ಕೋವಲಂನಿಂದ ಉಡುಪಿ ವರೆಗೆ: ಭಾರತದ ಟಾಪ್ 6 ಸರ್ಫಿಂಗ್ ತಾಣಗಳಿವು

First Published | Oct 30, 2022, 10:20 AM IST

ವಾಟರ್ ಸ್ಪೋರ್ಟ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಭಾರತದಲ್ಲಿ ಸಾಕಷ್ಟು ವಾಟರ್ ಸ್ಪೋರ್ಟ್ಸ್ ಗಳಿವೆ. ಅವುಗಳಲ್ಲಿ ಮುಖ್ಯವಾಗಿ ಸರ್ಫಿಂಗ್ ಸಹ ಜನಪ್ರಿಯತೆ ಪಡೆದಿದೆ. ದೇಶದ ವಿಶಾಲ ಕರಾವಳಿಯುದ್ದಕ್ಕೂ ಕೆಲವು ಪ್ರಮುಖ ಸ್ಥಳಗಳಿವೆ, ಅಲ್ಲಿ ನೀವು ಅಲೆಗಳೊಂದಿಗೆ ಮೋಜು ಮಾಡಬಹುದು ಮತ್ತು ಸರ್ಫ್ ಮಾಡಲು ಕಲಿಯಬಹುದು. ಒಂದೇ ಸಮಸ್ಯೆಯೆಂದ್ರೆ ಅಲೆಗಳು ಸ್ಥಿರವಾಗಿರಲ್ಲ, ಮತ್ತು ಸರ್ಫ್ ಕೆಲವೊಮ್ಮೆ ಫ್ಲಾಟ್ ಅನಿಸಬಹುದು. ನೀವು ಸರ್ಫಿಂಗ್ ಮಾಡಲು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳ ಆಯ್ಕೆ ಮಾಡೋದು ಮುಖ್ಯ. ನೀವು ಅಂತಹ ಸ್ಥಳಗಳಿಗಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ, ಅಂತಹ ತಾಣಗಳ ಬಗ್ಗೆ ಒಂದಿಷ್ಟು ಮಾಹಿತಿ…. 

ನೀವು ಸರ್ಫಿಂಗ್ (surfing) ಮಾಡಲು ಇಷ್ಟಪಡುವವರಾದ್ರೆ ಅಥವಾ ಕಡಲತೀರದಲ್ಲಿ ಅಥವಾ ಯಾವುದಾದರೂ ಮೂವಿಯಲ್ಲಿ ಎತ್ತರದ ಅಲೆಗಳಲ್ಲಿ ಯಾರೋ ಒಬ್ಬರು ಸವಾರಿ ಮಾಡೋದನ್ನು ನೋಡಿದ ನಂತರ ತುಂಬಾ ಉತ್ಸುಕರಾಗಿದ್ದರೆ, ಇಲ್ಲಿದೆ ನಿಮಗೆ ಗುಡ್ ನ್ಯೂಸ್.  ಈ ಅದ್ಭುತ ದೇಶ ಇದೀಗ ವಾಟರ್ ಸ್ಪೋರ್ಟ್ಸ್ (water sports) ಸೇರಿದಂತೆ ಅನೇಕ ಸಾಹಸ ಚಟುವಟಿಕೆಗಳ ಖಜಾನೆಯಾಗಿದೆ. ಸರ್ಫಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ.  ಭಾರತದ ಅನೇಕ ಸ್ಥಳಗಳು ಸರ್ಫಿಂಗ್ ನ ಹಾಟ್ ಸ್ಪಾಟ್ ಗಳಾಗಿ ಮಾರ್ಪಟ್ಟಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.  

