ಹೆಣ್ಣುಮಕ್ಕಳ 'ಯೌವನ' ತಡೆಯಲು ಬಿಸಿ ಕಲ್ಲುಗಳಿಂದ ಸ್ತನಗಳನ್ನ ಸುಡ್ತಾರಂತೆ ಇಲ್ಲಿನ ತಾಯಂದಿರು

First Published Nov 16, 2022, 3:45 PM IST

ತನ್ನ ಮಗಳನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸುವುದು ತಾಯಿಗೆ ದೊಡ್ಡ ಸವಾಲಾಗಿದೆ. ಇದು ಕೇವಲ ಭಾರತೀಯ ಮಹಿಳೆಯರ ಭಯ ಹಲ್ಲ. ಪ್ರಪಂಚದ ಹೆಚ್ಚಿನ ಎಲ್ಲಾ ದೇಶಗಳಲ್ಲೂ ತಾಯಿಗೆ ತನ್ನ ಮಗಳನ್ನು ಕೆಟ್ಟ ದೃಷ್ಟಿಯಿಂದ ಕಾಪಾಡುವ ಭಯ ಇದ್ದೇ ಇರುತ್ತೆ. ಅದಕ್ಕಾಗಿ ಹೆಣ್ಣು ಮಕ್ಕಳಿಗೆ ನೋವನ್ನು ನೀಡಿ ರಕ್ಷಣೆ ನೀಡುವಂತಹ ಒಂದು ಸಂಪ್ರಾದಾಯದ ಬಗ್ಗೆ ತಿಳಿಸುತ್ತೇವೆ.

ತನ್ನ ಮಗಳ ಮೇಲೆ ಯಾವುದೇ ಪುರುಷನ ಕೆಟ್ಟ ದೃಷ್ಟಿ ಬೀಳದಿರಲೆಂದು ತಾಯಂದಿರು ಏನೇನೋ ಮಾಡುತ್ತಾರೆ. ಮಕ್ಕಳ ಡ್ರೆಸ್ಸಿಂಗ್ ಬಗ್ಗೆ ಸಲಹೆ ನೀಡುವುದು, ಹೊರಗಡೆ ಹೇಗೆ ವರ್ತಿಸಬೇಕು ಅನ್ನೋದನ್ನೆಲ್ಲಾ ಹೇಳುತ್ತೇವೆ. ಆದರೆ ಪುರುಷನ ಕೆಟ್ಟ ಕಣ್ಣುಗಳನ್ನು ತಪ್ಪಿಸಲು ಹುಡುಗಿಯರು ಚಿತ್ರಹಿಂಸೆಗೆ ಒಳಗಾಗಬೇಕಾದ ಸ್ಥಳವಿದೆ. ಈ ಚಿತ್ರಹಿಂಸೆಯನ್ನು ತಾಯಿಯೇ ಮಗಳಿಗೆ ನೀಡುತ್ತಾಳೆ, ತನ್ನ ಮಗಳು ಬೇಗನೆ ಯುವ ಅವಸ್ಥೆಗೆ ಬರ ಬಾರದು ಎನ್ನುವ ನಿಟ್ಟಿನಲ್ಲಿ ತಾಯಿ ಈ ಕ್ರೂರತೆಯನ್ನು ಮಗಳಿಗೆ ಮಾಡುತ್ತಾರೆ. ಈ ಸಂಪ್ರದಾಯದ (brutal tradition) ಬಗ್ಗೆ ಕೇಳಿದ್ರೆ ನೀವು ಒಂದು ಕ್ಷಣಕ್ಕೆ ಬೆಚ್ಚಿ ಬೀಳುತ್ತೀರಿ. ಏನಿದು ಸಂಪ್ರದಾಯ ನೋಡೋಣ. 

