ಅಸ್ಥಿಪಂಜರಗಳ ಸರೋವರ, ಸಮಾಧಿಯಲ್ಲಿನ ರೆಸ್ಟೋರೆಂಟ್, ಇವೆಲ್ಲವೂ ಭಾರತದಲ್ಲೇ ಇವೆ

First Published | Nov 1, 2022, 3:36 PM IST

ಒಂದೆಡೆ ಅಸ್ಥಿಪಂಜರಗಳು ಸರೋವರದಲ್ಲಿ ಕಂಡುಬರುತ್ತವೆ, ಮತ್ತೊಂದೆಡೆ ಸಮಾಧಿಯ ಬಳಿ ಕುಳಿತು ತಿಂಡಿ ತಿನ್ನೋ ರೆಸ್ಟೋರೆಂಟ್ ಇದೆ. ಇವೆಲ್ಲವೂ ನಮ್ಮಲಿಯೇ ಇವೆ. ಅಂದರೆ, ಅಂತಹ ಕೆಲವು ವಿಚಿತ್ರ ಸ್ಥಳಗಳು ಭಾರತದಲ್ಲೇ ಇದೆ. ಅವುಗಳ ಬಗ್ಗೆ ಕೇಳಿದ್ರೆ ಒಮ್ಮೆ ವಿಚಿತ್ರ ಅನಿಸುತ್ತೆ, ಆದರೆ ಇವು ಭಾರತದಲ್ಲಿ ಕಂಡು ಬರುವಂತಹ, ದೇಶ ವಿದೇಶಗಳ ಜನರ ಮನಸೂರೆಗೊಂಡಂತಹ ಅದ್ಭುತ ತಾಣಗಳು, ಬನ್ನಿ ಅವುಗಳ ಬಗ್ಗೆ ತಿಳಿಯೋಣ….

ಭಾರತ ಭವ್ಯವಾದ ಪರ್ವತಗಳು, ಸೊಂಪಾದ ಹಸಿರು ಸಿರಿಗಳು, ಭವ್ಯವಾದ ದೇವಾಲಯಗಳು, ಶ್ರೀಮಂತ ಸಂಸ್ಕೃತಿ (rich culture) ಮತ್ತು ಹೆಚ್ಚಿನವುಗಳಿಂದ ಸಮೃದ್ಧವಾಗಿದೆ. ಆದರೆ ಇವುಗಳಷ್ಟೇ ಅಲ್ಲ ಭಾರತ. ಇಲ್ಲಿ ಕೆಲವು ವಿಶಿಷ್ಟ ಸ್ಥಳಗಳಿವೆ, ಅವು ತಮ್ಮ ಚಮತ್ಕಾರಿ ಮತ್ತು ಆಸಕ್ತಿದಾಯಕ ಸಂಸ್ಕೃತಿಗೆ ಹೆಸರುವಾಸಿಯಾಗಿವೆ. ಭಾರತದ ಆ ವಿಶಿಷ್ಟ ಸ್ಥಳಗಳ ಬಗ್ಗೆ ತಿಳಿಸುತ್ತೇವೆ, ಅದರ ಬಗ್ಗೆ ಕೇಳಿದ್ರೆ ನೀವು ಖಂಡಿತವಾಗಿಯೂ ಅವುಗಳನ್ನು ಒಮ್ಮೆ ನೋಡಬೇಕೆಂದು ಎಂದು ಅಂದುಕೊಳ್ಳೋದು ಖಚಿತ.

ರೂಪ್ಕುಂಡ್, ಉತ್ತರಾಖಂಡ್ (roopkund lake, Uttarkhand): 
ಉತ್ತರಾಖಂಡದ ರೂಪ್ಕುಂಡ್ ಒಂದು ಹಿಮನದಿ ಸರೋವರವಾಗಿದೆ. ಸರೋವರವು 600 ರಿಂದ 800 ಮಾನವ ಅಸ್ಥಿಪಂಜರಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಮತ್ತು ಈ ಅಸ್ಥಿಪಂಜರಗಳು 9 ನೇ ಶತಮಾನದಲ್ಲಿ ಕೊಲ್ಲಲ್ಪಟ್ಟ ಕನ್ನೌಜ್ ರಾಜ ಮತ್ತು ಅವನ ಪರಿವಾರದ ಅವಶೇಷಗಳು ಎನ್ನಲಾಗಿದೆ. ಸರೋವರಕ್ಕೆ ಭೇಟಿ ನೀಡಿದಾಗ ನೀವು ಅಸ್ಥಿಪಂಜರವನ್ನು ನೋಡಬಹುದು.

