲಯ ಪ್ರದೇಶದ ಸಣ್ಣ ದೇಶವಾದ ಭೂತಾನ್‌ಗೆ ಟ್ರಿಪ್ ಪ್ಲ್ಯಾನ್ ಮಾಡಿ. ಪ್ರಕೃತಿ ಮಡಿಲಲ್ಲಿ ನೆಲೆಸಿರುವ ಈ ನೆರೆ ದೇಶವು ತನ್ನ ಶುದ್ಧ ಪರಿಸರ ಮತ್ತು ಸಂತೋಷದಿಂದಿರುವ ಜನರಿಂದಾಗಿ ಪ್ರಪಂಚದಾದ್ಯಂತ ಹೆಸರುವಾಸಿ. 

ಭೂತಾನ್ ನಲ್ಲಿ ವಾಸಿಸಲು, ತಿನ್ನಲು, ಪ್ರಯಾಣಿಸಲು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರ್ಚು ಮಾಡಬಹುದು. ನೀವು ಇಲ್ಲಿಗೆ ಹೋದರೆ, ಖಂಡಿತವಾಗಿಯೂ ಕರಣ್ ಕೀಚು ಲಖಾಂಗ್, ಪಾರೋ, ಟೈಗರ್ ನೆಸ್ಟ್ ಮತ್ತು ಬೌದ್ಧ ಮಠಕ್ಕೆ ಭೇಟಿ ನೀಡಿ. ಇಲ್ಲಿ ಪ್ರಯಾಣವನ್ನು ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳಲ್ಲಿ ಅತ್ಯುತ್ತಮ.

ನೇಪಾಳ

ನೇಪಾಳವು ಬಹಳ ಬಜೆಟ್ ಸ್ನೇಹಿ (budget friendly) ದೇಶವಾಗಿದ್ದು, ಅಲ್ಲಿ ಭಾರತೀಯರು ಹೋಗಲು ವೀಸಾದ ಅಗತ್ಯವಿಲ್ಲ. ಹಿಮದ ಹೊದಿಕೆಯಿಂದ ಆವೃತವಾಗಿರುವ ಈ ಹಿಮಾಲಯ ದೇಶ ಸುಂದರವಾದ ದೇವಾಲಯಗಳು, ಎವರೆಸ್ಟ್ ಚಾಟ್ಸ್, ಗಿರಿಧಾಮಗಳು, ಬಾರ್ಡಿಯಾ ರಾಷ್ಟ್ರೀಯ ಉದ್ಯಾನ, ಪಟಾನ್ ಬೋಘ್ ನಾಥ್ ಸ್ತೂಪ, ಉದ್ಯಾನ ಮತ್ತು ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯಗಳಿಗೆ ವಿಶ್ವದಾದ್ಯಂತ ಹೆಸರುವಾಸಿ. ಇಲ್ಲಿಯೂ ನೀವು ಅಕ್ಟೋಬರ್‌ನಿಂದ ಡಿಸೆಂಬರ್ ವರೆಗಿನ ಪ್ರಯಾಣವನ್ನು ಆನಂದಿಸಬಹುದು.

ಶ್ರೀಲಂಕಾ

ದಕ್ಷಿಣ ಏಷ್ಯಾದ ಈ ದೇಶ ಶ್ರೀಮಂತ ಸಂಸ್ಕೃತಿ, ಸಮುದ್ರ ತೀರ ಮತ್ತು ಸಮುದ್ರಾಹಾರಕ್ಕೆ (Sea food) ಹೆಸರುವಾಸಿಯಾಗಿದೆ. ಈ ದೇಶವು ನಮಗೆ ಬಜೆಟ್ ಸ್ನೇಹಿಯೂ ಇದೆ. ಇಲ್ಲಿ ನೀವು ವಾಟರ್ ಸ್ಪೋರ್ಟ್ಸ್ ಆನಂದಿಸಬಹುದು. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಡಿಸೆಂಬರ್ ನಿಂದ ಮಾರ್ಚ್ ವರೆಗೆ. 