ಕೋವಲಂ ಬೀಚ್, ಕೇರಳ:
ಕೋವಲಂ ಬೀಚ್ (Kovalam Beach Kerala) ದಕ್ಷಿಣ ಭಾರತದ ರಾಜ್ಯವಾದ ಕೇರಳದ ಪ್ರಸಿದ್ಧ ಪ್ರವಾಸಿ ತಾಣ. ಅನೇಕ ಬೀಚ್ ಪ್ರಿಯರು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಬೀಚ್ ಗೆ ಭೇಟಿ ನೀಡ್ತಾರೆ. ಇಲ್ಲಿ ಸರ್ಫಿಂಗ್ ಮಾಡಲು ಅತ್ಯುತ್ತಮ ಟೈಮ್ ಮೇ ತಿಂಗಳಲ್ಲಿ ಪ್ರಾರಂಭವಾಗುತ್ತೆ ಮತ್ತು ಅಕ್ಟೋಬರ್ ವರೆಗೆ ಮುಂದುವರಿಯುತ್ತೆ. ಪ್ರತಿ ವರ್ಷ ಅಕ್ಟೋಬರ್ ನಲ್ಲಿ, ಭಾರತದ ಸರ್ಫಿಂಗ್ ಫೆಡರೇಷನ್ ಈ ಕಡಲತೀರದಲ್ಲಿ ಸರ್ಫಿಂಗ್ ಸ್ಪರ್ಧೆ ಆಯೋಜಿಸುತ್ತೆ. ಸರ್ಫಿಂಗ್ ಮಾಡೋ ಮನಸ್ಸು ನಿಮಗೂ ಇದ್ರೆ, ನೀವು ಭಾಗವಹಿಸಬಹುದು.

Tap to resize

ಮಹಾಬಲಿಪುರಂ, ತಮಿಳುನಾಡು: 
ತಮಿಳುನಾಡಿನ ಈ ದೇವಾಲಯ ಪಟ್ಟಣಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ, ಯಾಕಂದ್ರೆ ಇದು ಈಗಾಗಲೇ ಹೆಚ್ಚಿನ ಸಂಖ್ಯೆಯ ದೇವಾಲಯ ಮತ್ತು ಧಾರ್ಮಿಕ ಸ್ಥಳಗಳಿಂದ ಗಮನ ಸೆಳೆಯುತ್ತಿದೆ. ಆದರೆ, ಮಹಾಬಲಿಪುರಂನ (Mahabalipuram Tamilnadu) ಸರ್ಫಿಂಗ್ ತಾಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಇಲ್ಲಿ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಅಲೆಗಳು ಫ್ಲಾಟ್ ಆಗಿರುತ್ತೆ. ಹಾಗಾಗಿ ಆ ಟೈಂನಲ್ಲಿ ಇಲ್ಲಿರೋದ್ರಿಂದ ಸರ್ಪಿಂಗ್ ನ ಮಜಾ ಅನುಭವಿಸಬಹುದು. 

ಪಾಂಡಿಚೇರಿ, ತಮಿಳುನಾಡು (Pondichery, Tamilnadu) 
ಭಾರತದ ಈ ಫ್ರೆಂಚ್ ರಾಜಧಾನಿಯು ಮಸ್ಟರ್ಡ್ ಎಲ್ಲೋ ಕೊಲೊನಿಯಲ್ ಕಟ್ಟಡ ಮತ್ತು ಸುಂದರವಾದ ಮರ, ಹೂವುಗಳಿಂದ ಕೂಡಿದೆ. ಇಲ್ಲಿನ ಪ್ರವಾಸವನ್ನು ಎಂಜಾಯ್ ಮಾಡಲು ಬಯಸುವಿರಾದ್ರೆ, ಸರ್ಫಿಂಗ್ ಕೂಡ ಮಾಡಬಹುದು. ಅದಕ್ಕಾಗಿ, ಶಾಂತವಾಗಿರೋ ಬೀಚ್ ಗೆ ಹೋಗಿ. ಜೂನ್ ನಿಂದ ಜನವರಿಯವರೆಗೆ ಇಲ್ಲಿ ಹೆಚ್ಚಿನ ಅಲೆಗಳು ಇರುತ್ತವೆ. ಇದು ಭಾರತದ ಅತ್ಯಂತ ಸುಂದರವಾದ ಸರ್ಫಿಂಗ್ ತಾಣವಾಗಿದೆ. 