ತಾಯಿಯನ್ನು ಮಮತಾ ಮೂರ್ತಿ ಎಂದು ಕರೆಯಲಾಗುತ್ತೆ, ಮಕ್ಕಳಿಗೆ ಸ್ವಲ್ಪ ಗಾಯವಾದರೆ, ಅವಳು ನೋವಿನಿಂದ ಅಳುತ್ತಾಳೆ. ಆದರೆ ಆ ತಾಯಂದಿರು ತಮ್ಮ ಹೆಣ್ಣುಮಕ್ಕಳ ಮೇಲೆ ಕ್ರೌರ್ಯವನ್ನು ಮಾಡಿದಾಗ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಿ. ಇದೊಂದು ಊರಲ್ಲಿ ತಾಯಿ ಮಕ್ಕಳ ಮೇಲೆ ಕ್ರೌರ್ಯ ಮೇರೆಯುತ್ತಾರೆ, ಇದೆಲ್ಲಾ ಮಾಡೋದು ತನ್ನ ಮಗಳು ಯಾವುದೇ ಕೆಟ್ಟ ದೃಷ್ಟಿಗೆ ಒಳಗಾಗದಿರಲಿ ಎಂದು. 
 

Latest Videos


ಇಷ್ಟೇ ಅಲ್ಲ, ತಾಯಿ ಮಗಳಿಗೆ ಹಿಂಸೆ ನೀಡಿದರೂ ಸಹ, ಹೆಣ್ಣುಮಕ್ಕಳು ನೋವನ್ನು ಅನುಭವಿಸಿದ ನಂತರವೂ ಅಳುವುದಿಲ್ಲ, ಏಕೆಂದರೆ ಅವರು ತಮ್ಮನ್ನು ತಾವು ದುರ್ಬಲರೆಂದು ಕರೆದುಕೊಳ್ಳಲು ಇಷ್ಟಪಡುವುದಿಲ್ಲ. ಆಫ್ರಿಕಾದ ಗಿನಿಯನ್ ಕೊಲ್ಲಿಯಲ್ಲಿ ನೆಲೆಗೊಂಡಿರುವ ಕ್ಯಾಮರೂನ್ ಈ ಮೃಗೀಯ ಸಂಪ್ರದಾಯವನ್ನು (weird tradition)  ಹೊಂದಿದೆ. ಅಲ್ಲಿ ಹುಡುಗಿಯರು ಬೇಗನೆ ಯುವ ಅವಸ್ಥೆಗೆ ಬರೋದನ್ನು ತಪ್ಪಿಸಲು ಇದನ್ನು ಮಾಡಲಾಗುತ್ತೆ..
 

ಬಾಲಕಿಯರು ಹದಿಹರೆಯಕ್ಕೆ ತಲುಪಿದಾಗ ಅವರ ಸ್ತನಗಳ ಕಲೆಯಾಗುತ್ತೆ
15 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಕ್ಯಾಮರೂನ್ 250 ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳನ್ನು (tribes in South Africa) ಹೊಂದಿದೆ. ಅವರ ವಿಚಿತ್ರ ಸಂಪ್ರದಾಯವು ಪ್ರತಿದಿನ ಚರ್ಚೆಯಲ್ಲಿರುತ್ತೆ. ಇದು ಒಂದು ಸಂಪ್ರದಾಯವನ್ನು ಹೊಂದಿದೆ. ಅದೇನೆಂದರೆ ಬ್ರೆಸ್ಟ್ ಐರನಿಂಗ್ ಸಂಪ್ರದಾಯ. ಇದರ ಬಗ್ಗೆ ಕೇಳಿದ್ರೆ ಎದೆ ಝಲ್ ಎನ್ನುತ್ತೆ.

