ಪುಣೆಯ ರಸ್ತೆ ಬದಿಯಲ್ಲಿ ಸಾವಿರಾರು ಕೋಸ್ಮಸ್: ಇಳಿದು ಸೆಲ್ಫಿ ಕ್ಲಿಕ್ಕಿಸ್ತಿದ್ದಾರೆ ಜನ

First Published | Oct 7, 2021, 3:12 PM IST
  • ಎಲ್ಲ ಕಡೆ ಕೋಸ್ಮಸ್ ಹೂಗಳ ಸಂಭ್ರಮ
  • ವಸಂತಗಾಲ ಸಮೀಪಿಸಿದಂತೆ ಪುಣೆಯ ರಸ್ತೆಗಳೆಲ್ಲ ಕೇಸರಿಮಯ
  • ರಸ್ತೆಯ ಇಕ್ಕೆಲಗಳಲ್ಲೂ ಅಂದ ಚಂದ ಕೋಸ್ಮಸ್ ಹೂಗಳ ಸೌಂದರ್ಯ

ವಸಂತಕಾಲ ಸಮೀಪಿಸುತ್ತಿರುವಾಗ ಪುಣೆಯ(Pune) ರಸ್ತೆಗಳಲ್ಲಿ ಚಂದದ ಕೋಸ್ಮಸ್ ಹೂಗಳು ಅರಳಿ ನಿಂತಿವೆ. ಎಲ್ಲೋ ಒಂದೆರಡು ಹೂವಲ್ಲ ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರ ಬರೀ ಕೋಸ್ಮಸ್(Cosmos) ಹೂಗಳದೇ ಸೌಂದರ್ಯ

ಇತ್ತೀಚೆಗೆ ನೀಲಕುರುಂಜಿ ಹೂಗಳ ಅರಳಿ ನಿಂತು ಮಡಿಕೇರಿಯ ಮಂದಾಲಪಟ್ಟಿ ಬೆಟ್ಟವೇ ನೀಲಮಯವಾಗಿತ್ತು. ಈಗ ಪುಣೆಯ ಸರದಿ. ಹೌದು, ಪುಣೆಯ ರಸ್ತೆಗಳಲ್ಲಿ ಈಗ ಪ್ರಯಾಣಿಸುವ ಮಜಾವೇ ಬೇರೆ.

Tap to resize

ಹೂವುಗಳಿಂದ ಆವೃತವಾದ ಬೆಟ್ಟಗಳು ಅದ್ಭುತ ದೃಶ್ಯವಾಗಿದ್ದು, ಇದು ನೋಡುತ್ತಲೇ ಇದ್ದು ಬಿಡೋಣ ಎನಿಸುವ ತುಂಬ ಸುಂದರ ದೃಶ್ಯ. ಕೆಲವೊಮ್ಮೆ ಪ್ರಕೃತಿ ಜನರನ್ನು ಅಚ್ಚರಿ ಮೂಡಿಸುತ್ತದೆ.

ಚಂದದ ಹೂವಿನ ಚಾದರವನ್ನು ಹೊದ್ದುಕೊಂಡು ಕೂರುವ ನಿಸರ್ಗ ಸೌಂದರ್ಯ ಯಾರಿಗಿಷ್ಟವಿಲ್ಲ ಹೇಳಿ ? ಬೇಡವೆಂದರೂ ಅದನ್ನು ನೋಡುವುದಕ್ಕಾದರೂ ಒಮ್ಮೆ ಅತ್ತ ಹೋಗೋಣ ಎನಿಸದಿರದು ಅಲ್ವಾ ? ಸದ್ಯ ಪುಣೆಯದ್ದು ಇದೇ ದೃಶ್ಯ.

ಅಂತಹ ಒಂದು ಉದಾಹರಣೆ ಪುಣೆಯಿಂದ ಬಂದಿದ್ದು, ಅಲ್ಲಿ ಮಾನಸ ಸರೋವರದಿಂದ ಮುಲ್ಶಿ, ಲವಾಸ ಮತ್ತು ತಮ್ಹಿನಿ ಘಾಟ್ ವರೆಗಿನ ಪ್ರಕೃತಿಯ ಭಾಗವನ್ನು ನೋಡಿದಷ್ಟು ಸಾಲದು ಎಂಬಂತಿದೆ. ಅಲ್ಲಿನ ಅಂದ ಚಂದದ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ,

ಸಾವಿರಾರು ಹಳದಿ ಕೋಸ್ಮಸ್ ಹೂವುಗಳು ಹೊಲಗಳಲ್ಲಿ, ಬೆಟ್ಟಗಳಲ್ಲಿ, ಕಣಿವೆಗಳಲ್ಲಿ, ರಸ್ತೆಬದಿಯಲ್ಲಿ ಅರಳಿದೆ. ಕಿತ್ತಳೆ ಬಣ್ಣದ ಹೂವುಗಳು ಮಾನಸ್ ಸರೋವರದಿಂದ ಮುಲ್ಶಿ, ಲವಾಸ ಮತ್ತು ತಮ್ಹಿನಿ ಘಾಟ್ ಕಡೆಗೆ ಅರಳುತ್ತವೆ.

12 ವರ್ಷಕ್ಕೊಮ್ಮೆ ಅರಳೋ ಹೂವಿದು, ದೃಷ್ಟಿ ಹಾಯಿಸಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ!

ಕಾಸ್ಮೋಸ್ ಹೂವು ಅವರ ಕಾಂಪೋಸಿಟೇ ಅಥವಾ ಆಸ್ಟೇರೇಸಿ ಕುಟುಂಬದ ಸಸ್ಯ. ಸೂರ್ಯಕಾಂತಿಗಳು, ಮಾರಿಗೋಲ್ಡ್ಸ್, ಯಾರೋವ್, ಡೈಸಿಗಳು, ಜಿನ್ನಿಯಾಗಳು, ಲೆಟಿಸ್ ಮತ್ತು ದಂಡೇಲಿಯನ್ಗಳು ಇದೇ ಜಾತಿಯವು.

ಸುಲಭವಾಗಿ ಬೆಳೆಯಬಹುದಾದ ಹೂವುಗಳು ನಿಮ್ಮ ತೋಟದಲ್ಲಿ ಅಥವಾ ಒಂದು ಮಡಕೆಯಲ್ಲಿ ಸಂಪೂರ್ಣ ಸೂರ್ಯನ ಬೆಳಕಿನಲ್ಲಿ ಆರಾಮವಾಗಿ ಬೆಳೆಯಬಲ್ಲವು. ಇವು ವಸಂತಕಾಲದಿಂದ ಶರತ್ಕಾಲದವರೆಗೆ ಬೆಳೆಯುತ್ತವೆ.

ಆಶ್ಚರ್ಯವೇನಿಲ್ಲ, ಕಾಸ್ಮೋಸ್ ಎಂಬ ಹೆಸರು ಗ್ರೀಕ್ ಪದ 'ಕಾಸ್ಮೋಸ್' ನಿಂದ ಬಂದಿದೆ. ಇದರರ್ಥ 'ಸುಂದರ'. ನಿಮಗೂ ನೋಡಬೇಕೆನಿಸದರೆ ಹಾಗೇ ಪುಣೆಯ ರೋಡಿನಲ್ಲೊಮ್ಮೆ ಸುತ್ತಿ ಬನ್ನಿ

Latest Videos

click me!