ವರ್ಕಲಾ, ಕೇರಳ
ವರ್ಕಲಾ (Varkala beach Kerala) ಸರ್ಫಿಂಗ್ ಅನುಭವವು ಸರ್ಫರ್ ಗೆ ಅತ್ಯುತ್ತಮ ಅನುಭವ ನೀಡುತ್ತೆ. ಬಿಗಿನರ್ ಸಹ ಇಲ್ಲಿ ಮೋಜಿನ ಸಮಯ ಎಂಜಾಯ್ ಮಾಡಬಹುದು. ಪ್ರಸಿದ್ಧ ಬೀಚ್ ಬ್ರೇಕ್  ಹೊರತುಪಡಿಸಿ, ಅನೇಕ ವಿಭಿನ್ನ ಸರ್ಫ್ ಬ್ರೇಕ್‌ಗಳು ಹತ್ತಿರದಲ್ಲಿವೆ. ವರ್ಕಲಾಗೆ ಸರ್ಫಿಂಗ್ ಪ್ರವಾಸಕ್ಕೆ ಉತ್ತಮ ಸಮಯವೆಂದರೆ ಅಕ್ಟೋಬರ್ ಆರಂಭದಿಂದ ಮೇ ಮಧ್ಯದವರೆಗೆ. ಈ ತಿಂಗಳುಗಳ ನಡುವೆ ನೀವು ಯಾವಾಗ ಬೇಕಾದರೂ ಬನ್ನಿ. ತಿರುವನಂತಪುರಕ್ಕೆ ವಿಮಾನ ಹತ್ತಿ ನಂತರ ವರ್ಕಲಾ ಬೀಚ್ ಗೆ ಕ್ಯಾಬ್ ತೆಗೆದುಕೊಳ್ಳಿ.

ಗೋಕರ್ಣ, ಕರ್ನಾಟಕ (Gokarna, Karnataka): 
ಭಾರತದ ಅತ್ಯುತ್ತಮ ಸರ್ಫಿಂಗ್ ತಾಣ ಹುಡುಕುವಾಗ, ನೀವು ಗೋಕರ್ಣಕ್ಕೆ ಹೋಗದೇ ಇದ್ದರೆ ಹೇಗೆ ?. ಈ ಪಟ್ಟಣವು ನೀಲಿ ಸಮುದ್ರ, ಚಿನ್ನದ ಮರಳು ಮತ್ತು ತಾಳೆ ಮರಗಳಿಂದ ಕೂಡಿದೆ. ಬೀಚ್ ಪ್ರಿಯರಿಗೆ ಇದು ಸ್ವರ್ಗ ತಾಣ. ಮತ್ತು ಸರ್ಫಿಂಗ್ ಬಗ್ಗೆ ಉತ್ಸಾಹ ಹೊಂದಿರುವವರಿಗೆ ಸಹ ಈ ತಾಣ ಬೆಸ್ಟ್. ಸರ್ಫಿಂಗ್ ಗೆ ಗೋಕರ್ಣದ ಅತ್ಯುತ್ತಮ ಸ್ಥಳವೆಂದರೆ ಮಹಾಬಲೇಶ್ವರ ದೇವಾಲಯದ ಬಳಿಯಿರುವ ಮುಖ್ಯ ಕಡಲತೀರ. ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮೇ ವರೆಗೆ. 

ಉಡುಪಿ, ಕರ್ನಾಟಕ (Udupi , Karnataka):
ಉಡುಪಿ ಮತ್ತು ಮಂಗಳೂರು ನಡುವಿನ ಕಾಪು ಬೀಚ್ ಲೈಟ್ ಹೌಸ್ ಮತ್ತು ಮಾರಿಯಮ್ಮ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅರಬ್ಬಿ ಸಮುದ್ರದ ದಡದಲ್ಲಿರುವ ಕಡಲತೀರವು ವಿದ್ಯಾರ್ಥಿಗಳು ಮತ್ತು ಸರ್ಫರ್ ಗಳಿಗೆ ನೆಚ್ಚಿನ ಹ್ಯಾಂಗ್ ಔಟ್ ಸ್ಥಳವಾಗಿದೆ. ಮುರ್ಡೇಶ್ವರ ಪಟ್ಟಣವು ಅರಬ್ಬಿ ಸಮುದ್ರದ ನೀರಿನಿಂದ ಮೂರು ದಿಕ್ಕುಗಳಿಂದ ಸುತ್ತುವರೆದಿದೆ ಮತ್ತು ಕರ್ನಾಟಕದ ಅತ್ಯುತ್ತಮ ಸರ್ಫಿಂಗ್ ಅನುಭವಗಳಲ್ಲಿ ಒಂದಾಗಿದೆ.ಹಾಗಿದ್ರೆ ಯಾಕೆ ತಡ ಮಾಡೋದು, ಸರ್ಫಿಂಗ್ ಪ್ರಿಯರು ಈ ಬೆಸ್ಟ್ ಸರ್ಫಿಂಗ್ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿ.   

Latest Videos

click me!