ಹಿಲ್ ಸ್ಟೇಷನ್ ಟ್ರಾವೆಲ್ ಮಾಡೋವಾಗ ಇವನ್ನು ಮರೀಬೇಡಿ

First Published Jun 22, 2022, 5:02 PM IST

ಹೆಚ್ಚಿನ ಜನರು ಪರ್ವತಗಳ ಕಡೆ ಟ್ರಾವೆಲ್ (travel) ಮಾಡಲು ಜನರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ (Trend) ಹೆಚ್ಚಾಗಿದೆ. ಆದರೆ ಪ್ರರ್ವತದ ಕಡೆಗೆ ಟ್ರೆಕ್ ಮಾಡಲು ಹೊರಟಾಗ ಯೋಜನೆ ರೂಪಿಸದೇ ಹೋಗೋದು ತಪ್ಪು. ಆದರೆ ಪರ್ವತಗಳ ಕಡೆಗೆ ಪಯಣಿಸುವ ಮುನ್ನ ಯೋಜಿಸುವುದು ಬಹಳ ಮುಖ್ಯ. ನೀವು ಪ್ಲ್ಯಾನ್ ಮಾಡ್ಕೊಂಡು ಪರ್ವತಗಳಿಗೆ ಪ್ರಯಾಣಿಸಿದರೆ, ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. 

ನಡಿಗೆಯ ವಿಷಯ ಬಂದಾಗ, ಹೆಚ್ಚಿನ ಜನರ ಮೊದಲ ಆಯ್ಕೆ ಪರ್ವತ ಪ್ರದೇಶ. ಇಲ್ಲಿನ ಹಸಿರು ಪ್ರಕೃತಿ, ಸುಂದರ ತಂಪಾದ ಹವಾಮಾನ ಮತ್ತು ಶಾಂತಿ ಜನರನ್ನು ಪರ್ವತಗಳತ್ತ (mountain) ಆಕರ್ಷಿಸುತ್ತದೆ. ನಗರಗಳಲ್ಲಿ ಶಾಖ ಹೆಚ್ಚಾದಂತೆ, ಜನರು ಪರ್ವತಗಳ ಕಡೆಗೆ ಚಲಿಸಲು ಪ್ರಾರಂಭಿಸುತ್ತಾರೆ. 

ಗಿರಿಧಾಮಗಳಿಗೆ ಹೋಗುವ ಮೊದಲು ಜನರ ಮನಸ್ಸಿನಲ್ಲಿ ಅನೇಕ ವಿಷಯಗಳ ಬಗ್ಗೆ ಪ್ರಶ್ನೆ ಮೂಡುತ್ತೆ. ಹೆಚ್ಚಿನ ಜನರು ಪರ್ವತಗಳಿಗೆ ಹೋಗುವ ಮೊದಲು ಸಾಕಷ್ಟು ಸಿದ್ಧತೆಗಳನ್ನು ಮಾಡುತ್ತಾರೆ. ಆದರೆ ಸರಿಯಾಗಿ ಪ್ಲ್ಯಾನ್ ಮಾಡೋದು ಹಲವರಿಗೆ ತಿಳಿದಿರೋದಿಲ್ಲ. ಹಾಗಿದ್ರೆ ಬನ್ನಿ ಟ್ರೆಕ್ಕಿಂಗ್ (Trekking) ಹೋಗುವ ಮೊದಲು ಕೆಲವು ವಿಷಯಗಳನ್ನು ತಿಳ್ಕೊಳ್ಳೋದು ಬಹಳ ಮುಖ್ಯ. 

ಪರ್ವತಗಳಿಗೆ ಟ್ರೆಕ್ಕಿಂಗ್ (trekking) ಹೋಗುವಾಗ ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿ

ನಗರಗಳಂತೆ ಪರ್ವತಗಳಲ್ಲಿ ಕಾರುಗಳು ಎಲ್ಲೆಡೆ ಹೋಗಲು ಸಾಧ್ಯವಿಲ್ಲ. ನೀವು ಗಿರಿಧಾಮಕ್ಕೆ ಹೋಗಲು ಯೋಜಿಸುತ್ತಿದ್ದರೆ, ನೀವು ಎತ್ತರಕ್ಕೆ ಹೆಚ್ಚು ಏರಬೇಕು ಅನ್ನೋದು ಗೊತ್ತು ತಾನೆ? ಅದಕ್ಕಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ.  