 'ಬ್ರೆಸ್ಟ್ ಐರನಿಂಗ್' (Breast ironing). ಹೌದು, ಯುವತಿಯರ ಸ್ತನಗಳನ್ನು ಇಸ್ತ್ರಿ ಮಾಡುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ, ಇದರಿಂದ ಅವರು ಬೇಗನೆ ಯುವಾವಸ್ಥೆ ಹೊಂದೋದಿಲ್ಲ ಎನ್ನಲಾಗುತ್ತೆ. ಈ ಸಂಪ್ರದಾಯವನ್ನು ಹೆಚ್ಚಿನ ತಾಯಂದಿರು ಅನುಸರಿಸುತ್ತಾರೆ. ಇದಕ್ಕಾಗಿ, ಅವರು ತನ್ನ ಮಗಳನ್ನು ನೋವಿನಿಂದ ತುಂಬ ಚಿತ್ರಹಿಂಸೆ ನೀಡಬೇಕಾಗುತ್ತದೆ. ಇಲ್ಲಿ, ಹುಡುಗಿಯರು ಹದಿಹರೆಯವನ್ನು ತಲುಪಲು ಪ್ರಾರಂಭಿಸಿದಾಗ, ಅವರ ಸ್ತನಗಳನ್ನು ಕಲ್ಲುಗಳು, ಚಮಚಗಳನ್ನು ಬಿಸಿಮಾಡುವ ಮೂಲಕ ಐರನ್ ಮಾಡಲಾಗುತ್ತದೆ. ಇದರಿಂದ ಅದು ಬೆಳೆಯುವುದಿಲ್ಲ. 

ಬೆಂಕಿಯಲ್ಲಿ ಕಲ್ಲು (hot stones) ಅಥವಾ ಚಮಚವನ್ನು ಬಿಸಿಮಾಡಿ ಸ್ತನದ ಮೇಲೆ ಐರನಿಂಗ್ ಮಾಡಲಾಗುತ್ತೆ. ಇಲ್ಲಿ ತಾಯಂದಿರು ಕಲ್ಲುಗಳು ಅಥವಾ ಚಮಚಗಳನ್ನು ಬೆಂಕಿಯಲ್ಲಿ ಬಿಸಿ ಮಾಡಿ, ನಂತರ ಹುಡುಗಿಯರ ಎದೆ ಮೇಲೆ ಒತ್ತುತ್ತಾರೆ. ಇದು ಸ್ತನಗಳ ಗಾತ್ರವನ್ನು ಚಪ್ಪಟೆಯನ್ನಾಗಿ ಮಾಡುತ್ತದೆ. ಹುಡುಗಿಯರು ಈ ನೋವನ್ನು ಒಮ್ಮೆ ಮಾತ್ರ ಅನುಭವಿಸೋದಿಲ್ಲ, ಬದಲಾಗಿ ಈ ಪ್ರಕ್ರಿಯೆಯನ್ನು ಹಲವಾರು ತಿಂಗಳುಗಳವರೆಗೆ ಮಾಡಲಾಗುತ್ತದೆ. ಇಷ್ಟೇ ಅಲ್ಲ, ಈ ವಿಧಾನವನ್ನು ಅನುಸರಿಸಿದಾಗ ಹುಡುಗಿಯರು ಅಳೋದು ಕೂಡ ಇಲ್ಲ. ಯಾಕಂದ್ರೆ ಹುಡುಗಿ ಅತ್ತರೆ, ಕುಟುಂಬವು ಮುಜುಗರವನ್ನು ಎದುರಿಸುತ್ತದೆ ಮತ್ತು ಮಗಳು ಬಲಶಾಲಿಯಲ್ಲ ಎಂದು ಅದು ತೋರಿಸುತ್ತೆ. ಆದ್ದಿರಿಂದ ಹುಡುಗಿಯರಿಗೆ ಅಳಲು ಸಹ ಅವಕಾಶ ನೀಡೋದಿಲ್ಲ. 

ಹುಡುಗಿಯರಲ್ಲಿ ಯೌವನದ ಲಕ್ಷಣಗಳು ಪುರುಷರನ್ನು ಆಕರ್ಷಿಸುತ್ತವೆ
ವಾಸ್ತವವಾಗಿ, ಹುಡುಗಿಯರಲ್ಲಿ ವೇಗವಾಗಿ ಯೌವನದ ಚಿಹ್ನೆಗಳನ್ನು ತೋರಿಸಲು ಪ್ರಾರಂಭಿಸಿದರೆ, ಪುರುಷರು ಅವರತ್ತ ಆಕರ್ಷಿತರಾಗುತ್ತಾರೆ ಎಂದು ಇಲ್ಲಿನ ಮಹಿಳೆಯರು ನಂಬುತ್ತಾರೆ. ಇದರಿಂದ ಪುರುಷರು ಯೌವನಕ್ಕೆ ಬಂದ ಹುಡುಗಿಯರೊಂದಿಗೆ ಲೈಂಗಿಕ ಕ್ರಿಯೆ (physical relationship) ನಡೆಸಬಹುದು. ಇದರಿಂದ ಅವರು ಮದುವೆಗೆ ಮುಂಚಿತವಾಗಿ ಗರ್ಭಿಣಿಯಾಗಬಹುದು. ಅದಕ್ಕಾಗಿ 9 ನೇ ವಯಸ್ಸಿನಲ್ಲೇ ಹುಡುಗಿಯರಿಗೆ ಬ್ರೆಸ್ಟ್ ಐರನಿಂಗ್ ಮಾಡಲಾಗುತ್ತೆ.

