ಭಾರತೀಯ ವಿಶಿಷ್ಟ ಸಂಸ್ಕೃತಿ ಪರಿಚಯಿಸುವ ದೇಶದ ಅದ್ಭುತ ತಾಣಗಳಿವು

First Published Nov 1, 2022, 6:05 PM IST

ನೀವು ರಾಜಸ್ಥಾನದ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಪುಷ್ಕರ್ ಗೆ ಹೋಗಿ. ಪುಷ್ಕರ್ ನಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಈ ಮೇಳದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸ್ಥಳೀಯ ಕಲಾವಿದರು ಸಹ ಅವುಗಳಲ್ಲಿ ಭಾಗವಹಿಸುತ್ತಾರೆ. ಇಲ್ಲಿ ನೀವು ಸಂಪೂರ್ಣವಾಗಿ ರಾಜಸ್ಥಾನದ ಸಂಸ್ಕೃತಿಯನ್ನು ಎಂಜಾಯ್ ಮಾಡಬಹುದು. 

ಹಬ್ಬದ ಸೀಸನ್ (festive season) ನಲ್ಲಿ, ಜನರು ಪಿಕ್ನಿಕ್ ಮಾಡಲು ದೇಶದ ಸುಂದರ ಸ್ಥಳಗಳಿಗೆ ಹೋಗುತ್ತಾರೆ. ಆದಾಗ್ಯೂ, ಹಬ್ಬದ ಸೀಸನ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವುದು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅದರಲ್ಲೂ ರಾಜಸ್ಥಾನದಲ್ಲಿ ನಡೆಯುವ ಪುಷ್ಕರ್ ಮೇಳದ ಸೊಬಗು ಬೇರೆಯೇ ಆಗಿರುತ್ತೆ. 

ವಿದೇಶಿ ಪ್ರವಾಸಿಗರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಮುಂತಾದ ಸ್ಥಳಗಳಿಗೆ ಹೋಗುತ್ತಾರೆ. ನೀವು ಸಹ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಪಡೆಯಲು ಬಯಸಿದರೆ, ನೀವು ದೇಶದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬೇಕು. ಈ ಸ್ಥಳಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. 

Latest Videos


ಪುಷ್ಕರ್, ರಾಜಸ್ಥಾನ
ನೀವು ರಾಜಸ್ಥಾನದ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಪುಷ್ಕರ್ ಗೆ ಹೋಗಿ. ಪುಷ್ಕರ್ ನಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಈ ಮೇಳದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸ್ಥಳೀಯ ಕಲಾವಿದರು ಸಹ ಅವುಗಳಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಕಲಾವಿದರು ಸ್ಥಳೀಯ ಸಂಗೀತಕ್ಕೆ ನೃತ್ಯ ಮಾಡುತ್ತಾರೆ. ಪುಷ್ಕರ್ ಮೇಳದಲ್ಲಿ (Pushkar Fair) ನೀವು ಒಂಟೆ ಸವಾರಿ ಮಾಡಬಹುದು. ಮಡಕೆ ಒಡೆಯುವ ಮತ್ತು ಉದ್ದನೆಯ ಮೀಸೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಶ್ರೀ ಆನಂದಪುರ ಸಾಹಿಬ್, ಪಂಜಾಬ್
ಪ್ರತಿ ವರ್ಷ ಮಾರ್ಚ್ ನಲ್ಲಿ ಶ್ರೀ ಆನಂದಪುರ ಸಾಹಿಬ್ ನಲ್ಲಿ 3 ದಿನಗಳ ಹೋಲಾ ಮೊಹಲ್ಲಾ ಸಾಂಸ್ಕೃತಿಕ ಕಾರ್ಯಕ್ರಮವನ್ನು (cultural programme) ಆಯೋಜಿಸಲಾಗುತ್ತದೆ. ಸಿಖ್ ನಾಗರಿಕತೆ ಮತ್ತು ಸಂಸ್ಕೃತಿಯನ್ನು ನೋಡಲು ಮಾರ್ಚ್ ತಿಂಗಳು ಅತ್ಯುತ್ತಮ ತಿಂಗಳು. ಈ ಸಂದರ್ಭದಲ್ಲಿ, ಪಂಜಾಬಿ ಸಮುದಾಯದ ಜನರು ಗುರು ಸಾಹಿಬ್ ಅವರ ಮಾತುಗಳ ಪ್ರಕಾರ ಕಂಘಾ, ಪಗ್ಡಿ ಮುಂತಾದ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.
 

ಹೋಲಾ ಮೊಹಲ್ಲಾ ಕಾರ್ಯಕ್ರಮದಲ್ಲಿ ಕುದುರೆ ಸವಾರಿಯನ್ನು ಆಯೋಜಿಸಲಾಗುತ್ತದೆ. ಇದು ಲಂಗರ್ ವ್ಯವಸ್ಥೆಗಳನ್ನು ಸಹ ಹೊಂದಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ನೀವು ಲಂಗರ್ ಗೆ ಹೋಗಬಹುದು ಮತ್ತು ಪ್ರಸಾದವನ್ನು ತೆಗೆದುಕೊಳ್ಳಬಹುದು. ನೀವು ಸಿಖ್ ನಾಗರಿಕತೆ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಮಾರ್ಚ್ ತಿಂಗಳಲ್ಲಿ ಶ್ರೀ ಆನಂದಪುರ ಸಾಹಿಬ್ ಗೆ ಭೇಟಿ ನೀಡಿ.

ಗೋವಾ
ನೀವು ಭಾರತೀಯ ಮತ್ತು ಪೋರ್ಚುಗೀಸ್ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಗೋವಾವು ಅದಕ್ಕೆ ಅತ್ಯುತ್ತಮ ತಾಣವಾಗಿದೆ. ಸ್ವಾತಂತ್ರ್ಯದ ನಂತರ ಸುಮಾರು ಒಂದು ದಶಕದವರೆಗೆ ಗೋವಾವನ್ನು ಪೋರ್ಚುಗೀಸರು ಆಕ್ರಮಿಸಿಕೊಂಡರು. ಪ್ರಸ್ತುತ ಇದು ಭಾರತದ ರಾಜ್ಯವಾಗಿದೆ. ಇದರ ರಾಜಧಾನಿ ಪಣಜಿ. 

ಇಂದಿಗೂ, ಪೋರ್ಚುಗೀಸ್ ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನು ನೀವು ಗೋವಾದಲ್ಲಿ ಕಾಣಬಹುದು. ಇದಲ್ಲದೆ, ನೀವು ಗೋವಾದಲ್ಲಿ ಆಫ್ ಸೀಸನ್ (off season) ಅನ್ನು ಸಹ ಆನಂದಿಸಬಹುದು. ಗೋವಾದಲ್ಲಿ ಇಂತಹ ಅನೇಕ ತಾಣಗಳಿವೆ. ಅಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪಿಕ್ನಿಕ್ ಮಾಡಬಹುದು. ಅಷ್ಟೇ ಅಲ್ಲ ಗೋವಾಕ್ಕೆ ನೀವು ಯಾವ ಸಮಯದಲ್ಲಿ ಬೇಕಾದರೂ ಹೋಗಿ ಬರಬಹುದು. 

click me!