Tap to resize

ನ್ಯೂ ಲಕ್ಕಿ ರೆಸ್ಟೋರೆಂಟ್, ಗುಜರಾತ್ 
ಗುಜರಾತ್ ನ ನ್ಯೂ ಲಕ್ಕಿ ರೆಸ್ಟೊರೆಂಟ್ (graveyard restaurant) ಹಳೆಯ ಮುಸ್ಲಿಂ ಸ್ಮಶಾನದ ಮೇಲೆ ನಿರ್ಮಿಸಲಾಗಿದೆ. ಇಷ್ಟೇ ಅಲ್ಲ, ರೆಸ್ಟೋರೆಂಟ್ ಒಳಗೆ ಶವಪೆಟ್ಟಿಗೆಯೂ ಇದೆ, ಅದರ ಸುತ್ತಲೂ ಕಬ್ಬಿಣದ ಸರಳುಗಳಿವೆ. ಗೋರಿಗಳ ಬಳಿ ಗ್ರಾಹಕರಿಗೆ ಆಹಾರ ನೀಡಲಾಗುತ್ತದೆ ಮತ್ತು ಪ್ರತಿದಿನ ತಾಜಾ ಹೂವುಗಳನ್ನು ನೀಡಲಾಗುತ್ತಂತೆ. ಈ ರೆಸ್ಟೋರೆಂಟ್ ನಲ್ಲಿ ಆಹಾರ ತಿನ್ನೋದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಲೋಕ್ತಾಕ್ ಸರೋವರ, ಮಣಿಪುರ - 
ಮಣಿಪುರದ ಲೋಕ್ತಾಕ್ ಸರೋವರವನ್ನು ವಿಶ್ವದ ತೇಲುವ ಸರೋವರ (floating lake) ಎಂದು ಕರೆಯಲಾಗುತ್ತದೆ. ಇದು ಭಾರತದ ಅತ್ಯಂತ ವಿಶಿಷ್ಟ ಸ್ಥಳಗಳಲ್ಲಿ ಒಂದಾಗಿದೆ, ಇದು ಈಶಾನ್ಯದ ಅತಿದೊಡ್ಡ ಸಿಹಿನೀರಿನ ಸರೋವರವಾಗಿಯೂ ಪ್ರಸಿದ್ಧವಾಗಿದೆ. ಈ ಸುಂದರ ತಾಣವನ್ನು ನೋಡಲು ದೇಶ ವಿದೇಶದಿಂದ ಜನ ಬರುತ್ತಾರೆ.

ಬೀಬಿ ಕಾ ಮಕ್ಬಾರಾ, ಔರಂಗಾಬಾದ್ -  
ಭಾರತದಲ್ಲಿ ತಾಜ್ ಮಹಲ್ ನ ಪ್ರತಿಯೂ ಇದೆ ಎಂದು ನಿಮಗೆ ತಿಳಿದಿದೆಯೇ? ಔರಂಗಾಬಾದ್ ನಲ್ಲಿರುವ ಬೀಬಿಯ ಸಮಾಧಿಯನ್ನು (Bibi Ka Maqbara) 17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನು ತನ್ನ ಹೆಂಡತಿಯ ನೆನಪಿಗಾಗಿ ನಿರ್ಮಿಸಿದನು. ಇದು ನೋಡಲು ತಾಜ್ ಮಹಲ್ ನಂತೆಯೇ ಇದೆ. ಆದರೆ ತಾಜ್ ಮಹಲ್ ನಷ್ಟು ವಿಶಾಲವಾಗಿಲ್ಲ, ಸಣ್ಣದಾಗಿದೆ.

ಮ್ಯಾಗ್ನೆಟಿಕ್ ಹಿಲ್, ಲಡಾಖ್ - 
ಮ್ಯಾಗ್ನೆಟಿಕ್ ಹಿಲ್ ನಲ್ಲಿ (magnetic hill) ಎಂಜಿನ್ ಆಫ್ ಮಾಡಿದಾಗಲೂ ಸಹ ಕಾರು ಮೇಲ್ಮುಖವಾಗಿ ಚಲಿಸುವುದನ್ನು ನೀವು ನೋಡಬಹುದಾಗಿದೆ. ಆದರೆ ಇದು ಕೇವಲ ಕೌತಕದ ಸ್ಥಳ ಮಾತ್ರವಲ್ಲ, ಇಲ್ಲಿನ ಸುಂದರ ಪ್ರಕೃತಿ ನಿಮ್ಮ ಕಣ್ಣುಗಳಿಗೆ ಹಬ್ಬವನ್ನು ನೀಡೋದು ಖಚಿತ.

ಪುನ್ಸಾರಿ ಗ್ರಾಮ, ಗುಜರಾತ್ - 
ಗುಜರಾತ್ ನ ಪುನ್ಸಾರಿ ಗ್ರಾಮವು ಒಂದು ಪುಟ್ಟ ಗ್ರಾಮವಾಗಿದೆ, ಆದರೆ ಇದರಲ್ಲಿ ನೀವು ನಗರದ ಪ್ರತಿಯೊಂದು ಸೌಲಭ್ಯವನ್ನು ನೋಡಬಹುದು. ಅಲ್ಲಿ ದಿನದ 24 ಗಂಟೆಯೂ ನೀರು ಮತ್ತು ವಿದ್ಯುತ್ ಪೂರೈಕೆ, ವೈಫೈ ಅಥವಾ ಸಿಸಿಟಿವಿ ಸೌಲಭ್ಯ ಲಭ್ಯವಿದೆ. ಇಲ್ಲಿ ಎಲ್ಲವೂ ಒಂದು ನಗರದಲ್ಲಿ ಇದ್ದಂತಹ ಸೌಲಭ್ಯವನ್ನು ಕಾಣಬಹುದು..

Latest Videos

click me!