ಶ್ರೀಲಂಕಾದಲ್ಲಿ ನೋಡಲು ಹಲವಾರು ತಾಣಗಳಿವೆ. ಇಲ್ಲಿ ನೀವು ಪ್ರತಿದಿನ 1000 ರೂಪಾಯಿಗಳನ್ನು ಖರ್ಚು ಮಾಡೋ ಮೂಲಕ ಚೆನ್ನಾಗಿ ಎಂಜಾಯ್ ಮಾಡಬಹುದು. ಅಲ್ಲದೇ ಕೊಲಂಬೋ, ಕ್ಯಾಂಡಿ, ಯಪುವಾ ರಾಕ್ ಫೋರ್ಟ್, ಜಾಫ್ನಾ ಕೋಟೆ, ಶ್ರೀ ಮಹಾಬೋಧಿ, ಸಿಗಿರಿಯಾ ರಾಕ್ ಫೋರ್ಟ್ ಇತ್ಯಾದಿಗಳಿಗೆ ಭೇಟಿ ನೀಡಬಹುದು.

ಥೈಲ್ಯಾಂಡ್

ಥೈಲ್ಯಾಂಡ್ ಕೂಡ ಬಜೆಟ್ ಸ್ನೇಹಿ ದೇಶ. ಅಲ್ಲಿ ನೀವು ಸಮುದ್ರ ತೀರ, ಸುಂದರ ಮಾರುಕಟ್ಟೆಗಳು, ಐತಿಹಾಸಿಕ ತಾಣ (historical places) ಇತ್ಯಾದಿಗಳನ್ನು ಆನಂದಿಸಬಹುದು. ವಿಶ್ವದ ಅತಿ ದೊಡ್ಡ ದೇವಾಲಯವಾದ ಆಂಗ್ಕೋರ್ ವಾಟ್ ಥೈಲ್ಯಾಂಡ್‌ನಲ್ಲಿದೆ. ಇದನ್ನು ನೋಡಲು ಹಿಂದೂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಾರೆ. ಇಲ್ಲಿ ನೀವು ದ್ವಿಚಕ್ರ ವಾಹನ ಬಾಡಿಗೆಗೆ ಪಡೆಯುವ ಮೂಲಕ ಈ ಸುಂದರ ತಾಣಗಳನ್ನು ನೋಡಬಹುದು.

ಓಮನ್

ನೀವು ಪರ್ಷಿಯನ್ ಕೊಲ್ಲಿಗೆ ಭೇಟಿ ನೀಡಲು ಬಯಸಿದರೆ, ನಿಮ್ಮ ಬಜೆಟ್‌ನಲ್ಲಿ ನೀವು ಒಮನ್‌ಗೆ ಭೇಟಿ ನೀಡಬಹುದು. ಇದು ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಯೆಮೆನ್ ಮತ್ತು ಸೌದಿ ಅರೇಬಿಯಾದ ನಡುವೆ ನೆಲೆಗೊಂಡಿದೆ. ಇಲ್ಲಿ ನೀವು ಸುಂದರವಾದ ಸನ್ ಸೆಟ್, ಕಡಲತೀರಗಳು, ವನ್ಯಜೀವಿಗಳು ಹೀಗೆ ಸುಂದರವಾದ ತಾಣಗಳನ್ನು ನೀವಿಲ್ಲಿ ನೋಡಬಹುದು. ಇಲ್ಲಿ ದೈನಂದಿನ ಜೀವನ ವೆಚ್ಚಗಳು 20 ರೂ.ಗಳಿಂದ ಪ್ರಾರಂಭವಾಗುತ್ತವೆ. ಇಲ್ಲಿ ನೀವು ಅಕ್ಟೋಬರ್ ಮತ್ತು ಏಪ್ರಿಲ್ ನಡುವೆ ಪ್ರಯಾಣಿಸಬೇಕು.

click me!