ಬಿಬಿಸಿ ವರದಿಯ ಪ್ರಕಾರ, ಬ್ರಿಟನ್ನ ಅನೇಕ ಸ್ಥಳಗಳಲ್ಲಿ ಹುಡುಗಿಯರ ಬ್ರೆಸ್ಟ್ ಐರನಿಂಗ್ ಮಾಡಲಾಗುತ್ತದೆ. ಇದು ಹುಡುಗಿಯರಿಗೆ ಆ ಕ್ಷಣಕ್ಕೆ ಮಾತ್ರ ನೋವುಂಟು ಮಾಡುವುದಿಲ್ಲ, ಆದರೆ ಅದರ ನೋವು ಜೀವನದುದ್ದಕ್ಕೂ ಇರುತ್ತದೆ. ಅವರ ಸ್ತನದ ಗಾತ್ರವು (breast size) ಇತರ ಹುಡುಗಿಯರಿಗಿಂತ ಭಿನ್ನವಾಗಿರುತ್ತದೆ, ಇದರಿಂದಾಗಿ ಅವರು ಖಿನ್ನತೆಗೆ ಬಲಿಯಾಗುತ್ತಾರೆ. ಕ್ಯಾಮರೂನ್ ನ ಲಿಟೋರಲ್ ಪ್ರಾಂತ್ಯದಲ್ಲಿ ಈ ಅಭ್ಯಾಸವನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ. ಇಲ್ಲಿ 53 ಪ್ರತಿಶತದಷ್ಟು ಹುಡುಗಿಯರು ಈ ಸಂಪ್ರದಾಯಕ್ಕೆ ಬಲಿಯಾಗಿದ್ದಾರೆ..
 

ಯುಕೆಯಲ್ಲಿ, ಇದನ್ನು ಮಕ್ಕಳ ದೌರ್ಜನ್ಯ ಎನ್ನಲಾಗುತ್ತೆ 
ಬ್ರೆಸ್ಟ್ ಐರನಿಂಗ್ ಮಾಡುವ ಕಾನೂನಿನ ಭಾಷೆಯಲ್ಲಿ ಯಾವುದೇ ಅಪರಾಧಗಳಿಲ್ಲ. ಆದರೆ ಬಿಬಿಸಿ ವರದಿಯ ಪ್ರಕಾರ, ಬ್ರಿಟಿಷ್ ಗೃಹ ಸಚಿವಾಲಯವು ಅದನ್ನು ಮಕ್ಕಳ ಶೋಷಣೆಯ ಪಟ್ಟಿಯಲ್ಲಿ ಸೇರಿಸುತ್ತದೆ. ಈ ಪ್ರಕರಣವನ್ನು ಸಾಮಾನ್ಯ ಕಾನೂನಿನ ಅಡಿಯಲ್ಲಿ ನಡೆಸಲಾಗುತ್ತದೆ. ಆದರೆ, ಹೆಚ್ಚಿನ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರೋದೆ ಇಲ್ಲ. ಸಮಾಜದ ಭಯ ಮತ್ತು ಮುಜುಗರದಿಂದಾಗಿ ಈ ಸಂಪ್ರದಾಯ ಗುಪ್ತ ಅಪರಾಧವಾಗಿಯೇ ಉಳಿಯುತ್ತದೆ.

click me!