ಪರ್ವತ ಏರುವಾಗ ಅನೇಕ ಜನರು ತಮ್ಮ ಪಾದಗಳಲ್ಲಿ ನೋವಿನಿಂದ ಬಳಲುತ್ತಿರುತ್ತಾರೆ. ಈ ರೀತಿ ನಿಮಗೂ ಆಗಬಾರದು ಎಂದಾದರೆ, ಟ್ರೆಕ್ಕಿಂಗ್ ಹೋಗುವ ಕೆಲವು ದಿನಗಳ ಮೊದಲು ನಡೆದಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದರಿಂದ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ನೀವು ಟ್ರೆಕ್ಕಿಂಗ್ ಹೋಗುವಾಗ ಯಾವಾಗಲೂ ನಿಮ್ಮೊಂದಿಗೆ ಒಂದು ಸಣ್ಣ ಹ್ಯಾಂಡ್ ಬ್ಯಾಗ್  (Hand Bag) ಕೊಂಡೊಯ್ಯಿರಿ. ನೀವು ಎಲ್ಲಾದರೂ ವಾಯು ವಿಹಾರಕ್ಕೆ ಹೋಗುವಾಗ ಭಾರವಾದ ಸಾಮಾನುಗಳನ್ನು ಒಯ್ಯಬೇಕಾಗಿಲ್ಲ. ಈ ಸಣ್ಣ ಬ್ಯಾಗಿನಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಇಡಬಹುದು.
 

ನೀವು ಗಿರಿಧಾಮಕ್ಕೆ ಭೇಟಿ ನೀಡಲು ಹೊರಟಿದ್ದರೆ, ಆಗ ಕೆಲವು ಹೆಚ್ಚುವರಿ ವಸ್ತುಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. ಉದಾಹರಣೆಗೆ ಸಾಕ್ಸ್, ಸ್ವೆಟರ್ (Sweater) ಅಥವಾ ತಿನ್ನಲು ಮತ್ತು ಕುಡಿಯಲು ಕೆಲವು ವಸ್ತುಗಳನ್ನು ಮತ್ತು ಫಸ್ಟ್ ಏಡ್ ಬಾಕ್ಸ್ ಇಟ್ಟುಕೊಳ್ಳೋದು ಉತ್ತಮ. 

ಟ್ರೆಕ್ಕಿಂಗ್ (trekking) ಹೋಗುವಾಗ ಹೀಲ್ಸ್ ಅಥವಾ ಫ್ಲ್ಯಾಟ್ ಚಪ್ಪಲಿ ಒಯ್ಯುವ ತಪ್ಪನ್ನು ಮಾಡಬೇಡಿ. ಪರ್ವತಗಳಿಗೆ (Mountain) ಹೋಗುವ ಮೊದಲು ಉತ್ತಮ ಗುಣಮಟ್ಟದ ಸ್ಪೋರ್ಟ್ಸ್ ಶೂಗಳನ್ನು (sports shies) ಖರೀದಿಸಿ.

ಪರ್ವತಗಳ ಸುರುಳಿಯಾಕಾರದ ಹಾದಿಗಳಲ್ಲಿನ ಹೆಚ್ಚಿನ ಜನರು ವಾಂತಿಯ ಸಮಸ್ಯೆ (vomiting problem) ಎದುರಿಸುತ್ತಾರೆ. ಆದ್ದರಿಂದ ನಿಮ್ಮೊಂದಿಗೆ ವಾಂತಿ ಔಷಧಿಗಳನ್ನು ತೆಗೆದುಕೊಳ್ಳಲು ಮರೆಯಬೇಡಿ. ಇದು ನಿಮಗೆ ವಾಂತಿ ಬಾರದಂತೆ ಕಾಪಾಡಲು ಸಹಾಯ ಮಾಡುತ್ತೆ.

ನೀವು ಪರ್ವತಗಳ ಮೇಲೆ ಟ್ರೆಕ್ಕಿಂಗ್ (trekking) ಮಾಡಲು ಹೋಗುತ್ತಿದ್ದರೆ, ಉತ್ತಮ ಕಂಪನಿಯ ಟ್ರೆಕ್ಕಿಂಗ್ ಬ್ಯಾಗ್ ತೆಗೆದುಕೊಳ್ಳಿ. ಇದರಿಂದ ನೀವು ಸಾಮಾನುಗಳನ್ನು ಎತ್ತಿಕೊಂಡು ನಡೆದಾಗ ಬೆನ್ನು ನೋವಾಗೋದಿಲ್ಲ.

click me!